ಬೆಂಗಳೂರು: ಡೌನ್ ಸಿಂಡ್ರೋಮ್ ಹೊಂದಿರುವ 23 ವರ್ಷ ವಯಸ್ಸಿನ ಬೆಂಗಳೂರು ಯುವತಿ ಪ್ರಮುಖ ಫ್ಯಾಷನ್ ಶೋಗೆ ಆಯ್ಕೆಯಾದ ಮೊದಲ ಭಾರತೀಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಗ್ಲೋಬಲ್ ಡೌನ್ ಸಿಂಡ್ರೋಮ್ ಫೌಂಡೇಶನ್ (ಗ್ಲೋಬಲ್)ನ ವಾರ್ಷಿಕ ಫ್ಯಾಷನ್ ಶೋ ʼಬಿ ಬ್ಯೂಟಿಫುಲ್, ಬಿ ಯುವರ್ಸೆಲ್ಫ್ʼಗೆ ಡೌನ್ ಸಿಂಡ್ರೋಮ್ ಹೊಂದಿರುವ 20 ಕ್ಕೂ ಹೆಚ್ಚು ಮಾಡೆಲ್ಗಳು ಆಯ್ಕೆಯಾಗಿದ್ದು, ಇದರಲ್ಲಿ ಭಾರತದ ರಿಝ ರೇಜೆ ಕೂಡ ಒಬ್ಬರು. ಇವರು ಅಧಿಕೃತವಾಗಿ ಆಯ್ಕೆಯಾದ ಮೊದಲ ಭಾರತೀಯರಾಗಿದ್ದಾರೆ. ಯುಎಸ್ನ ಡೆನ್ವರ್ನಲ್ಲಿ ನವೆಂಬರ್ 12 ರಂದು ಫ್ಯಾಶನ್ ಶೋ ನಡೆಸಲು ನಿರ್ಧರಿಸಲಾಗಿದೆ, ಡೌನ್ ಸಿಂಡ್ರೋಮ್ ಸಂಶೋಧನೆಗಾಗಿ ಹಣವನ್ನು ಇದರ ಮೂಲಕ ಸಂಗ್ರಹಿಸಲಾಗುತ್ತದೆ.
23 ವರ್ಷ ವಯಸ್ಸಿನ ರಿಜಾ ಕಲೆಯತ್ತ ಒಲವು ತೋರುತ್ತಿದ್ದರು. ಬೆಂಗಳೂರಿನ ಕ್ರಿಸಾಲಿಸ್ ಪರ್ಫಾರ್ಮೆನ್ಸ್ ಆರ್ಟ್ ಸೆಂಟರ್ನಲ್ಲಿ ರಂಗಭೂಮಿ ಅಭ್ಯಾಸಿಯಾಗಿರುವ ರಿಜಾ ವಿಶೇಷ ಅಗತ್ಯವುಳ್ಳ ಮಕ್ಕಳೊಂದಿಗೆ ಕೆಲಸ ಮಾಡುವ ಡಯಾನಾ ತೊಳೂರ್ ಅವರ ಬಳಿ ತರಬೇತಿ ಪಡೆದಿದ್ದಾರೆ. ರಿಜಾ ತರಬೇತಿ ಪಡೆದ ನೃತ್ಯಗಾರ್ತಿಯೂ ಹೌದು.
ಕಲೆ ಮತ್ತು ರಂಗಭೂಮಿ ತನ್ನ ಭಾವನೆಗಳನ್ನು ರೂಪಿಸಲು ಹೇಗೆ ಸಹಾಯ ಮಾಡಿದೆ ಎಂಬುದರ ಕುರಿತು ಮಾತನಾಡಿರುವ ರಿಜಾ, “ರಂಗಭೂಮಿ ನನ್ನ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಇದು ನನ್ನ ಆಲೋಚನೆಗಳು ಮತ್ತು ಭಾವನೆಗಳನ್ನು ತೆರೆಯಲು ಮತ್ತು ವ್ಯಕ್ತಪಡಿಸಲು ನನಗೆ ಸಹಾಯ ಮಾಡಿದೆ. ಇದು ಆಡಿಷನ್ಗಳ ಸಮಯದಲ್ಲಿ ನನ್ನನ್ನು ಪ್ರಸ್ತುತಪಡಿಸಲು ನನಗೆ ಸಹಾಯ ಮಾಡಿತು. ಈ ಫ್ಯಾಷನ್ ಈವೆಂಟ್ಗೆ ಭಾರತದಿಂದ ಆಯ್ಕೆಯಾದ ಏಕೈಕ ಸ್ಪರ್ಧಿಯಾಗಿರುವುದು ನನಗೆ ನಿಜವಾಗಿಯೂ ಆಶ್ಚರ್ಯಕರವಾಗಿದೆ. ನಾನು ಉತ್ಸುಕಳಾಗಿದ್ದೇನೆ. ನನ್ನ ಮೌಖಿಕ ಕೌಶಲ್ಯಗಳನ್ನು ಸಿದ್ಧಪಡಿಸಲು ನಾನು ಅಭ್ಯಾಸ ಮಾಡುತ್ತಿದ್ದೇನೆ ಮತ್ತು ಈವೆಂಟ್ಗಾಗಿ ನನ್ನ ಫ್ಯಾಷನ್ ಆಯ್ಕೆಗಳನ್ನು ಸಹ ಆಲೋಚಿಸುತ್ತಿದ್ದೇನೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.