ಬೆಳ್ತಂಗಡಿ : ಡಾ|ಬೆಟಗೇರಿ ಕೃಷ್ಣಶರ್ಮರ ಕಾವ್ಯಗಳ ಕುರಿತು ಕಾವ್ಯಾರ್ಥಚಿಂತನ ಎಂಬ ಎರಡು ದಿನಗಳ ಕಾವ್ಯ ಸ್ಪಂದನತರಬೇತಿ ಶಿಬಿರ ಸೆ.11 ಮತ್ತು 12 ರಂದು ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ ನಡೆಯಲಿದೆ.
ಸೆ.11 ರಂದು ವಿಮರ್ಶಕ ಡಾ|ಗಿರಡ್ಡಿಗೋವಿಂದ ರಾಜ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಡಾ|ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರತಿಷ್ಠಾನ ಬೆಳಗಾವಿ ಇದರ ಅಧ್ಯಕ್ಷ ಪ್ರೊ. ರಾಘವೇಂದ್ರ ಪಾಟೀಲ ಆಶಯ ನುಡಿಗಳನ್ನಾಡಲಿದ್ದಾರೆ. ಕಾಲೇಜಿನ ಪ್ರಾಚಾರ್ಯ ಡಾ|ಬಿ.ಯಶೋವರ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕದ ಮೊದಲ ಗೋಷ್ಠಿಯಲ್ಲಿ ಆನಂದಕಂದರ ಕಾವ್ಯದ ವಸ್ತು ವೈವಿಧ್ಯದ ಬಗ್ಗೆ ಪ್ರೊ.ಎಂ.ರಾಮಚಂದ್ರ ಕಾರ್ಕಳ, ಆನಂದಕಂದರ ಕಾವ್ಯದ ದಾಂಪತ್ಯದ ಕುರಿತು ಉಪನ್ಯಾಸಕ ಡಾ.ಎಚ್.ಎಸ್.ಸತ್ಯನಾರಾಯಣ ವಿಚಾರ ಮಂಡಿಸಲಿದ್ದಾರೆ.
ಎರಡನೇ ಗೋಷ್ಠಿಯಲ್ಲಿ ಆನಂದಕಂದರ ಕಾವ್ಯ ಮತ್ತು ಜನಪದ ಬಗ್ಗೆ ಕಾದಂಬರಿ ಕಾರಡಾ|ಬಾಳಾಸಾಹೇಬ ಲೋಕಾಪೂರ, ಆನಂದಕಂದರ ಕಾವ್ಯದಲ್ಲಿ ವ್ಯಕ್ತಗೊಳ್ಳುವ ಜೀವನದೃಷ್ಟಿ ಕುರಿತು ಅಧ್ಯಾಪಕಡಾ|ವೆಂಕಟಗಿರಿ ದಳವಾಯಿ ಮಾತನಾಡಲಿದ್ದಾರೆ. ನಂತರ ಗೋಷ್ಠಿಯಲ್ಲಿನ ವಿಚಾರಗಳ ಬಗ್ಗೆ ಪ್ರಶ್ನೋತ್ತರ ನಡೆಯಲಿದೆ.
ಸೆ.12 ರಂದು ಮೂರನೇ ಗೋಷ್ಠಿಯಲ್ಲಿ ಡಾ|ರಾಜಶೇಖರ ಹಳೆಮನೆ ಅವರ ನಿರ್ವಹಣೆಯಲ್ಲಿ ಶಿಬಿರಾರ್ಥಿಗಳಿಂದ ಕಾವ್ಯ ಪ್ರತಿಸ್ಪಂದನೆಯ ಪ್ರಬಂಧಗಳ ಮಂಡನೆ ಮತ್ತು ಚರ್ಚೆ ನಡೆಯಲಿದೆ. ಮಧ್ಯಾಹ್ನ ನಡೆಯುವ ಸಮಾರೋಪ ಸಮಾರಂಭದಲ್ಲಿ ಲೇಖಕ ಡಾ|ನಾ.ಮೊಗಸಾಲೆ ಸಮಾರೋಪ ನುಡಿಯಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.