ನವದೆಹಲಿ: ಮಾದಕ ದ್ರವ್ಯವನ್ನು ಹತ್ತಿಕ್ಕುವ ಸಲುವಾಗಿ ಸಿಬಿಐ ʼಆಪರೇಷನ್ ಗರುಡಾʼ ಪ್ರಾರಂಭಿಸಿದ್ದು. ಈಗಾಗಲೇ ಅಪಾರ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡಿದೆ. ಇದರಡಿ ಮಾದಕವಸ್ತು ಕಳ್ಳಸಾಗಣೆ ಮತ್ತು ಇಂಟರ್ಪೋಲ್ ಮೂಲಕ ಅಂತರರಾಷ್ಟ್ರೀಯ ನ್ಯಾಯವ್ಯಾಪ್ತಿಯಾದ್ಯಂತ ಕಾನೂನು ಜಾರಿ ಕ್ರಮಗಳ ಕ್ಷಿಪ್ರ ವಿನಿಮಯದ ಮೂಲಕ ಅಂತರರಾಷ್ಟ್ರೀಯ ಸಂಪರ್ಕಗಳನ್ನು ಹೊಂದಿರುವ ಮಾದಕವಸ್ತು ಜಾಲಗಳನ್ನು ಕೆಡವುವ ಕಾರ್ಯ ಮಾಡುತ್ತಿದೆ.
ಈ ಜಾಗತಿಕ ಕಾರ್ಯಾಚರಣೆಯನ್ನು ಇಂಟರ್ಪೋಲ್ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದೊಂದಿಗಿನ ನಿಕಟ ಸಮನ್ವಯದಲ್ಲಿ ನಡೆಸಲಾಗುತ್ತದೆ. ಹಿಂದೂ ಮಹಾಸಾಗರ ಪ್ರದೇಶದ ಮೇಲೆ ವಿಶೇಷ ಗಮನಹರಿಸಿ ಕಾರ್ಯಾಚರಿಸಲಾಗುತ್ತಿದೆ. ಅಕ್ರಮ ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ವಸ್ತುಗಳ ಕಳ್ಳಸಾಗಣೆ ಜಾಲವನ್ನು ಕೆಡವಿ ಹಾಕುವ ಪ್ರಯತ್ನವನ್ನು ಈ ಕಾರ್ಯಾಚರಣೆ ಹೊಂದಿದೆ.
ಅಂತಾರಾಷ್ಟ್ರೀಯ ಸಂಪರ್ಕವನ್ನು ಹೊಂದಿರುವ ಮಾದಕವಸ್ತು ಕಳ್ಳಸಾಗಣೆ ಜಾಲಗಳ ವಿರುದ್ಧ ಕ್ರಮಕೈಗೊಳ್ಳಲು ಅಂತಾರಾಷ್ಟ್ರೀಯ ನ್ಯಾಯವ್ಯಾಪ್ತಿಯಾದ್ಯಂತದ ಕಾನೂನು ಜಾರಿ ಸಹಕಾರವನ್ನು ಪಡೆದುಕೊಳ್ಳುತ್ತಿದೆ.
ಸಿಬಿಐ ನೇತೃತ್ವದ ಜಾಗತಿಕ ಕಾರ್ಯಾಚರಣೆ ʼಆಪರೇಷನ್ ಗರುಡಾʼ ಡ್ರಗ್ಸ್ ಹ್ಯಾಂಡ್ಲರ್ಗಳು, ಆಪರೇಟಿವ್ಗಳು, ಉತ್ಪಾದನಾ ವಲಯಗಳು ಮತ್ತು ಬೆಂಬಲ ಅಂಶಗಳ ವಿರುದ್ಧ ಕ್ರಮಕ್ಕಾಗಿ ಅಂತರರಾಷ್ಟ್ರೀಯ ಬೆಂಬಲ ಪಡೆಯಲಿದೆ. CBI ಮತ್ತು NCB ಮಾಹಿತಿ ವಿನಿಮಯ, ವಿಶ್ಲೇಷಣೆ ಮತ್ತು ಕಾರ್ಯಾಚರಣೆಯ ಮಾಹಿತಿಯ ಅಭಿವೃದ್ಧಿಗಾಗಿ ಎಲ್ಲಾ ರಾಜ್ಯಗಳ ಪೊಲೀಸ್ ಏಜೆನ್ಸಿಗಳೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸುತ್ತಿವೆ.
ಈಗಾಗಲೇ ಆಪರೇಷನ್ ಗರುಡಾ ಸಮಯದಲ್ಲಿ, ಭಾರತದಲ್ಲಿ ಅನೇಕ ರಾಜ್ಯಗಳಲ್ಲಿ ಹುಡುಕಾಟಗಳು, ವಶಪಡಿಸಿಕೊಳ್ಳುವಿಕೆಗಳು ಮತ್ತು ಬಂಧನಗಳನ್ನು ನಡೆಸಲಾಗಿದೆ. ಸಿಬಿಐ ಮತ್ತು ಎನ್ಸಿಬಿ ಹೊರತುಪಡಿಸಿ, ಪಂಜಾಬ್, ಹಿಮಾಚಲ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ದೆಹಲಿ ಮತ್ತು ಮಣಿಪುರ ಸೇರಿದಂತೆ ಎಂಟು ರಾಜ್ಯಗಳು/ಕೇಂದ್ರಾಡಳಿತದ ಪೊಲೀಸರು ಕೂಡ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
ಪಂಜಾಬ್, ದೆಹಲಿ, ಹಿಮಾಚಲ ಪ್ರದೇಶ, ಮಣಿಪುರ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯ ಪೊಲೀಸ್ ಪಡೆಗಳಿಂದ ಈ ವಿಶೇಷ ಕಾರ್ಯಾಚರಣೆಯ ಸಮಯದಲ್ಲಿ, ಸುಮಾರು 6600 ಶಂಕಿತರು/ವ್ಯಕ್ತಿಗಳನ್ನು ವಿಚಾರಿಸಲಾಗಿದೆ. 127 ಹೊಸ ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 6 ತಲೆಮರೆಸಿಕೊಂಡಿರುವವರು/ಘೋಷಿತ ಅಪರಾಧಿಗಳು ಸೇರಿದಂತೆ ಸುಮಾರು 175 ಜನರನ್ನು ಬಂಧಿಸಲಾಗಿದೆ.
ಇದುವರೆಗೆ ವಶಪಡಿಸಿಕೊಂಡ ನಿಷೇಧಿತ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ವಸ್ತುಗಳ ಪ್ರಮಾಣ ಇಲ್ಲಿದೆ:
ಹೆರಾಯಿನ್ – 5.125 ಕೆಜಿ (ಅಂದಾಜು)
ಗಾಂಜಾ- 33.936 ಕೆಜಿ (ಅಂದಾಜು)
ಚರಸ್ – 3.29 ಕೆಜಿ (ಅಂದಾಜು)
ಮೆಫೆಡ್ರೋನ್ – 1365 ಗ್ರಾಂ (ಅಂದಾಜು)
ಸ್ಮ್ಯಾಕ್- 33.80 (ಅಂದಾಜು)
ಬುಪ್ರೆನಾರ್ಫಿನ್ – ಸುಮಾರು 87 ಮಾತ್ರೆಗಳು, 122 ಚುಚ್ಚುಮದ್ದು ಮತ್ತು 87 ಸಿರಿಂಜ್ಗಳು
ಅಲ್ಪಜೋಲಮ್ – 946 ಮಾತ್ರೆಗಳು (ಅಂದಾಜು)
ಟ್ರಾಮಾಡೋಲ್- 105.997 ಕೆಜಿ (ಅಂದಾಜು)
ಹ್ಯಾಶ್ ಆಯಿಲ್ – 10 ಗ್ರಾಂ (ಅಂದಾಜು)
ಎಕ್ಸ್ಟಸಿ ಮಾತ್ರೆಗಳು – 0.9 ಗ್ರಾಂ (ಅಂದಾಜು)
ಅಫೀಮು- 1.150 ಕೆಜಿ (ಅಂದಾಜು)
ಗಸಗಸೆ ಹೊಟ್ಟು – 30 ಕೆಜಿ (ಅಂದಾಜು)
ಅಮಲು ಪುಡಿ – 1.437 ಕೆಜಿ (ಅಂದಾಜು)
ಮಾತ್ರೆಗಳು/ಕ್ಯಾಪ್ಸುಲ್ಗಳು- 11039 (ಅಂದಾಜು)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.