ನವದೆಹಲಿ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಇಂದು ಸ್ವಚ್ಛ ಟಾಯ್ಕಥಾನ್ ಅನ್ನು ಪ್ರಾರಂಭಿಸಲಿದೆ, ಇದು ತ್ಯಾಜ್ಯದಿಂದ ಆಟಿಕೆಗಳನ್ನು ತಯಾರಿಸುವ ವಿಶಿಷ್ಟ ಸ್ಪರ್ಧೆಯಾಗಿದೆ. ಒಣ ತ್ಯಾಜ್ಯವನ್ನು ಬಳಸಿಕೊಂಡು ಆಟಿಕೆ ವಿನ್ಯಾಸಗಳಲ್ಲಿ ಹೊಸತನವನ್ನು ಹೊರತರುವ ನಿಟ್ಟಿನಲ್ಲಿ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ. ಸ್ಪರ್ಧೆಯು ವ್ಯಕ್ತಿಗಳು ಮತ್ತು ತಂಡಗಳಿಗೆ ಭಾಗವಹಿಸಲು
ಮುಕ್ತವಾಗಿರುತ್ತದೆ.
ಈ ಸ್ಪರ್ಧೆ ದೊಡ್ಡ ಪ್ರಮಾಣದಲ್ಲಿ ಪುನರಾವರ್ತಿಸಬಹುದಾದ ಸಮರ್ಥ ವಿನ್ಯಾಸಗಳು ಮತ್ತು ಸುರಕ್ಷತಾ ಮಾನದಂಡಗಳನ್ನು ಅನುಸರಿಸುವ ಆಟಿಕೆಗಳ ಮೇಲೆ ಕೇಂದ್ರೀಕರಿಸುತ್ತದೆ. ಸ್ಪರ್ಧೆಯನ್ನು MyGov ನ ಇನ್ನೋವೇಟ್ ಇಂಡಿಯಾ ಪೋರ್ಟಲ್ನಲ್ಲಿ ಆಯೋಜಿಸಲಾಗುತ್ತದೆ. ಸೆಂಟರ್ ಫಾರ್ ಕ್ರಿಯೇಟಿವ್ ಲರ್ನಿಂಗ್, ಐಐಟಿ ಗಾಂಧಿನಗರ ಈ ಉಪಕ್ರಮಕ್ಕೆ ಜ್ಞಾನ ಪಾಲುದಾರನಾಗಿದೆ.
ಬಲವಾದ ಆರ್ಥಿಕ ಬೆಳವಣಿಗೆ, ಮಕ್ಕಳಲ್ಲಿನ ಹಲವಾರು ಆವಿಷ್ಕಾರಗಳಿಂದಾಗಿ ದೇಶದಲ್ಲಿ ಆಟಿಕೆಗಳ ಬೇಡಿಕೆ ಹೆಚ್ಚುತ್ತಿದೆ. ಭಾರತವನ್ನು ಜಾಗತಿಕ ಆಟಿಕೆ ಕೇಂದ್ರವಾಗಿ ಸ್ಥಾಪಿಸುವ ಉದ್ದೇಶದಿಂದ ಸಾಂಪ್ರದಾಯಿಕ ಕರಕುಶಲ ಮತ್ತು ಕೈಯಿಂದ ಮಾಡಿದ ಆಟಿಕೆಗಳು ಸೇರಿದಂತೆ ಭಾರತೀಯ ಆಟಿಕೆ ಉದ್ಯಮವನ್ನು ಉತ್ತೇಜಿಸಲು ಆಟಿಕೆಗಳಿಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ 2020 ಅನ್ನು ಪರಿಚಯಿಸಲಾಗಿದೆ.
ಕೇಂದ್ರ ಸರ್ಕಾರದ 14 ಸಚಿವಾಲಯಗಳೊಂದಿಗೆ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆಯು ಪ್ರಸ್ತುತ ಆಟಿಕೆಗಳಿಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆಯ ವಿವಿಧ ಅಂಶಗಳನ್ನು ಅನುಷ್ಠಾನಗೊಳಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.