News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರೂ 5.5 ಲಕ್ಷ ಕೋಟಿಗೆ ಏರಿಕೆ ಕಂಡ ಎಲೆಕ್ಟ್ರಾನಿಕ್ ಸರಕುಗಳ ದೇಶೀಯ ಉತ್ಪಾದನೆ

ನವದೆಹಲಿ: ಎಲೆಕ್ಟ್ರಾನಿಕ್ ಸರಕುಗಳ ದೇಶೀಯ ಉತ್ಪಾದನೆಯು 2015-16 ರಲ್ಲಿ  ಇದ್ದ ರೂ 2,43,263 ಕೋಟಿಗಳಿಂದ 2020-21 ರಲ್ಲಿ ರೂ 5,54,461 ಕೋಟಿಗೆ ಗಣನೀಯವಾಗಿ ಏರಿಕೆಯಾಗಿದ್ದು, ಶೇ. 17.9 ರ ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ ಬೆಳೆಯುತ್ತಿದೆ ಎಂದು ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ.

ಪ್ರಮುಖ ಉತ್ಪಾದನಾ ಆಧಾರಿತ ಪ್ರೋತ್ಸಾಹಕ (ಪಿಎಲ್‌ಐ) ಯೋಜನೆಗಳು, ಎಲೆಕ್ಟ್ರಾನಿಕ್ ಘಟಕಗಳು ಮತ್ತು ಸೆಮಿಕಂಡಕ್ಟರ್‌ಗಳ ತಯಾರಿಕೆಗೆ ಉತ್ತೇಜನ ನೀಡುವ ಯೋಜನೆಗಳು, ಮಾರ್ಪಡಿಸಿದ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ (ಇಎಮ್‌ಸಿ 2.0) ಯೋಜನೆ ಸೇರಿದಂತೆ ಸರ್ಕಾರದ ಹಲವು ನೀತಿಗಳು ಭಾರತವನ್ನು ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಆತ್ಮನಿರ್ಭರವನ್ನಾಗಿ ಮಾಡುತ್ತಿವೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಸೆಮಿಕಂಡೆಕ್ಟರ್‌ಗಳು ಎಲ್ಲಾ ಎಲೆಕ್ಟ್ರಾನಿಕ್ ಉತ್ಪನ್ನಗಳ ಪ್ರಮುಖ ಭಾಗವಾಗಿರುವುದರಿಂದ, ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯದ ಬೆಳವಣಿಗೆಯ ಪರಿಣಾಮವಾಗಿ ಭಾರತದಲ್ಲಿ ಸೆಮಿಕಂಡೆಕ್ಟರ್ ಮಾರುಕಟ್ಟೆಯು ಕಳೆದ ಕೆಲವು ವರ್ಷಗಳಿಂದ ಗಣನೀಯ ಬೆಳವಣಿಗೆಯನ್ನು ಕಂಡಿದೆ ಎಂದು ಅವರು ಹೇಳಿದ್ದಾರೆ.

ಉದ್ಯಮದ ಅಂದಾಜಿನ ಪ್ರಕಾರ, ಸೆಮಿಕಂಡಕ್ಟರ್ ಬಳಕೆ 2020 ರಲ್ಲಿ ಭಾರತದಲ್ಲಿ ಸುಮಾರು 1.1 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು, ಭಾರತದಲ್ಲಿ ವಾಣಿಜ್ಯ ಸೆಮಿಕಂಡೆಕ್ಟರ್ ಫ್ಯಾಬ್‌ಗಳ ಅನುಪಸ್ಥಿತಿಯ ಕಾರಣ ಆಮದುಗಳ ಮೂಲಕ‌ ಬೇಡಿಕೆ ಪೂರೈಸಲಾಗುತ್ತಿತ್ತು. ಪ್ರಸ್ತುತ ಒಟ್ಟಾರೆ ಸೆಮಿಕಂಡೆಕ್ಟರ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ತನ್ನ ಪ್ರಮುಖ ಉದ್ದೇಶದ ಮೇಲೆ ಸರ್ಕಾರವು ಹೆಚ್ಚು ಗಮನಹರಿಸಿದೆ ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top