ಬೆಂಗಳೂರು: ಭಾರತೀಯ ವಾಯು ಸೇನೆಯು ಅಪರೂಪದ ದಾಖಲೆಯೊಂದನ್ನು ನಿರ್ಮಾಣ ಮಾಡಿದೆ. ಇದೇ ಮೊದಲ ಬಾರಿಗೆ ತಂದೆ ಮತ್ತು ಮಗಳು ಒಟ್ಟಾಗಿ ಫೈಟರ್ ಜೆಟ್ ಹಾರಿಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ತಂದೆ ಮಗಳ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಫ್ಲೈಯಿಂಗ್ ಆಫೀಸರ್ ಆಗಿರುವ ಅನನ್ಯ ಮತ್ತು ಏರ್ ಕಮಾಂಡರ್ ಆಗಿರುವ ಸಂಜಯ್ ಶರ್ಮಾ ಈ ದಾಖಲೆ ಮಾಡಿರುವ ತಂದೆ ಮಗಳು. ಬೀದರ್ ನ ವಾಯು ಸೇನಾ ನಿಲ್ದಾಣದಲ್ಲಿ ಹಾಕ್-132 ವಿಮಾನವನ್ನು ಒಟ್ಟಿಗೆ ಇವರು ಹಾರಿಸಿದ್ದಾರೆ.
ಇವರು ಮೇ 30ರಂದು ಯುದ್ಧ ವಿಮಾನವನ್ನು ಹಾರಿಸಿದ್ದು, ಈ ಫೋಟೋ ವೈರಲ್ ಆಗಿದೆ.
ಅನನ್ಯ ಯುದ್ಧ ವಿಮಾನದಲ್ಲಿ ಪದವಿ ಪಡೆದುಕೊಂಡಿದ್ದು, ತರಬೇತಿ ಪಡೆದುಕೊಳ್ಳುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.