News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

U17 ವಿಶ್ವ ಚಾಂಪಿಯನ್: ಚಿನ್ನ ಗೆದ್ದ ಭಾರತದ ಕುಸ್ತಿಪಟು ಸೂರಜ್‌ ವಶಿಷ್ಟ

ರೋಮ್​​: 16 ವರ್ಷದ ಸೂರಜ್ ವಶಿಷ್ಟ್ ಅವರು ಗ್ರೀಕೋ-ರೋಮನ್ ಅಂಡರ್ 17 ವಿಶ್ವ ಚಾಂಪಿಯನ್ ಆಗುವ ಮೂಲಕ‌ ಇತಿಹಾಸವನ್ನು ರಚಿಸಿದ್ದಾರೆ. 32 ವರ್ಷಗಳ ಬಳಿಕ ಭಾರತ ಈ ಸಾಧನೆ ಮಾಡಿದೆ.

55 ಕೆಜಿ ವೈಟ್​ ಕ್ಲಾಸ್​ ಕುಸ್ತಿ ವಿಭಾಗದಲ್ಲಿ ಭಾರತದ ಸೂರಜ್​​ ವಶಿಷ್ಟ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ.

ರೋಮ್‌ನಲ್ಲಿ ನಡೆದ ಫೈನಲ್‌ನಲ್ಲಿ ಸೂರಜ್ ವಶಿಷ್ಟ್ ಕುಸ್ತಿಪಟು ಫರೈಮ್ ಮುಸ್ತಫಾಯೆವ್ ಅವರನ್ನು  11-0 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ.  1990 ರಲ್ಲಿ ಪಪ್ಪು ಯಾದವ್ ಈ ಸಾಧನೆ ಮಾಡಿದ್ದರು.

ಹರಿಯಾಣದ ರೋಹ್ಟಕ್ ಜಿಲ್ಲೆಯ ರಿತಾಲ್​ನ ಸೂರಜ್​ ಫೈನಲ್​ ಹಣಾಹಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಆರಂಭದಿಂದಲೂ ಎದುರಾಳಿ ಮೇಲೆ ಹಿಡಿತ ಸಾಧಿಸಿ, ಯಾವುದೇ ಪಾಯಿಂಟ್ ಬಿಟ್ಟುಕೊಡಲಿಲ್ಲ. ಹೀಗಾಗಿ, ಎರಡು ಸುತ್ತಿನಲ್ಲಿ ಭರ್ಜರಿ ಗೆಲುವು ದಾಖಲು ಮಾಡಿದ್ದಾರೆ. ‌

ಸಾಧನೆ ಬಗ್ಗೆ ಮಾತನಾಡಿದ ಸೂರಜ್, ಸಿನಿಯರ್​ ವಿಶ್ವ ಟೈಟಲ್​ ಗೆಲ್ಲುವ ಕನಸು  ಇದೆ ಎಂದು ಹೇಳಿಕೊಂಡಿದ್ದಾರೆ.

ರೋಮ್‌ನಲ್ಲಿ ಭಾರತಕ್ಕೆ ಮತ್ತೊಂದು ವಿಶ್ವ ಚಾಂಪಿಯನ್ ಆಗುವ ಅವಕಾಶ ಸ್ವಲ್ಪದರಲ್ಲಿ ತಪ್ಪಿ ಹೋಗಿದೆ. ರೋನಿತ್ ಶರ್ಮಾ (48 ಕೆಜಿ) ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ರೋನಿತ್ ಫೈನಲ್‌ನಲ್ಲಿ ಇರಾನ್‌ನ ಅಲಿ ಅಬ್ದುಲ್ಲಾ ಅಹ್ಮದಿ ವಾಫಾ ವಿರುದ್ಧ ಸೋಲು ಕಂಡಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top