ನವದೆಹಲಿ: ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡುವ ಗುರಿಯೊಂದಿಗೆ ರಕ್ಷಣಾ ಸಚಿವಾಲಯವು ಜುಲೈ 11 ರಂದು ಮೊಟ್ಟಮೊದಲ ಬಾರಿಗೆ ‘ರಕ್ಷಣೆಯಲ್ಲಿ ಕೃತಕ ಬುದ್ಧಿಮತ್ತೆ’ (AIDef) ವಿಚಾರ ಸಂಕಿರಣ ಮತ್ತು 75 ಕೃತಕ ಬುದ್ಧಿಮತ್ತೆ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್, “ನಾವು ಸೋಮವಾರ ಕೃತಕ ಬುದ್ಧಿಮತ್ತೆಯಿಂದ ನಡೆಸಲ್ಪಡುವ ಒಟ್ಟು 75 ಉತ್ಪನ್ನಗಳನ್ನು ಬಿಡುಗಡೆ ಮಾಡುವ ಕಾರ್ಯಕ್ರಮವನ್ನು ನಡೆಸಲಿದ್ದೇವೆ. ಇದು ದೊಡ್ಡ ಕಾರ್ಯಕ್ರಮವಾಗದೆ. 75 ಉತ್ಪನ್ನಗಳ ಬಿಡುಗಡೆಯು 75 ವರ್ಷಗಳ ಆಜಾದಿ ಕಾ ಅಮೃತ್ ಮಹೋತ್ಸವದೊಂದಿಗೆ ಹೊಂದಿಕೆಯಾಗುತ್ತದೆ” ಎಂದಿದ್ದಾರೆ.
ರಕ್ಷಣಾ ಪಡೆಗಳಲ್ಲಿ ಕೃತಕ ಬುದ್ಧಿಮತ್ತೆ ಅನ್ನು ಹೈಲೈಟ್ ಮಾಡಿದ ಕುಮಾರ್, ಆಧುನಿಕ ಯುದ್ಧದ ಸ್ವರೂಪ ಬದಲಾಗಿದೆ ಮತ್ತು ಎಲ್ಲಾ ರೂಪಗಳಲ್ಲಿ ಕೃತಕ ಬುದ್ಧಿಮತ್ತೆಯು ಮಹತ್ವದ ಪಾತ್ರವನ್ನು ವಹಿಸಿದೆ ಎಂದು ಹೇಳಿದರು.
ಸೋಮವಾರ ಬಿಡುಗಡೆ ಮಾಡಲಿರುವ ಉತ್ಪನ್ನ, ಸೇವೆಗಳನ್ನು ಸೇನೆ, ನೌಕಾಪಡೆ ಮತ್ತು ವಾಯುಪಡೆ, DRDO, DPSU ಗಳು, ಸ್ಟಾರ್ಟ್ಅಪ್ಗಳು ಮತ್ತು ಖಾಸಗಿ ವಲಯದಿಂದ ಅಭಿವೃದ್ಧಿಪಡಿಸಲಾಗಿದೆ. 75 ಉತ್ಪನ್ನಗಳಲ್ಲಿ ಕೆಲವು ನಾಗರಿಕ ಬಳಕೆ ಸೇರಿದಂತೆ ದ್ವಿಬಳಕೆಯ ಉದ್ದೇಶಗಳಿಗಾಗಿರುತ್ತವೆ.
ಇದಲ್ಲದೆ, ಒಟ್ಟು 100 AI-ಸಕ್ರಿಯಗೊಳಿಸಿದ ಉತ್ಪನ್ನಗಳು ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ.
ಜುಲೈ 11 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಾರ್ವಜನಿಕ ಮತ್ತು ಖಾಸಗಿ ವಲಯದ ಇಬ್ಬರು ಉನ್ನತ ರಕ್ಷಣಾ ರಫ್ತುದಾರರನ್ನು ಸನ್ಮಾನಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.