ನವದೆಹಲಿ: ಈ ವರ್ಷಾಂತ್ಯದೊಳಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಸುವ ಬಲವಾದ ಸಾಧ್ಯತೆಯಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಹೇಳಿದ್ದಾರೆ.
“ಇತ್ತೀಚೆಗೆ ಡಿಲಿಮಿಟೇಶನ್ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಹಿಂದೆ ಜಮ್ಮು ಪ್ರದೇಶದಲ್ಲಿ 37 ವಿಧಾನಸಭಾ ಸ್ಥಾನಗಳು ಇತ್ತು ಮತ್ತು ಕಾಶ್ಮೀರ 46 ಸ್ಥಾನಗಳನ್ನು ಹೊಂದಿತ್ತು. ಆದರೆ ಈಗ 90 ಸ್ಥಾನಗಳನ್ನು ಹೊಂದಿರುವ ಹೊಸ ವಿಧಾನಸಭೆಯಲ್ಲಿ ಜಮ್ಮು 43 ಮತ್ತು ಕಾಶ್ಮೀರ 47 ಸ್ಥಾನಗಳನ್ನು ಹೊಂದಿದೆ. ಈ ವರ್ಷದ ಅಂತ್ಯದ ವೇಳೆಗೆ ಚುನಾವಣಾ ಪ್ರಕ್ರಿಯೆಯು ಪ್ರಾರಂಭವಾಗಲಿದೆ ಎಂದು ನಾನು ಭಾವಿಸುತ್ತೇನೆ” ಅವರು ಮಹಾರಾಜ ಗುಲಾಬ್ ಸಿಂಗ್ ಅವರ ಪಟ್ಟಾಭಿಷೇಕದ 200 ನೇ ವರ್ಷವನ್ನು ಆಚರಿಸಲು ಜಮ್ಮು-ಕಾಶ್ಮೀರದಲ್ಲಿ ನಡೆದ ಸಮಾರಂಭವನ್ನು ಉದ್ದೇಶಿಸಿ ರಾಜನಾಥ್ ಹೇಳಿದರು.
ನಾಲ್ಕು ವರ್ಷಗಳ ಹಿಂದೆ ಜೂನ್ 19, 2018 ರಂದು ಭದ್ರತಾ ಪರಿಸ್ಥಿತಿಯ ಕಾರಣ ಪಿಡಿಪಿ ಮತ್ತು ಬಿಜೆಪಿ ಮೈತ್ರಿಯಿಂದ ಹೊರಬಂದ ನಂತರ ಅಲ್ಲಿ ಯಾವುದೇ ಸರ್ಕಾರ ರಚನೆ ಆಗಿಲ್ಲ.
ಚುನಾವಣಾ ಆಯೋಗವು ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾರರ ಪಟ್ಟಿಗಳ ಪರಿಷ್ಕರಣೆಯನ್ನು ಪ್ರಾರಂಭಿಸಿದೆ ಮತ್ತು ಆಗಸ್ಟ್ 31 ರೊಳಗೆ ಕರಡು ಪಟ್ಟಿಯನ್ನು ಸಿದ್ಧಪಡಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.