ನವದೆಹಲಿ: ಟೈಮ್ ಮ್ಯಾಗಜೀನ್ನ “2022 ರ ವಿಶ್ವದ 50 ಶ್ರೇಷ್ಠ ಸ್ಥಳಗಳ” ಪಟ್ಟಿಯಲ್ಲಿ ಭಾರತದ ಮೊದಲ ಯುನೆಸ್ಕೋ ವಿಶ್ವ ಪರಂಪರೆಯ ನಗರವಾದ ಅಹಮದಾಬಾದ್ ಅನ್ನು ಸೇರಿಸಿದ್ದಕ್ಕಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಗುರುವಾರ ದೇಶವಾಸಿಗಳನ್ನು ಅಭಿನಂದಿಸಿದ್ದಾರೆ.
ಟ್ವೀಟ್ ಮಾಡಿರುವ ಶಾ ವರು, “ಪ್ರತಿಯೊಬ್ಬ ಭಾರತೀಯನಿಗೆ, ವಿಶೇಷವಾಗಿ ಗುಜರಾತ್ನ ಜನರಿಗೆ ಅಪಾರ ಹೆಮ್ಮೆಯ ವಿಷಯವೆಂದರೆ ಭಾರತದ ಮೊದಲ ಯುನೆಸ್ಕೋ ವಿಶ್ವ ಪರಂಪರೆಯ ನಗರ, ಅಹಮದಾಬಾದ್ ಈಗ “2022 ರ ವಿಶ್ವದ 50 ಶ್ರೇಷ್ಠ ಸ್ಥಳಗಳ” ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ. ಎಲ್ಲರಿಗೂ ಅಭಿನಂದನೆಗಳು!” ಎಂದಿದ್ದಾರೆ.
2001 ರಿಂದ ನರೇಂದ್ರ ಮೋದಿ ದೂರದೃಷ್ಟಿಯ ಆಲೋಚನೆಗಳು ಗುಜರಾತ್ನಲ್ಲಿ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ರಚಿಸಲು ಅಡಿಪಾಯವನ್ನು ಹಾಕಿದವು. ಸಬರಮತಿ ರಿವರ್ಫ್ರಂಟ್ ಆಗಿರಲಿ ಅಥವಾ ಅಹಮದಾಬಾದ್ನ ಸೈನ್ಸ್ ಸಿಟಿಯಾಗಿರಲಿ ಮೋದಿಯವರು ಸದಾ ನೆಕ್ಸ್ಟ್-ಜೆನ್ ಮೂಲಸೌಕರ್ಯಗಳನ್ನು ಸೃಷ್ಟಿಸಲು ಮತ್ತು ಭಾರತವನ್ನು ಭವಿಷ್ಯವನ್ನು ಸಿದ್ಧಪಡಿಸಲು ಒತ್ತು ನೀಡಿದರು ಎಂದು ಶಾ ಹೇಳಿದ್ದಾರೆ.
Matter of immense pride for every Indian, especially the people of Gujarat that India’s first UNESCO World Heritage City, Ahmedabad has now been included in the list of "World's 50 Greatest Places of 2022" by Time Magazine.
Congratulations to everyone!https://t.co/ZKpjCbg4YM
— Amit Shah (@AmitShah) July 14, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.