News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅ.31ರವರೆಗೆ ನಡೆಯುವ ʼಫಿಟ್ ಇಂಡಿಯಾ ಫ್ರೀಡಂ ರನ್ 3.0ʼಗೆ ಚಾಲನೆ

ನವದೆಹಲಿ: ಗಾಂಧಿ ಜಯಂತಿಯಂದು ನಿನ್ನೆ ನವದೆಹಲಿಯ ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಫಿಟ್ ಇಂಡಿಯಾ ಫ್ರೀಡಂ ರನ್ 3.0 ಆರಂಭಿಸಲಾಯಿತು.

ಮೂರನೇ ಆವೃತ್ತಿಗೆ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಚಾಲನೆ ನೀಡಿದರು. ಫಿಟ್ ಇಂಡಿಯಾ ಪ್ಲ್ಯಾಗ್‌ನೊಂದಿಗೆ ಜಂಟಿಯಾಗಿ ಇದನ್ನು ಪ್ರಾರಂಭಿಸಲಾಯಿತು. ಇದು ಅಕ್ಟೋಬರ್ 31 ರವರೆಗೆ ನಡೆಯಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ರಿಜಿಜು, 2019 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಫಿಟ್ ಇಂಡಿಯಾ ಆಂದೋಲನವನ್ನು ಪ್ರಾರಂಭಿಸಿದಾಗ, ಅವರ ದೃಷ್ಟಿ ಇಡೀ ರಾಷ್ಟ್ರವನ್ನು ಸದೃಢಗೊಳಿಸುವುದಾಗಿತ್ತು. ಈ ಆಂದೋಲನವು ಭಾರೀ ಯಶಸ್ಸನ್ನು ಗಳಿಸಿದೆ . ಪ್ರತಿಯೊಬ್ಬರೂ ಈಗ ಆಂದೋಲನಕ್ಕೆ ಸೇರಲು ಆಸಕ್ತಿ ಹೊಂದಿದ್ದಾರೆ ಮತ್ತು ಫಿಟ್ ಇಂಡಿಯಾ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರತಿ ದಿನವೂ ಹೆಚ್ಚಿನ ಉತ್ಸಾಹದಿಂದ ಡೌನ್‌ಲೋಡ್ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಅನುರಾಗ್ ಠಾಕೂರ್ ಅವರು ಮಾತನಾಡಿ, ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಪ್ರಧಾನ ಮಂತ್ರಿಯವರ ದೃಷ್ಟಿಗೆ ಜನರು ಕೆಲಸ ಮಾಡುವಂತೆ ಒತ್ತಾಯಿಸಿದರು. ಫಿಟ್ನೆಸ್ ಅನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುವುದು ಆ ಗುರಿಯನ್ನು ತಲುಪುವ ಮೊದಲ ಮಾರ್ಗವಾಗಿದೆ ಎಂದು ಅವರು ಹೇಳಿದರು. ಫ್ರೀಡಂ ರನ್‌ನ ಈ ಆವೃತ್ತಿಯಲ್ಲಿ ದಾಖಲೆ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಒತ್ತಾಯಿಸಿದರು.

ಈ ಯಶಸ್ವಿ ಓಟದ ಮೂರನೇ ಆವೃತ್ತಿಯನ್ನು ಗಾಂಧಿ ಜಯಂತಿಯಂದು ಪ್ರಾರಂಭಿಸಿ ಮತ್ತು ಅಕ್ಟೋಬರ್ 31 ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವಾದ ಏಕತಾ ದಿವಸ್‌ನಂದು ಮುಕ್ತಾಯಗೊಳ್ಳುವುದಕ್ಕಿಂತ ಉತ್ತಮ ಸಂದರ್ಭ ಇನ್ನೊಂದಿಲ್ಲ ಎಂದು ಅವರು ಹೇಳಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top