ಉಡುಪಿ: ರಾಜ್ಯದ ವಿದ್ಯುತ್ ಉತ್ಪಾದನೆಯಲ್ಲಿ ದೊಡ್ಡ ಪಾಲು ನೀಡುವ ಉಡುಪಿ ತಾಲೂಕು ಅಗತ್ಯದ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಹೆಣಗಾಡುತ್ತಿದೆ. ನಂದಿಕೂರು ಬಳಿಯ ಯುಪಿಸಿಎಲ್ 1,200 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸ್ಥಾವರ. ಇದಲ್ಲದೆ ಹಿರಿಯಡಕದ ಬಜೆ ಅಣೆಕಟ್ಟಿನಲ್ಲಿ 4 ಮೆಗಾವ್ಯಾಟ್ ಉತ್ಪಾದನೆಯಾಗುತ್ತಿದೆ. ಉಡುಪಿ ತಾಲೂಕಿಗೆ ಮಳೆಗಾಲದಲ್ಲಿ ಸುಮಾರು 105 ಮೆಗಾವ್ಯಾಟ್ ವಿದ್ಯುತ್ ಇದ್ದರೆ ಲೋಡ್ ಶೆಡ್ಡಿಂಗ್ ಇಲ್ಲದೆ ನಿರ್ವಹಿಸಬಹುದು. ಆದರೆ ಹೀಗಾಗುತ್ತಿದೆಯೆ?
ಕಾರ್ಕಳ ಕೇಮಾರಿನಿಂದ ಬರುವ ವಿದ್ಯುತ್ ಮಾರ್ಗ 230 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಮೂಡಬಿದಿರೆ, ಗುರುವಾಯನಕೆರೆಗೂ ವಿದ್ಯುತ್ ಹೋಗುತ್ತದೆ. ಉಡುಪಿ ಜಿಲ್ಲೆಗೆ ಸುಮಾರು 200 ಮೆಗಾವ್ಯಾಟ್ ಪೂರೈಸಿದರೆ ಸಾಕು. ಮಳೆಗಾಲದಲ್ಲಿ 150 ಮೆ. ಕೊಟ್ಟರೂ ನಿರ್ವಹಿಸಬಹುದು. ಈಗ 90-95-100 ಮೆಗಾವ್ಯಾಟ್ ಕೊಡುತ್ತಾರೆ.
ಇಂತಹ ಸಂದರ್ಭ 40-50 ಮೆಗಾವ್ಯಾಟ್ ಕೊರತೆ ಆಗುತ್ತದೆ. ಇದರಿಂದಾಗಿ ದಿನದಲ್ಲಿ 3-4 ಗಂಟೆ ವಿದ್ಯುತ್ ಖೋತಾ ಆಗುತ್ತದೆ. ಮಳೆಗಾಲದಲ್ಲಿಯೇ ಹೀಗಾದರೆ ಮುಂದಿನ ದಿನಗಳು ಹೇಗಿರಬಹುದೆಂದು ಜನರು ಚಿಂತಿತರಾಗಿದ್ದಾರೆ.
ಮಳೆಗಾಲದಲ್ಲಿ ಸಹಜವಾಗಿ ವಿದ್ಯುತ್ ಬೇಡಿಕೆ ಕಡಿಮೆ ಇರುತ್ತದೆ. ಕೃಷಿ ಪಂಪುಸೆಟ್ ಬೇಕಾಗುವುದಿಲ್ಲ. ಶೆಕೆ ಕಡಿಮೆ ಇರುವುದರಿಂದ ಹವಾನಿಯಂತ್ರಕಗಳು, ಫ್ಯಾನುಗಳ ಬಳಕೆ ಕಡಿಮೆ ಇರುತ್ತದೆ. ಆದರೆ ಈಗ ಕಂಡು ಬರುತ್ತಿರುವ ಮಳೆಗಾಲ ಹೆಸರಿಗಷ್ಟೆ. ಇತ್ತೀಚಿನ ಹತ್ತು ದಿನಗಳಲ್ಲಿ ಬೇಸಗೆಯಂತಹ ಬಿಸಿಲು, ಶೆಕೆ ಇತ್ತು. ಕೇಮಾರು ಕೆಪಿಟಿಸಿಎಲ್ ಮೂಲಗಳ ಪ್ರಕಾರ ಕಳೆದ ವರ್ಷದ ಆಗಸ್ಟ್ಗಿಂತ ಈ ಆಗಸ್ಟ್ನಲ್ಲಿ 10-15 ಮೆಗಾವ್ಯಾಟ್ ಹೆಚ್ಚಿನ ವಿದ್ಯುತ್ ಬಳಕೆ ಆಗಿದೆ.
2 ಲಕ್ಷ ಸಂಪರ್ಕ : ಉಡುಪಿ ಮತ್ತು ಕಾರ್ಕಳ ತಾಲೂಕು ವ್ಯಾಪ್ತಿಯ ಉಡುಪಿ ವಿಭಾಗದಲ್ಲಿ 2.96 ಲಕ್ಷ ಸಂಪರ್ಕಗಳಿವೆ. ಇದರಲ್ಲಿ 2.08 ಗೃಹ ಬಳಕೆ, 40,000 ಪಂಪುಸೆಟ್, 28,000 ವಾಣಿಜ್ಯ ಸಂಪರ್ಕ, ಕೈಗಾರಿಕೆಗಳು 3,700, ಹೈಟೆನ್ಶನ್ ಸಂಪರ್ಕ ಕೈಗಾರಿಕೆಗಳು 374 ಇವೆ. ಉಡುಪಿ ತಾಲೂಕು ಮಾತ್ರವನ್ನು ಗಣನೆಗೆ ತೆಗೆದುಕೊಂಡರೆ ಸುಮಾರು 2 ಲಕ್ಷ ಸಂಪರ್ಕಗಳಿವೆ. ಉಡುಪಿ ಉಪವಿಭಾಗದಲ್ಲಿ (ಉಡುಪಿ, ಮಲ್ಪೆ, ಉದ್ಯಾವರ, ಅಂಬಾಗಿಲು) 34,670 ಸಂಪರ್ಕಗಳಿದ್ದು 2,400 ಸೌರ ಸಂಪರ್ಕಗಳಿವೆ. ಮಣಿಪಾಲ ಉಪವಿಭಾಗದಲ್ಲಿ (ಮಣಿಪಾಲ, ಹಿರಿಯಡಕ, ಮೂಡುಬೆಳ್ಳೆ, ಪೆರ್ಡೂರು) 34,700 ಸಂಪರ್ಕಗಳಲ್ಲಿ 2,565 ಸೌರ ಸಂಪರ್ಕಗಳಿವೆ. ಉಡುಪಿ ನಗರಸಭೆ ವ್ಯಾಪ್ತಿಯ ಬೀದಿದೀಪಗಳಿಗೆ ಸುಮಾರು 1 ಮೆಗಾವ್ಯಾಟ್ ವಿದ್ಯುತ್ ಬೇಕು. ಗ್ರಾಮಾಂತರ ಪ್ರದೇಶಗಳ ಬೀದಿದೀಪಗಳಿಗೆ 1 ಮೆಗಾವ್ಯಾಟ್ ವಿದ್ಯುತ್ ಬೇಕು. ಗ್ರಾ.ಪಂ.ನಿಂದ ನೀರು ಪೂರೈಕೆ ಮತ್ತು ಬೀದಿದೀಪಗಳಿಂದ ಉಡುಪಿ ವಿಭಾಗದ ಮೆಸ್ಕಾಂಗೆ ಬರಬೇಕಾದ ಮೊತ್ತ 3 ಕೋ.ರೂ.
ಸೂರ್ಯನೀಗ ಜನಪ್ರಿಯ : ಸೌರ ವಿದ್ಯುತ್ ಸಂಪರ್ಕ ಇತ್ತೀಚಿಗೆ ಜನಪ್ರಿಯವಾಗುತ್ತಿದೆ. ಇದೊಂದು ಪರ್ಯಾಯ ಇಂಧನ ಮೂಲ. ಮಣಿಪಾಲ ದಲ್ಲಿರುವ ಭಾರತೀಯ ವಿಕಾಸ್ ಟ್ರಸ್ಟ್ ಸೌರ ವಿದ್ಯುತ್ ಬಳಕೆಗೆ ಹೆಚ್ಚಿನ ಪ್ರಚಾರ ನೀಡುತ್ತಿದೆ. ಇತ್ತೀಚಿಗೆ ಉಡುಪಿ ಸ್ವೀಟ್ಸ್ ಮಾಲಕ ವಿಜಯಕುಮಾರ್ ಅವರು ಬೈಲೂರಿನ ಮನೆಯಲ್ಲಿ 10 ಕೆವಿ ವಿದ್ಯುತ್ ಉತ್ಪಾದನೆ ಆರಂಭಿಸಿ ಹೊಸ ಸಂದೇಶ ರವಾನಿಸಿದ್ದಾರೆ. ಮಣಿಪಾಲ ಅಲೆವೂರು ರಸ್ತೆಯಲ್ಲಿರುವ ಸಾಫ್ಟ್ವೇರ್ ಕಂಪೆನಿ ಮಣಿಪಾಲ್.ನೆಟ್ ಕಟ್ಟಡದಲ್ಲಿ 25 ಕೆವಿ ಸೌರ ವಿದ್ಯುತ್ ಆರಂಭಿಸಲು ಸಂಸ್ಥೆಯ ಮುಖ್ಯಸ್ಥ ಶ್ರೀಕಾಂತ ಭಟ್ ಚಿಂತನೆ ನಡೆಸಿದ್ದಾರೆ. ಒಂದು ಕಿಲೊವ್ಯಾಟ್ ಉತ್ಪಾದನೆ ಮಾಡಲು 1 ಲ.ರೂ. ಖರ್ಚಾಗುತ್ತದೆ. ವಿದ್ಯುತ್ ಉತ್ಪಾದಕರಿಂದ ಮೆಸ್ಕಾಂ ಯೂನಿಟ್ಗೆ 9.56 ರೂ. ಕೊಟ್ಟು ಖರೀದಿಸು ತ್ತದೆ. ಮೆಸ್ಕಾಂಗಾಗಲಿ, ಉತ್ಪಾದನಾ ಸಂಸ್ಥೆಗಳಿಗಾಗಲಿ ದೊಡ್ಡ ಲಾಭವೇನಲ್ಲ. ಆದರೆ ಪರ್ಯಾಯ ಇಂಧನ ಮೂಲವಾಗಿ, ಪರಿಸರಕ್ಕೆ ಪೂರಕವಾದ ಇಂಧನ ರೂಪದಲ್ಲಿ ಸಮಾಜಸೇವೆ ಎಂದು ಪರಿಗಣಿಸುವವರು ಇದನ್ನು ಆಗಗೊಳಿಸುತ್ತಾರೆ.
ಸ್ಮಾರ್ಟ್ ಮೀಟರ್ ಬರಲಿದೆ: ಗ್ರಾಹಕರು ವಿದ್ಯುತ್ ಇರುವಾಗ ಎಲ್ಲ ಬಲ್ಬುಗಳು, ಫ್ಯಾನುಗಳನ್ನು ಏಕಕಾಲದಲ್ಲಿ ಹಾಕಿದಾಗ ಓವರ್ಲೋಡ್ ಸೃಷ್ಟಿಯಾಗುತ್ತದೆ. ಎಷ್ಟೋ ಬಾರಿ ಇಷ್ಟೂ ಬಲ್ಬು, ಫ್ಯಾನುಗಳು ಬೇಕಾಗಿರುವುದಿಲ್ಲ. ಸ್ಮಾರ್ಟ್ ಮೀಟರಿಂಗ್ ಜಾರಿಗೆ ಬಂದರೆ ಇದು ನಿಯಂತ್ರಣಕ್ಕೆ ಬರುತ್ತದೆ. ಇದರ ಪ್ರಕಾರ ಒಂದು ಮನೆಗೆ 3 ಕಿಲೋವ್ಯಾಟ್ ವಿದ್ಯುತ್ ಸಾಮರ್ಥ್ಯವಿದ್ದರೆ ಪೂರೈಕೆ ಕೊರತೆ ಇರುವಾಗ ಸ್ಟೇಶನ್ನಿಂದಲೇ ಒಂದು ಕಿಲೋವ್ಯಾಟ್ಗೆ ನಿರ್ಬಂಧಿಸಲು ಸಾಧ್ಯವಾಗುತ್ತದೆ. ಆಗ ಗ್ರಾಹಕರು ಎಷ್ಟು ಬೇಕೋ ಅಷ್ಟು ಬಲ್ಬುಗಳನ್ನು ಮಾತ್ರ ಬಳಸುತ್ತಾರೆ. ಸ್ಮಾರ್ಟ್ ಮೀಟರಿಂಗ್ ಬೆಂಗಳೂರಿನಲ್ಲಿ ಪ್ರಾಯೋಗಿಕ ಹಂತದಲ್ಲಿದೆ. ಮುಂದೆ ಇತರೆಡೆಯೂ ಬರಬಹುದು. – ಗುರುರಾಜ ಸುವರ್ಣ, ಕಾರ್ಯಪಾಲಕ ಎಂಜಿನಿಯರ್, ಮೆಸ್ಕಾಂ, ಉಡುಪಿ.
“ಜೀರೋ’ ವ್ಯಾಟ್ ಬಲ್ಬು ಸಾಧ್ಯವೆ ?
“ಜೀರೋ’ ಕ್ಯಾಂಡಲ್ ಬಲ್ಬು ಎಂದು ಕರೆಯುವ ಬಲ್ಬುಗಳನ್ನು ಬಳಸುತ್ತೇವೆ. ವಾಸ್ತವದಲ್ಲಿ “ಜೀರೋ’ ಇದ್ದರೆ ಬೆಳಕು ಬರಲು ಸಾಧ್ಯವಿಲ್ಲ, ಕತ್ತಲೆಗೆ ಇನ್ನೊಂದು ಪರ್ಯಾಯ ಪದ ಇದಷ್ಟೆ. ಜೀರೋ ಕ್ಯಾಂಡಲ್ ಎಂದು ಕರೆಯುವ ಬಲ್ಬಿನ ಸಾಮರ್ಥ್ಯ 15 ವ್ಯಾಟ್ಸ್. ಈಗೀಗ 5, 9 ವ್ಯಾಟ್ಸ್ನ ಎಲ್ಇಡಿ ಬಲ್ಬುಗಳು ಕಡಿಮೆ ದರದಲ್ಲಿ ಸಿಗುತ್ತಿವೆ. ಇದು ಬಹಳಷ್ಟು ವಿದ್ಯುತ್ ಉಳಿಸುವ ದಕ್ಷತೆ ಹೊಂದಿವೆ. ಆದರೆ ಹೆಚ್ಚಿನ ವ್ಯಾಟ್ಸ್ ಬಲುºಗಳ ದರ ಹೆಚ್ಚಿಗೆ ಇದೆ. ಇದೇ ವೇಳೆ ವಿದ್ಯುತ್ ಉಳಿತಾಯವೂ ಇದೆ, ಬೆಳಕಿನ ಪ್ರಕಾಶವೂ ಜಾಸ್ತಿ ಇರುತ್ತದೆ.
ಈಗ ಡಿಸ್ಪ್ಲೆ ಲೈಟುಗಳೂ ಎಲ್ಇಡಿ ಬಂದಿವೆ. ಕ್ರಮೇಣ ಹೆಚ್ಚಿನ ವ್ಯಾಟ್ಸ್ ಬಲ್ಬುಗಳ ದರ ಕಡಿಮೆಯಾಗುತ್ತದೆ. ಒಂದೆರಡು ವರ್ಷಗಳಲ್ಲಿ ಇವು ಹಳೆ ಮಾದರಿ ಬಲುºಗಳ ಸ್ಥಾನದಲ್ಲಿ ಬರುತ್ತವೆ.
– ಹರೀಶ್, ನಿರ್ದೇಶಕರು, ಪ್ರಕಾಶ್ ರೀಟೇಲ್ ಪ್ರೈ.ಲಿ. ಉಡುಪಿ.
ಸಾರ್ವಜನಿಕರಿಗೆ ಗೊತ್ತಿಲ್ಲದ ದೊ
ಆದರೆ ಮೆಸ್ಕಾಂ ವಿರುದ್ಧ ಪ್ರತಿಭಟನೆ ನಡೆಯುವುದಾದರೆ ಎಲ್ಲರೂ ಬರುವುದು ವಿಭಾಗೀಯ ಕಚೇರಿ ಎದುರು. ವಿಭಾಗೀಯ ಕಚೇರಿಗಿಂತ ಮೇಲ್ಮಟ್ಟದ ಅಧೀಕ್ಷಕ ಎಂಜಿನಿಯರ್ ಕಚೇರಿ ಎದುರು ಇದುವರೆಗೆ ಪ್ರತಿಭಟನೆ ನಡೆದದ್ದಿಲ್ಲ. ಏಕೆಂದರೆ ಇಂತಹ ಕಚೇರಿ ಇರುವುದು ಗೊತ್ತೇ ಇಲ್ಲ. ಹೀಗಿದೆ ನಮ್ಮ ವ್ಯವಸ್ಥೆ. ಯಾವುದೇ ಇಲಾಖೆ ಇರಲಿ, ಎಂತಹ ಆರ್ಥಿಕ ಅಡಚಣೆಯೇ ಇರಲಿ ದೊಡ್ಡ ದೊಡ್ಡ ಅಧಿಕಾರಸ್ಥರ ಹುದ್ದೆ ಹೆಚ್ಚಾಗುತ್ತದೆ ವಿನಾ ಕಡಿಮೆಯಾಗುವುದಿಲ್ಲ. ಅದೇ ಜವಾನ, ಗುಮಾಸ್ತರು, ಡಿ ಶ್ರೇಣಿ ನೌಕರರು, ಲೈನ್ಮ್ಯಾನ್ಗಳ ಸಂಖ್ಯೆ ಕಡಿತವಾಗುತ್ತದೆ. ಜನರಿಗೆ ಅತಿ ಜರೂರಾಗಿ ಬೇಕಾಗುವುದು ಕೆಳಸ್ತರದವರೇ ವಿನಾ ಮೇಲ್ಸ್ತರದವರಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.