ನವದೆಹಲಿ: ಆರು ಟನ್ ಅಗತ್ಯ ಔಷಧಗಳನ್ನು ಒಳಗೊಂಡಿರುವ ಏಳನೇ ಬ್ಯಾಚ್ ವೈದ್ಯಕೀಯ ನೆರವನ್ನು ಭಾರತ ನಿನ್ನೆ ಅಫ್ಘಾನಿಸ್ತಾನಕ್ಕೆ ಪೂರೈಸಿದೆ. ಭಾರತದ ಮಾನವೀಯ ನೆರವಿನ ಭಾಗವಾಗಿ ಇದನ್ನು ಪೂರೈಸಲಾಗಿದ್ದು, ಕಾಬೂಲ್ನ ಇಂದಿರಾಗಾಂಧಿ ಆಸ್ಪತ್ರೆಗೆ ಹಸ್ತಾಂತರಿಸಲಾಗಿದೆ.
ಅಫ್ಘಾನ್ ಜನರಿಗೆ ಸಹಾಯ ಮಾಡಲು ವಿಶ್ವಸಂಸ್ಥೆಯ ತುರ್ತು ಮನವಿಗಳನ್ನು ಪರಿಗಣಿಸಿ, ಭಾರತವು ಇದುವರೆಗೆ ಏಳು ಬ್ಯಾಚ್ಗಳಲ್ಲಿ 20 ಟನ್ ವೈದ್ಯಕೀಯ ನೆರವು ನೀಡಿದೆ. ಇದು ಅಗತ್ಯ ಜೀವ ಉಳಿಸುವ ಔಷಧಿಗಳು, ಟಿಬಿ ವಿರೋಧಿ ಔಷಧಿಗಳು, ಐದು ಲಕ್ಷ ಡೋಸ್ ಕೋವಿಡ್ ಲಸಿಕೆಗಳನ್ನು ಒಳಗೊಂಡಿದೆ.
ಈ ವೈದ್ಯಕೀಯ ರವಾನೆಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಕಾಬೂಲ್ನಲ್ಲಿರುವ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ಹಸ್ತಾಂತರಿಸಲಾಗಿದೆ.
ಅಫ್ಘಾನಿಸ್ಥಾನದಲ್ಲಿ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು, ಭಾರತವು 35 ಸಾವಿರ ಟನ್ ಗೋಧಿಯನ್ನು ನೀಡಿದೆ. ಇದಲ್ಲದೆ, ಇತ್ತೀಚಿನ ಸಂಭವಿಸಿದ ಭೂಕಂಪದ ಹಿನ್ನೆಲೆಯಲ್ಲಿ, ಭಾರತವು ಮೊದಲ ಸ್ಪಂದಕನಾಗಿ ಎರಡು ವಿಮಾನಗಳಲ್ಲಿ ಸುಮಾರು 28 ಟನ್ಗಳಷ್ಟು ಭೂಕಂಪ ಪರಿಹಾರದ ನೆರವನ್ನು ಪೂರೈಸಿದೆ.
ಭಾರತವು ಅಫ್ಘಾನಿಸ್ಥಾನಕ್ಕೆ ಇನ್ನಷ್ಟು ಹೆಚ್ಚಿನ ವೈದ್ಯಕೀಯ ನೆರವು ಮತ್ತು ಗೋಧಿಯನ್ನು ಯುಎನ್ ಏಜೆನ್ಸಿಗಳ ಸಮನ್ವಯದೊಂದಿಗೆ ರವಾನಿಸುವ ಪ್ರಕ್ರಿಯೆಯಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.