News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎಲೆಕ್ಟ್ರಿಕ್‌ ವೆಹ್ಹಿಕಲ್ ಮಾರಾಟದಲ್ಲಿ 173% ಹೆಚ್ಚಳ

ನವದೆಹಲಿ: ಸೆಪ್ಟೆಂಬರ್ 2022 ರಲ್ಲಿ ಒಟ್ಟಾರೆ ಎಲೆಕ್ಟ್ರಿಕ್‌ ವೆಹ್ಹಿಕಲ್ ಮಾರಾಟವು  6.2 ಪ್ರತಿಶತದಷ್ಟು ಮಾಸಿಕ ಹೆಚ್ಚಳವನ್ನು ಗುರುತಿಸಿದ್ದು, 93,605 ಯುನಿಟ್‌ ಮಾರಾಟವಾಗಿದೆ ಮತ್ತು ವರ್ಷದಿಂದ ವರ್ಷಕ್ಕೆ 173 ಶೇಕಡಾ ಜಿಗಿತ ಕಂಡಿದೆ.

ವಾಹನ್ ಮಾಹಿತಿಯ ಪ್ರಕಾರ, ಒಟ್ಟಾರೆ ಎಲೆಕ್ಟ್ರಿಕ್‌ ವೆಹ್ಹಿಕಲ್ ಮಾರಾಟದ ಬೆಳವಣಿಗೆಗೆ ಮುಖ್ಯವಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮತ್ತು ಮತ್ತು ಪ್ರಯಾಣಿಕ ಎಲೆಕ್ಟ್ರಿಕ್ ವಾಹನಗಳು ಮಹತ್ವದ ಕೊಡುಗೆ ನೀಡಿವೆ. ಇವುಗಳು ಈ ತಿಂಗಳ ಒಟ್ಟು ನೋಂದಣಿಗಳಲ್ಲಿ 92.35 ಪ್ರತಿಶತವನ್ನು ಹೊಂದಿವೆ.

ಸೆಪ್ಟೆಂಬರ್ 2022 ರಲ್ಲಿ ದೇಶದಲ್ಲಿ ಒಟ್ಟಾರೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಚಿಲ್ಲರೆ ಮಾರಾಟವು 52,999 ಯುನಿಟ್‌ಗಳಷ್ಟಿದ್ದು, 3 ಪ್ರತಿಶತದಷ್ಟು ಮಾಸಿಕ ಹೆಚ್ಚಳವನ್ನು ದಾಖಲಿಸಿದೆ. ನೋಂದಣಿಗಳ ಗ್ರಾಫ್ ಭರವಸೆಯ 220 ಪ್ರತಿಶತ Y-o-Y ಅಧಿಕವನ್ನು ಸೂಚಿಸುತ್ತದೆ. ಟಾಪ್ 10ರಲ್ಲಿ ಓಲಾ ಪೋಲ್ ಅಗ್ರ ಸ್ಥಾನವನ್ನು ಪಡೆದಿದೆ ಮತ್ತು ಓಕಿನಾವಾ ಮತ್ತು ಹೀರೋ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ವಾಹನ್ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 2022 ರಲ್ಲಿ ಎಲೆಕ್ಟ್ರಿಕ್ ಕಾರುಗಳ ಒಟ್ಟು ಮಾರಾಟವು 4,239 ಯುನಿಟ್‌ಗಳಷ್ಟಿತು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top