News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಧ್ವಜ ಸಂಹಿತೆಗೆ ತಿದ್ದುಪಡಿ: ಹಗಲು, ರಾತ್ರಿ ತಿರಂಗಾ ಹಾರಿಸಲು ಅನುಮತಿ

ನವದೆಹಲಿ: ತ್ರಿವರ್ಣ ಧ್ವಜವನ್ನು ತೆರೆದ ಮತ್ತು ವೈಯಕ್ತಿಕ ಮನೆಗಳು ಅಥವಾ ಕಟ್ಟಡಗಳ ಮೇಲೆ ಹಗಲು ರಾತ್ರಿ ಹಾರಿಸುವುದನ್ನು ಅನುಮತಿಸಲು ಸರ್ಕಾರವು ಭಾರತದ ಧ್ವಜ ಸಂಹಿತೆಯನ್ನು ತಿದ್ದುಪಡಿ ಮಾಡಿದೆ. ಹಿಂದಿನ ನಿಬಂಧನೆಯ ಪ್ರಕಾರ ಧ್ವಜವನ್ನು ತೆರೆದ ಸ್ಥಳದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾತ್ರ ಹಾರಿಸಲು ಅವಕಾಶವಿತ್ತು.

ಈಗ ಸಾರ್ವಜನಿಕರು, ಖಾಸಗಿ ಸಂಸ್ಥೆ ಅಥವಾ ಶಿಕ್ಷಣ ಸಂಸ್ಥೆಯು ರಾಷ್ಟ್ರಧ್ವಜದ ಘನತೆ ಮತ್ತು ಗೌರವಕ್ಕೆ ಅನುಗುಣವಾಗಿ ಎಲ್ಲಾ ದಿನಗಳು ಮತ್ತು ಸಂದರ್ಭಗಳಲ್ಲಿ ಧ್ವಜಾರೋಹಣ ಮಾಡಲು ಅನುಮತಿಸಲಾಗಿದೆ.

ಭಾರತೀಯ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಮುನ್ನ ಹೊಸ ನಿಯಮ ಜಾರಿಗೊಂಡಿದೆ.

ಭಾರತದ ಧ್ವಜ ಸಂಹಿತೆಯನ್ನು ಮೊದಲು ಡಿಸೆಂಬರ್ 30, 2021 ರಂದು ತಿದ್ದುಪಡಿ ಮಾಡಲಾಗಿದ್ದು, ಹತ್ತಿ, ಉಣ್ಣೆ, ರೇಷ್ಮೆ ಮತ್ತು ಖಾದಿ, ಪಾಲಿಸ್ಟರ್ ಬಳಸಿ  ಕೈಯಿಂದ ನೇಯ್ದು ಮತ್ತು ಯಂತ್ರದಿಂದ  ಧ್ವಜಗಳನ್ನು ತಯಾರಿಸಲು ಅನುಮತಿಸಲಾಗಿದೆ.

ಆಗಸ್ಟ್ 13 ಮತ್ತು 15 ರ ನಡುವೆ ತ್ರಿವರ್ಣ ಧ್ವಜವನ್ನು ಮನೆಗಳಲ್ಲಿ ಹಾರಿಸಲು ಪ್ರಧಾನಿ ನರೇಂದ್ರ ಮೋದಿ ಜನರಿಗೆ ಕರೆ ನೀಡಿದ್ದಾರೆ.

ಈ ವರ್ಷ ಆಜಾದಿ ಕಾ ಅಮೃತ್ ಮಹೋತ್ಸವವನ್ನು ರಾಷ್ಟ್ರವು ಗುರುತಿಸುತ್ತಿರುವುದರಿಂದ ಈ ಹರ್ ಘರ್ ತಿರಂಗಾ ಆಂದೋಲನವು ರಾಷ್ಟ್ರಧ್ವಜದೊಂದಿಗೆ ನಮ್ಮ ಸಂಪರ್ಕವನ್ನು ಇನ್ನಷ್ಟು ಗಾಢಗೊಳಿಸುತ್ತದೆ ಎಂದು  ಮೋದಿ ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top