News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇರಾನ್‌ ವಿಮಾನಕ್ಕೆ ಬಾಂಬ್‌ ಬೆದರಿಕೆ: ಕಾರ್ಯಾಚರಣೆಗಿಳಿದಿತ್ತು ಸುಖೋಯ್

ನವದೆಹಲಿ: ಭಾರತೀಯ ವಾಯು ಪ್ರದೇಶದಲ್ಲಿ ಹಾದು ಹೋಗುವ ವೇಳೆ ಬಾಂಬ್ ಬೆದರಿಕೆ ಕರೆಯನ್ನು ಎದುರಿಸಿದ್ದ ಇರಾನ್‌ನ ಮಹನ್ ಏರ್ ಫ್ಲೈಟ್ 81 ವಿಮಾನವು ಚೀನಾದ ಗುವಾಂಗ್‌ಝೌ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿದೆ ಎಂದು ಮೂಲಗಳು ತಿಳಿಸಿವೆ.

ಇರಾನ್‌ನ ಟೆಹ್ರಾನ್‌ನಿಂದ ಹಾರಾಟ ಆರಂಭಿಸಿದ ವಿಮಾನವು ಭಾರತೀಯ ವಾಯುಪ್ರದೇಶದ ಮೂಲಕ ಚೀನಾದ ಕಡೆಗೆ ಹಾರುತ್ತಿತ್ತು. ಈ ವೇಳೆ ಭಾರತೀಯ ಅಧಿಕಾರಿಗಳ ಮೂಲಕ ಬಾಂಬ್ ಬೆದರಿಕೆಯ ಎಚ್ಚರಿಕೆಯನ್ನು ರವಾನಿಸಲಾಗಿತ್ತು. ನಿಗದಿತ ಕಾರ್ಯವಿಧಾನಗಳ ಪ್ರಕಾರ ಭಾರತೀಯ ವಾಯುಪಡೆಯು ತನ್ನ IAF ಸುಖೋಯ್ Su-30MKI ಅನ್ನು ತಕ್ಷಣ ಕಾರ್ಯಾಚರಣೆಗೆ ಇಳಿಸಿತ್ತು.

ATCಯು ಪೈಲಟ್‌ಗಳಿಗೆ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಂತೆ ಸೂಚನೆ ನೀಡಿತ್ತು, ಆದರೆ ಬಳಿಕ ಜೈಪುರ ಅಥವಾ ಚಂಡೀಗಢ ವಿಮಾನ ನಿಲ್ದಾಣಗಳಲ್ಲಿ ಇಳಿಯಲು ವಿನಂತಿಸಿತು. ಆದರೆ ಪೈಲೆಟ್‌ಗಳು ಎರಡೂ ವಿಮಾನ ನಿಲ್ದಾಣಗಳಲ್ಲಿ ಇಳಿಯಲು ನಿರಾಕರಿಸಿ ತಮ್ಮ ಪ್ರಯಾಣವನ್ನು ಮುಂದುವರೆಸಿದರು ಮತ್ತು ನೇರವಾಗಿ ಚೀನಾದಲ್ಲೇ ವಿಮಾನವನ್ನು ಇಳಿಸಿದ್ದಾರೆ. ಸುಖೋಯ್‌ ಈ ವಿಮಾನದ ಪ್ರಯಾಣದುದ್ದಕ್ಕೂ ಭಾರತೀಯ ವಾಯು ಪ್ರದೇಶದಲ್ಲಿ ಕಣ್ಗಾವಲು ಇರಿಸಿತ್ತು.

ಯಾರಿಂದ ಬಾಂಬ್‌ ಬೆದರಿಕೆ ಬಂದಿದೆ ಎಂಬುದನ್ನು ಇದುವರೆಗೆ ಇರಾನ್‌ ವಿಮಾನ ಯಾನ ಸಂಸ್ಥೆ ಮಾಹಿತಿ ಬಹಿರಂಗಪಡಿಸಿಲ್ಲ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top