News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಲೆಸ್ ಬಿಲಿಯಾಟ್ಸ್ಕಿ ಮತ್ತು ರಷ್ಯಾ, ಉಕ್ರೇನ್‌ ಸಂಸ್ಥೆಗೆ ನೋಬೆಲ್‌ ಶಾಂತಿ ಪುರಸ್ಕಾರ

ಸ್ಟಾಕ್‌ಹೋಮ್: ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಬೆಲಾರಸ್‌ನ ಮಾನವ ಹಕ್ಕುಗಳ ವಕೀಲ ಅಲೆಸ್ ಬಿಲಿಯಾಟ್ಸ್ಕಿ, ರಷ್ಯಾದ ಮಾನವ ಹಕ್ಕುಗಳ ಸಂಸ್ಥೆ ಮೆಮೋರಿಯಲ್ ಮತ್ತು ಉಕ್ರೇನಿಯನ್ ಮಾನವ ಹಕ್ಕುಗಳ ಸಂಸ್ಥೆ ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್‌ಗೆ ನೀಡಲಾಗಿದೆ.

ರಾಯಲ್ ಸ್ವೀಡಿಷ್ ಅಕಾಡೆಮಿ ಇಂದು ಈ ಘೋಷಣೆ ಮಾಡಿದೆ.

“ನೋಬೆಲ್‌ ಶಾಂತಿ ಪುರಸ್ಕೃತರು ತಮ್ಮ ತಾಯ್ನಾಡಿನಲ್ಲಿ ನಾಗರಿಕ ಸಮಾಜವನ್ನು ಪ್ರತಿನಿಧಿಸುತ್ತಾರೆ. ಅವರು ಅಧಿಕಾರವನ್ನು ಟೀಕಿಸುವ ಮತ್ತು ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಹಕ್ಕನ್ನು ಹಲವು ವರ್ಷಗಳಿಂದ ಪ್ರಚಾರ ಮಾಡಿದ್ದಾರೆ” ಎಂದು ಟ್ವೀಟ್ ತಿಳಿಸಿದೆ.

ಯುದ್ಧ ಅಪರಾಧಗಳು, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಅಧಿಕಾರದ ದುರುಪಯೋಗವನ್ನು ದಾಖಲಿಸಲು ಸಂಸ್ಥೆಗಳು ಅತ್ಯುತ್ತಮ ಪ್ರಯತ್ನವನ್ನು ಮಾಡಿದೆ. ಅವರು ಒಟ್ಟಾಗಿ ಶಾಂತಿ ಮತ್ತು ಪ್ರಜಾಪ್ರಭುತ್ವಕ್ಕಾಗಿ ನಾಗರಿಕ ಸಮಾಜದ ಮಹತ್ವವನ್ನು ಪ್ರದರ್ಶಿಸುತ್ತಾರೆ ಎಂದಿದೆ.

ರಷ್ಯಾದ ಮಾನವ ಹಕ್ಕುಗಳ ಸಂಸ್ಥೆ ಮೆಮೋರಿಯಲ್‌ ಅನ್ನು 1987 ರಲ್ಲಿ ಹಿಂದಿನ ಸೋವಿಯತ್ ಒಕ್ಕೂಟದ ಮಾನವ ಹಕ್ಕುಗಳ ಕಾರ್ಯಕರ್ತರು ಸ್ಥಾಪಿಸಿದರು. ಇದು ಕಮ್ಯುನಿಸ್ಟ್ ಆಡಳಿತದ ದಬ್ಬಾಳಿಕೆಯ ಬಲಿಪಶುಗಳ ಸೇವೆಯಲ್ಲಿ ತೊಡಗಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top