ಬೆಂಗಳೂರು: ಪಾಕಿಸ್ಥಾನದ ಕರೆಗಳನ್ನು ಸ್ಥಳೀಯ ಕರೆಗಳಾಗಿ ಕನ್ವರ್ಟ್ ಮಾಡುತ್ತಿದ್ದ ಗ್ಯಾಂಗ್ ಅನ್ನು ಬೆಂಗಳೂರಿನಲ್ಲಿ ಪತ್ತೆ ಮಾಡಿ ಬಂಧಿಸಲಾಗಿದೆ. ಭಾರತದ ಡಿಫೆನ್ಸ್ ಮಾಹಿತಿಗಾಗಿ ಪಾಕಿಸ್ತಾನ ಇಂಟೆಲಿಜೆನ್ಸ್ನಿಂದ ಕರೆ ಬರುತ್ತಿದ್ದವು ಎಂಬ ಶಂಕೆ ಆಧರಿಸಿ ಈ ಕಾರ್ಯಾಚರಣೆ ನಡೆದಿದೆ.
ಮಿಲಿಟರಿ ಇಂಟಲಿಜೆನ್ಸ್ ಮತ್ತು ಸಿಸಿಬಿಯ ಜಂಟಿ ಕಾರ್ಯಾಚರಣೆಯನ್ನು ನಡೆಸಿ ಅಂತಾರಾಷ್ಟ್ರೀಯ ಕರೆಗಳನ್ನು ಲೋಕಲ್ ಕರೆಗಳಿಗೆ ಕನ್ವರ್ಟ್ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿದೆ. ಪಾಕಿಸ್ತಾನದ ಇಂಟಲಿಜೆನ್ಸ್ ಕರೆಗಳನ್ನು ಸಿಮ್ ಬಾಕ್ಸ್ ಮೂಲಕ ಲೋಕಲ್ ಕರೆಗಳಾಗಿ ಕನ್ವರ್ಟ್ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.
58 ಸಿಮ್ ಬಾಕ್ಸ್ ಗಳ ಮೂಲಕ 2144 ಸಿಮ್ ಬಳಸಿ ಇಂಟರ್ ನ್ಯಾಷನಲ್ ಕರೆಗಳನ್ನು ಲೋಕಲ್ ಕರೆಗಳಾಗಿ ಕನ್ವರ್ಟ್ ಮಾಡುತ್ತಿದ್ದ ಗ್ಯಾಂಗ್ ಪೋಲಿಸರ ಬಲೆಗೆ ಬಿದ್ದಿದೆ.
ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಅಂತಾರಾಷ್ಟ್ರೀಯ ಕರೆಗಳನ್ನು ಲೋಕಲ್ ಕಾಲ್ ಆಗಿ ಕನ್ವರ್ಟ್ ಮಾಡಲಾಗುತಿತ್ತು. ಸೇನೆಯ ಮಾಹಿತಿ ಪಡೆಯಲು ಪಾಕಿಸ್ತಾನದ ಇಂಟಲಿಜೆನ್ಸ್ನಿಂದ ಸಹ ಕರೆ ಬಂದಿರುವುದು ಬೆಳಕಿಗೆ ಬಂದಿದೆ. ಖಚಿತ ಮಾಹಿತಿ ಮೇರೆಗೆ ಕೇರಳ ವಯನಾಡ್ ಮೂಲದ ಶರಾಫುದ್ದೀನ್ ಎಂಬಾತನನ್ನು ಬಂಧಿಸಿಲಾಗಿದೆ. ಈತ ಬೆಂಗಳೂರಿನ ನಾಲ್ಕು ಸ್ಥಳಗಳಲ್ಲಿ ಸಿಮ್ ಬಾಕ್ಸ್ ಇಟ್ಟಿದ್ದ ಎನ್ನಲಾಗಿದೆ.
ಈ ಬಗ್ಗೆ ಆಳವಾದ ತನಿಖೆಯನ್ನು ಸಿಸಿಬಿ ಕ್ರೈಂ ಬ್ರಾಂಚ್ ಮುಂದುವರೆಸಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.