ನವದೆಹಲಿ: ಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರು ʼಕಾಳಿʼ ಪೋಸ್ಟರ್ ಅನ್ನು ಟ್ವಿಟರ್ ಮೂಲಕ ಹಂಚಿಕೊಂಡು ಭಾರೀ ವಿವಾದಕ್ಕೆ ಕಾರಣರಾಗಿದ್ದರು. ಅವರ ವಿರುದ್ಧ ಭಾರೀ ಆಕ್ರೋಶಗಳೂ ವ್ಯಕ್ತವಾಗಿದ್ದವು. ಕೊನೆಗೆ ಪೋಸ್ಟರ್ ಪ್ರದರ್ಶಿಸಿದ್ದ ಕೆನಡಾದ ಅಗಾ ಖಾನ್ ಮ್ಯೂಸಿಯಂ ಕ್ಷಮೆಯಾಚಿಸಿ ಪೋಸ್ಟರ್ ಅನ್ನು ಹಿಂದಕ್ಕೆ ಪಡೆದುಕೊಂಡಿತ್ತು. ಈ ಟ್ವೀಟ್ ದೇಶಾದ್ಯಂತ ಆಕ್ರೋಶ ಮತ್ತು ಖಂಡನೆಯನ್ನು ಸೃಷ್ಟಿಸಿದ ನಂತರ, ಸಾಕ್ಷ್ಯಚಿತ್ರದ ಕುರಿತು ಲೀನಾ ಮಣಿಮೇಕಲೈ ಅವರ ಟ್ವೀಟ್ ಅನ್ನು ಟ್ವಿಟರ್ ಕೂಡ ಹಿಂತೆಗೆದುಕೊಂಡಿತು.
ಆದರೆ ಇಷ್ಟೆಲ್ಲಾ ನಡೆದರೂ ನಿರ್ಮಾಪಕಿ ಮಾತ್ರ ತಮ್ಮ ಅಹಂ ಅನ್ನು ಬಿಟ್ಟಿಲ್ಲ.ಇದೀಗ ಆಕೆ ಮತ್ತೊಂದು ಟ್ವಿಟ್ ಮಾಡಿದ್ದು, ಇದರಲ್ಲಿ ಶಿವ ಮತ್ತು ಪಾರ್ವತಿ ವೇಷಧಾರಿಗಳು ಸಿಗರೇಟು ಸೇವನೆ ಮಾಡುತ್ತಿರುವುದನ್ನು ಕಾಣಬಹುದು.
ಅವರ ಈ ವರ್ತನೆಗೆ ಭಾರೀ ಆಕ್ರೋಶಗಳು ವ್ಯಕ್ತವಾಗಿದ್ದು, ಆಕೆಯ ಹಿಂದೂ ವಿರೋಧಿ ಧೋರಣೆಗೆ ಆಕ್ರೋಶ ವ್ಯಕ್ತವಾಗಿದೆ.
Elsewhere…. pic.twitter.com/NGYFETMehj
— Leena Manimekalai (@LeenaManimekali) July 7, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.