ನವದೆಹಲಿ: ವಿದೇಶಿ ಗಣ್ಯರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ಕಲಾತ್ಮಕ ಸಂಪ್ರದಾಯಗಳನ್ನು ಪ್ರದರ್ಶಿಸುವ ಉಡುಗೊರೆಗಳನ್ನೇ ಹೆಚ್ಚಾಗಿ ಆಯ್ಕೆ ಮಾಡುತ್ತಾರೆ. ಈ ಬಾರಿ ಕೂಡ ಅವರು ಭಾರತದ ವೈಭವ ಪ್ರದರ್ಶಿಸುವ ಉಡುಗೊರೆಗಳನ್ನು ಜಾಗತಿಕ ನಾಯಕರಿಗೆ ಉಡುಗೊರೆಯಾಗಿ ನೀಡಿದ್ದಾರೆ.
G7 ಶೃಂಗಸಭೆಯಲ್ಲಿ ಭಾಗವಹಿಸಿದ ವಿವಿಧ ಸರ್ಕಾರದ ಮುಖ್ಯಸ್ಥರಿಗೆ ವಿವಿಧ ರಾಜ್ಯಗಳ ಕಲೆಯನ್ನು ಪ್ರತಿಬಿಂಬಿಸುವ ಉಡುಗೊರೆಯನ್ನು ಮೋದಿ ನೀಡಿದ್ದಾರೆ.ಅಮೆರಿಕಾ ಅಧ್ಯಕ್ಷರಿಗೆ ವಾರಣಾಸಿಯ GI-ಟ್ಯಾಗ್ ಹೊಂದಿದ ಗುಲಾಬಿ ಮೀನಕರಿ, ಕಫ್ಲಿಂಕ್ ಸೆಟ್ ಮತ್ತು ಬ್ರೂಕ್ ಅನ್ನು ಮೋದಿ ನೀಡಿದ್ದಾರೆ. ಜರ್ಮನ್ ಚಾನ್ಸೆಲರ್ ಅವರಿಗೆ ಮೆಟಲ್ ಮರೋಡಿ ಕೆತ್ತನೆಯ ಮಟ್ಕಾ ನೀಡಲಾಗಿದೆ. ಇದನ್ನು ಮೊರಾದಾಬಾದ್ನ ಮೇರುಕೃತಿ ಎಂದು ಪರಿಗಣಿಸಲಾಗಿದೆ.
ಮೋದಿ ಅವರು ಉತ್ತರ ಪ್ರದೇಶದ ನಿಜಾಮಾಬಾದ್ನ ಕಪ್ಪು ಮಡಿಕೆಗಳನ್ನು ಜಪಾನ್ನ ಪ್ರಧಾನಿಗೆ ಮತ್ತು ಕೈಯಿಂದ ತಯಾರಿಸಿದ ಪ್ಲಾಟಿನಂ ಪೇಂಟ್ ಟೀ ಸೆಟ್ಗಳನ್ನು ಬ್ರಿಟಿಷ್ ಪ್ರಧಾನಿಗೆ ಉಡುಗೊರೆಯಾಗಿ ನೀಡಿದ್ದಾರೆ.
ನೈಸರ್ಗಿಕ ಮೂಲಗಳಿಂದ ಪಡೆದ ಸುಗಂಧ ದ್ರವ್ಯ ಇಟ್ಟರ್ ಅನ್ನು ಫ್ರೆಂಚ್ ಅಧ್ಯಕ್ಷರಿಗೆ ನೀಡಿದ್ದಾರೆ. ಲಕ್ನೋದಲ್ಲಿ ರಚಿಸಲಾದ ಜರ್ದೋಜಿ ಬಾಕ್ಸ್ನಲ್ಲಿ ಈ ಸುಗಂಧ ದ್ರವ್ಯವನ್ನು ನೀಡಲಾಗಿದೆ. ಆಗ್ರಾದ ಟೇಬಲ್ ಟಾಪ್ ಅನ್ನು ಇಟಲಿ ಪ್ರಧಾನಿಗೆ ಉಡುಗೊರೆಯಾಗಿ ನೀಡಿದರು. ರಾಮ್ ದುರ್ಬರ್ ಅನ್ನು ಇಂಡೋನೇಷ್ಯಾ ಪ್ರಧಾನಿಗೆ ನೀಡಿದ್ದಾರೆ.
ಕಾಶ್ಮೀರದ ಸಿಲ್ಕ್ ಕಾರ್ಪೆಟ್ ಅನ್ನು ಕೆನಡಾ ಪ್ರಧಾನಿಗೆ, ರಾಮಾಯಣ ಮತ್ತು ನಂದಿ ವಿಷಯಗಳನ್ನು ಹೊಂದಿರುವ ಡೋಕ್ರಾ ಕಲೆಗಳನ್ನು ದಕ್ಷಿಣ ಆಫ್ರಿಕಾ ಮತ್ತು ಅರ್ಜೆಂಟೀನಾದ ಅಧ್ಯಕ್ಷರಿಗೆ ಮೋದಿ ಉಡುಗೊರೆ ನೀಡಿದ್ದಾರೆ.
ಹೀಗೆ ಪ್ರತಿಯೊಬ್ಬ ನಾಯಕನಿಗೂ ಮೋದಿ ಭಾರತದ ಘನತೆ ಸಾರುವ ಉಡುಗೊರೆಅಗಳನ್ನೇ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.