News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯುವ ಲೇಖಕರಿಗಾಗಿ YUVA 2.0 ಯೋಜನೆಗೆ ಮೋದಿ ಚಾಲನೆ

ನವದೆಹಲಿ: ಯುವ ಲೇಖಕರಿಗೆ ಮಾರ್ಗದರ್ಶನ ನೀಡುವ ಪ್ರಧಾನಮಂತ್ರಿ ಯೋಜನೆ – YUVA 2.0 ಅನ್ನು ನಿನ್ನೆ ಅಕ್ಟೋಬರ್ 2 ರಂದು ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ್ದಾರೆ.

ಓದುವುದು, ಬರವಣಿಗೆ ಮತ್ತು ಪುಸ್ತಕ ಸಂಸ್ಕೃತಿಯನ್ನು ದೇಶದಲ್ಲಿ ಉತ್ತೇಜಿಸುವ ಸಲುವಾಗಿ ಯೋಜನೆಯನ್ನು ಪ್ರಾರಂಭಿಸಲಾಗಿದೆ.

22 ವಿವಿಧ ಭಾರತೀಯ ಭಾಷೆಗಳು ಮತ್ತು ಇಂಗ್ಲಿಷ್‌ನಲ್ಲಿ ಯುವ ಮತ್ತು ಉದಯೋನ್ಮುಖ ಲೇಖಕರಿಂದ ದೊಡ್ಡ ಪ್ರಮಾಣದ ಭಾಗವಹಿಸುವಿಕೆಯೊಂದಿಗೆ YUVAದ ಮೊದಲ ಆವೃತ್ತಿಯು ಯಶಸ್ಸನ್ನು ಕಂಡಿತ್ತು. ಅದೇ ದೃಷ್ಟಿಕೋನದೊಂದಿಗೆ YUVA 2.0 ಅನ್ನು ಪ್ರಾರಂಭಿಸಲಾಗಿದೆ.

ಯುವಾ 2.0 (ಯುವ, ಮುಂಬರುವ ಮತ್ತು ಬಹುಮುಖ ಲೇಖಕರು) ಯೋಜನೆಯು ಯುವಜನರನ್ನು ಭಾರತದ ಪ್ರಜಾಪ್ರಭುತ್ವವನ್ನು ಅರ್ಥಮಾಡಿಕೊಳ್ಳಲು ಮತ್ತು ಪ್ರಶಂಸಿಸಲು ಉತ್ತೇಜಿಸುವ ಪ್ರಧಾನ ಮಂತ್ರಿಯವರ ದೃಷ್ಟಿಗೆ ಅನುಗುಣವಾಗಿದೆ ಎಂದು ಶಿಕ್ಷಣ ಸಚಿವಾಲಯ ಹೇಳಿದೆ.

ಭಾರತೀಯ ಪರಂಪರೆ, ಸಂಸ್ಕೃತಿ ಮತ್ತು ಜ್ಞಾನ ವ್ಯವಸ್ಥೆಯನ್ನು ಉತ್ತೇಜಿಸಲು ಬರೆಯುವ ಬರಹಗಾರರ ವಲಯವನ್ನು ಅನ್ನು ಅಭಿವೃದ್ಧಿಪಡಿಸಲು ಇದು ಸಹಾಯ ಮಾಡುತ್ತದೆ.

ಈ ವರ್ಷ 2ನೇ ಅಕ್ಟೋಬರ್‌ನಿಂದ 30ನೇ ನವೆಂಬರ್‌ವರೆಗೆ www.mygov.in  ಮೂಲಕ ನಡೆಸಲಾಗುವ ಅಖಿಲ ಭಾರತ ಸ್ಪರ್ಧೆಯ ಮೂಲಕ ಒಟ್ಟು 75 ಲೇಖಕರನ್ನು ಆಯ್ಕೆ ಮಾಡಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಮುಂದಿನ ವರ್ಷ ಫೆಬ್ರವರಿ 28 ರಂದು ವಿಜೇತರನ್ನು ಘೋಷಿಸಲಾಗುತ್ತದೆ. ಯುವ ಲೇಖಕರು 2023ರ ಮಾರ್ಚ್ 1 ರಿಂದ 31ನೇ ಆಗಸ್ಟ್ ವರೆಗೆ ಪ್ರಖ್ಯಾತ ಲೇಖಕರು ಮತ್ತು ಮಾರ್ಗದರ್ಶಕರಿಂದ ತರಬೇತಿ ಪಡೆಯಲಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top