ಬೆಳ್ತಂಗಡಿ : ಉಜಿರೆಯಲ್ಲಿನ ಶ್ರೀ ಧ.ಮ.ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಐ.ಎಸ್.ಟಿ.ಇ.ರಾಜ್ಯ ಮಟ್ಟದ ಸಮಾವೇಶ ಸೆ.12 ರಂದು ನಡೆಯಲಿದೆ.
ಗ್ರಾಮಾಭಿವೃದ್ದಿಗೆ ಅವಶ್ಯಕತೆಯಿರುವ ಆವೀಷ್ಕರಣೀಯ ತಂತ್ರಜ್ಞಾನಗಳ ಬೆಳವಣಿಗೆಯನ್ನು ತಿಳಿಸುವುದು ಮತ್ತು ಪ್ರಾಕೃತಿಕ ಶಕ್ತಿಯ ಸಂರಕ್ಷಣೆ, ಸಂವಹನ, ಕೃಷಿಯ ಮರುಬಳಕೆಯ ಬಗ್ಗೆ ತಾಂತ್ರಿಕತೆಯ ವಿಚಾರವನ್ನು ವಿಶ್ಲೇಸುವುದು ಸಮಾವೇಶದ ಉದ್ದೇಶವಾಗಿದೆ.
ಈ ಕಾರ್ಯಕ್ರಮದಲ್ಲಿ ಸ್ನಾತಕೋತ್ತರಇಂಜಿನಿಯರಿಂಗ್, ಡಿಪ್ಲೋಮಾಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅವರಕೌಶಲ್ಯವನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಐ.ಎಸ್.ಟಿ.ಇ. ಕರ್ನಾಟಕ ವಿಭಾಗದ ಅಧ್ಯಕ್ಷ ಡಾ|ಸಿ.ಕೆ.ಸುಬ್ರಾಯ ಭಾಗವಹಿಸಲಿದ್ದಾರೆ. ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ|ಬಿ.ಯಶೋವರ್ಮ ಮತ್ತು ಮಹಾವಿದ್ಯಾಲಯದ ಪ್ರಾಚಾರ್ಯ ಡಾ|ಕೆ.ಸುರೇಶ್ ಉಪಸ್ಥಿತರಿರುತ್ತಾರೆ ಎಂದು ಕಾರ್ಯಕ್ರಮ ಸಂಚಾಲಕ ಡಾ|ಬಸವ ಟಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.