ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಸರ್ಕಾರದ ಇ-ಮಾರುಕಟ್ಟೆ ವೇದಿಕೆ ಆದೇಶ ವಿಸ್ತರಿಸಲು ಅನುಮೋದನೆಯನ್ನು ನೀಡಿದೆ. ಇದರಿಂದಾಗಿ ಇನ್ನು ಮುಂದೆ ಸರ್ಕಾರಿ ಇ-ಮಾರುಕಟ್ಟೆ ಮೂಲಕ ಸಹಕಾರಿ ಸಂಸ್ಥೆಗಳು ಖರೀದಿದಾರರಾಗಿ ಖರೀದಿ ಮಾಡಬಹುದಾಗಿದೆ.
ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ನಿನ್ನೆ ದೆಹಲಿಯಲ್ಲಿ ಸಂಪುಟದ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಂದರ್ಭದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಮುಕ್ತ ಮತ್ತು ಪಾರದರ್ಶಕ ಪ್ರಕ್ರಿಯೆಯ ಮೂಲಕ ಸ್ಪರ್ಧಾತ್ಮಕ ಬೆಲೆಗಳನ್ನು ಪಡೆಯಲು ಸಹಕಾರಿ ಸಂಸ್ಥೆಗಳಿಗೆ ಈ ಕ್ರಮವು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
8.54 ಲಕ್ಷ ನೋಂದಾಯಿತ ಸಹಕಾರಿಗಳು ಮತ್ತು ಅವರ 27 ಕೋಟಿ ಸದಸ್ಯರು ಈ ನಿರ್ಧಾರದಿಂದ ಪ್ರಯೋಜನ ಪಡೆಯಲಿದ್ದಾರೆ ಎಂದಿದ್ದಾರೆ.
ಸಹಕಾರಿ ಸಚಿವಾಲಯವು GeMನಲ್ಲಿ ಒಳಗೊಳ್ಳಬೇಕಾದ ಸಹಕಾರಿಗಳ ಮೌಲ್ಯೀಕರಿಸಿದ ಪಟ್ಟಿಯನ್ನು ನಿರ್ಧರಿಸುತ್ತದೆ. ಸಹಕಾರಿ ಸಂಸ್ಥೆಗಳಿಗೆ GeM ಮೀಸಲಾದ ಆನ್ಬೋರ್ಡಿಂಗ್ ಪ್ರಕ್ರಿಯೆಯನ್ನು ಒದಗಿಸುತ್ತದೆ ಎಂದು ಠಾಕೂರ್ ಹೇಳಿದ್ದಾರೆ.
GEM ಪೋರ್ಟಲ್ ಅನ್ನು ತೆರೆದ ನಂತರ, ಸ್ವ-ಸಹಾಯ ಗುಂಪುಗಳು, ಎಂಎಸ್ಎಂಇಗಳು ಮತ್ತು ಸಣ್ಣ ಉದ್ಯಮಗಳು ಬಹಳಷ್ಟು ಪ್ರಯೋಜನ ಪಡೆದಿವೆ. ವಿವಿಧ ಪಿಎಸ್ಯುಗಳು, ಸಚಿವಾಲಯಗಳು, ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು ಅಥವಾ ಸರ್ಕಾರದ ಸ್ಥಳೀಯ ಸಂಸ್ಥೆಗಳು GeM ಪೋರ್ಟಲ್ನಿಂದ ಖರೀದಿಸಲು ಪ್ರಾರಂಭಿಸಿವೆ ಎಂದು ಅವರು ಹೇಳಿದ್ದಾರೆ.
ಸರ್ಕಾರಿ ಖರೀದಿದಾರರಿಗೆ ಮುಕ್ತ ಮತ್ತು ಪಾರದರ್ಶಕ ಸಂಗ್ರಹಣೆ ವೇದಿಕೆಯನ್ನು ರಚಿಸಲು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಆಗಸ್ಟ್ 9, 2016 ರಂದು ಸರ್ಕಾರಿ ಇ-ಮಾರುಕಟ್ಟೆ ವೇದಿಕೆ ಪ್ರಾರಂಭಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.