News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

81% ಬ್ರಾಡ್ ಗೇಜ್ ನೆಟ್‌ವರ್ಕ್‌ ವಿದ್ಯುದ್ದೀಕರಣಗೊಳಿಸಿದೆ ರೈಲ್ವೆ

ನವದೆಹಲಿ: ಭಾರತೀಯ ರೈಲ್ವೇಯು ದೇಶದ ಒಟ್ಟು ಬ್ರಾಡ್ ಗೇಜ್ ನೆಟ್‌ವರ್ಕ್‌ನ ಶೇಕಡಾ 81ರಷ್ಟನ್ನು ವಿದ್ಯುದ್ದೀಕರಣಗೊಳಿಸುವ ಮೂಲಕ ಮಹತ್ವದ ಸಾಧನೆ ಮಾಡಿದೆ.

ನೆಟ್‌ವರ್ಕ್‌ನ 65 ಸಾವಿರಕ್ಕೂ ಹೆಚ್ಚು ರೂಟ್ ಕಿಲೋಮೀಟರ್‌ಗಳಲ್ಲಿ (ಆರ್‌ಕೆಎಂ) ಕಳೆದ ತಿಂಗಳವರೆಗೆ 53,000ಕ್ಕೂ ಹೆಚ್ಚು ರೂಟ್ ಕಿಲೋಮೀಟರ್‌ಗಳನ್ನು ವಿದ್ಯುದ್ದೀಕರಿಸಲಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ, ಸೆಪ್ಟೆಂಬರ್‌ವರೆಗೆ, 2021-22ರ ಅವಧಿಯಲ್ಲಿನ 562 RKM ಗಳಿಗೆ ಹೋಲಿಸಿದರೆ 851 RKM ಗಳನ್ನು ವಿದ್ಯುದ್ದೀಕರಿಸಲಾಗಿದೆ.

ಈ ಆರ್ಥಿಕ ವರ್ಷದಲ್ಲಿ ವಿದ್ಯುದ್ದೀಕರಣಕ್ಕೆ ನಿಗದಿಪಡಿಸಲಾದ ಗುರಿ 6,500 ಆರ್‌ಕೆಎಂಗಳು.

ಭಾರತೀಯ ರೈಲ್ವೇ ತನ್ನ ಸಂಪೂರ್ಣ ಬ್ರಾಡ್ ಗೇಜ್ ಜಾಲದ ವಿದ್ಯುದ್ದೀಕರಣದ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡಿದೆ. ಇದರಿಂದ ಉತ್ತಮ ಇಂಧನ ಬಳಕೆ, ಇಂಧನ ವೆಚ್ಚವನ್ನು ಕಡಿಮೆಯಾಗಲಿದೆ ಮತ್ತು ಅಮೂಲ್ಯವಾದ ವಿದೇಶಿ ವಿನಿಮಯವನ್ನು ಉಳಿಸಲು ಸಾಧ್ಯವಾಗಲಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top