News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 17th August 2022


×
Home About Us Advertise With s Contact Us

ದೇಶಾದ್ಯಂತ ಉಡಾನ್ ಅಡಿ 14 ವಾಟರ್ ಏರೋಡ್ರೋಮ್‌ಗಳ ಕಾರ್ಯಾಚರಣೆ

 

ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಪ್ರಾದೇಶಿಕ ಸಂಪರ್ಕ ಯೋಜನೆ ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಅಡಿಯಲ್ಲಿ ವಾಟರ್ ಏರೋಡ್ರೋಮ್‌ಗಳಿಂದ ಸೀಪ್ಲೇನ್ ಕಾರ್ಯಾಚರಣೆಗಳನ್ನು ಪರಿಚಯಿಸಿದೆ.

ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ದೇಶಾದ್ಯಂತ ಉಡಾನ್ ಅಡಿಯಲ್ಲಿ 14 ವಾಟರ್ ಏರೋಡ್ರೋಮ್‌ಗಳನ್ನು ಕಾರ್ಯಾಚರಿಸಿದೆ.

ಅಹಮದಾಬಾದ್‌ನ ಸಬರಮತಿ ರಿವರ್‌ಫ್ರಂಟ್‌ ಸೇರಿದಂತೆ ಏರೋಡ್ರೋಮ್‌ ಪರಿಚಯಿಸಲಾಗಿದೆ.

14 ವಾಟರ್ ಏರೋಡ್ರೋಮ್‌ಗಳಿಗೆ 287 ಕೋಟಿ ರೂಪಾಯಿ ಮಂಜೂರಾಗಿದ್ದು, ಈವರೆಗೆ 18.73 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

RCS-UDAN ಯೋಜನೆಯಡಿಯಲ್ಲಿ ಒಟ್ಟು 115 RCS ಹೆಲಿಕಾಪ್ಟರ್ ಮಾರ್ಗಗಳನ್ನು ನೀಡಲಾಗಿದೆ ಅವುಗಳಲ್ಲಿ 36 ಮಾರ್ಗಗಳನ್ನು ಕಾರ್ಯಗತಗೊಳಿಸಲಾಗಿದೆ.

ಉಡಾನ್ ಯೋಜನೆಯಲ್ಲಿನ ನಿಬಂಧನೆಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಈಶಾನ್ಯ ಪ್ರದೇಶದ ರಾಜ್ಯಗಳು, ಅಂಡಮಾನ್ ನಿಕೋಬಾರ್ ದ್ವೀಪಗಳು ಮತ್ತು ಲಕ್ಷದ್ವೀಪಗಳಂತಹ ಆದ್ಯತೆಯ ಪ್ರದೇಶಗಳಲ್ಲಿ ಮಾತ್ರ ಹೆಲಿಕಾಪ್ಟರ್ ಕಾರ್ಯಾಚರಣೆಗಳನ್ನು ಅನುಮತಿಸಲಾಗಿದೆ.

14 ವಾಟರ್ ಏರೋಡ್ರೋಮ್‌ಗಳು ಮತ್ತು 115 RCS ಹೆಲಿಕಾಪ್ಟರ್ ಮಾರ್ಗಗಳನ್ನು ಸಂಪರ್ಕಿಸುವ ಇಪ್ಪತ್ತೆಂಟು ಸೀಪ್ಲೇನ್ ಮಾರ್ಗಗಳನ್ನು ಒದಗಿಸಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top