ನವದೆಹಲಿ: ಈ ವರ್ಷದ ಡಿಸೆಂಬರ್‌ನಲ್ಲಿ ಆರಂಭಿಕ ತರಬೇತಿಗಾಗಿ 3,000 ಅಗ್ನಿವೀರ್ ವಾಯುಗಳನ್ನು ಸೇರ್ಪಡೆಗೊಳಿಸುತ್ತೇವೆ ಎಂದು ವಾಯುಸೇನಾ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಮುಖ್ಯಸ್ಥ ವಿವೇಕ್ ರಾಮ್ ಚೌಧುರಿ ಹೇಳಿದ್ದಾರೆ.
ಅಲ್ಲದೇ ಮುಂದಿನ ವರ್ಷ ಮಹಿಳಾ ಅಗ್ನಿವೀರರನ್ನು ಕೂಡ ವಾಯುಸೇನೆಗೆ ಸೇರ್ಪಡೆಗೊಳಿಸಲಾಗುವುದು ಎಂದಿದ್ದಾರೆ.
ಭಾರತೀಯ ವಾಯುಪಡೆ ಇಂದು 90 ವರ್ಷಗಳ ಶ್ರೇಷ್ಠತೆಯನ್ನು ಆಚರಿಸುತ್ತಿದೆ ಮತ್ತು ಚಂಡೀಗಢದಲ್ಲಿ ಬ್ಯಾಂಡ್ ಮಾರ್ಚ್ ಮತ್ತು ಮೆರವಣಿಗೆಯೊಂದಿಗೆ ತನ್ನ ಆಚರಣೆಯನ್ನು ಪ್ರಾರಂಭಿಸಿದೆ. ವಿಶೇಷ ಏರ್ ಫ್ಲೈಪಾಸ್ಟ್ ಮಧ್ಯಾಹ್ನ 2.45 ರ ಸುಮಾರಿಗೆ ಸುಖ್ನಾ ಸರೋವರದ ಮೇಲೆ ಪ್ರಾರಂಭವಾಗಿದೆ.
ಈ ವೇಳೆ ಮಾತನಾಡಿದ ಚೌಧುರಿ, “ಅಗ್ನಿಪಥ್ ಯೋಜನೆಯ ಮೂಲಕ ಭಾರತೀಯ ವಾಯುಪಡೆಗೆ ವಾಯು ಯೋಧರನ್ನು ಸೇರ್ಪಡೆಗೊಳಿಸುವುದು ನಮಗೆಲ್ಲರಿಗೂ ಸವಾಲಾಗಿದೆ. ಆದರೆ ಅದಕ್ಕಿಂತ ಮುಖ್ಯವಾಗಿ, ಭಾರತದ ಯುವಕರ ಸಾಮರ್ಥ್ಯವನ್ನು ಬಳಸಿಕೊಳ್ಳಲು ಮತ್ತು ಅದನ್ನು ರಾಷ್ಟ್ರದ ಸೇವೆಗೆ ಅವರನ್ನು ನಿಯೋಜಿಸಲು ಇದು ನಮಗೆ ಒಂದು ಅವಕಾಶವಾಗಿದೆ” ಎಂದಿದ್ದಾರೆ.
ಪ್ರತಿ ಅಗ್ನಿವೀರ್ ಐಎಎಫ್‌ನಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಲು ಸರಿಯಾದ ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ವಾಯುಪಡೆಯು ತಮ್ಮ ಕಾರ್ಯಾಚರಣೆಯ ತರಬೇತಿ ವಿಧಾನವನ್ನು ಬದಲಾಯಿಸಿದೆ ಎಂದಿದ್ದಾರೆ.
“ಈ ವರ್ಷದ ಡಿಸೆಂಬರ್‌ನಲ್ಲಿ ಆರಂಭಿಕ ತರಬೇತಿಗಾಗಿ 3,000 ಅಗ್ನಿವೀರ್ ವಾಯುಗಳನ್ನು ಸೇರ್ಪಡೆಗೊಳಿಸುತ್ತೇವೆ. ಮುಂಬರುವ ವರ್ಷಗಳಲ್ಲಿ ಈ ಸಂಖ್ಯೆ ಹೆಚ್ಚಾಗಲಿದೆ. ಮುಂದಿನ ವರ್ಷದಿಂದ ಮಹಿಳಾ ಅಗ್ನಿವೀರ್‌ಗಳನ್ನು ಸೇರಿಸಲು ನಾವು ಯೋಜಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.