ಇಂದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣದಲ್ಲಿ 8 ವರ್ಷಗಳನ್ನು ಪೂರ್ಣಗೊಳಿಸಿದೆ. ಅಧಿಕಾರವಧಿಯ 8 ವರ್ಷಗಳಲ್ಲಿ ಮೋದಿ ಸರ್ಕಾರ ಜಾರಿಗೆ ತಂದ ಪ್ರತಿಯೊಂದು ಯೋಜನೆಯು ಜನ ಸಾಮಾನ್ಯರ ಸಬಲೀಕರಣದಲ್ಲಿ ಮಹತ್ತರವಾದ ಪಾತ್ರ ವಹಿಸಿದೆ. ಈ ಯೋಜನೆಗಳ ಪ್ರಯೋಜನಗಳು 100% ಅರ್ಹ ಜನರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ರಾಷ್ಟ್ರದ ಸಂಕಲ್ಪವಾಗಿದೆ ಎಂದು ಪ್ರಧಾನ ಮಂತ್ರಿ ಆಗಾಗ ಹೇಳುತ್ತರೇ ಇರುತ್ತಾರೆ. ಈ ನಿಟ್ಟಿನಲ್ಲಿ ಅವರ ಪ್ರಯತ್ನವೂ ಮೆಚ್ಚುಗೆಗೆ ಪಾತ್ರವಾಗಿದೆ. ದೇಶದ ಕೋಟ್ಯಂತರ ನಾಗರಿಕರ ಕುಟುಂಬದ ಸದಸ್ಯನಾಗಿ ಅವರು ಕೆಲಸ ಮಾಡುತ್ತಿದ್ದಾರೆ. ನಿಜವಾದ ಅರ್ಥದಲ್ಲಿ ಅವರೊಬ್ಬ ಪ್ರಧಾನಸೇವಕ. ಬಡವರ ಕಲ್ಯಾಣ ಯೋಜನೆಗಳಿಂದ ಅರ್ಹ ಫಲಾನುಭವಿಗಳು ಹೊರಗುಳಿಯಬಾರದು ಎಂಬ ಆಶಯದೊಂದಿಗೆ ಅವರು ಸೇವಕನಂತೆ ಕರ್ತವ್ಯ ನಿಭಾಯಿಸುತ್ತಿದ್ದಾರೆ..
ಲಕ್ಷಾಂತರ ನಾಗರಿಕರ ಮುಖದಲ್ಲಿ ನಗುವನ್ನು ತಂದ ಮೋದಿ ಸರ್ಕಾರದ ಮೈಲಿಗಲ್ಲುಗಳ ಪಟ್ಟಿ ಇಂತಿದೆ
⦁ 6 ಲಕ್ಷ ಗ್ರಾಮಗಳನ್ನು ಬಯಲು ಶೌಚ ಮುಕ್ತ ಎಂದು ಘೋಷಿಸಲಾಗಿದೆ.
⦁ 2.6 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕಗಳು ತಲುಪಿವೆ
⦁ 45 ಕೋಟಿ ಜನರಿಗೆ ಮೊದಲ ಬಾರಿಗೆ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ.
⦁ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ಬಡವರು ತಿಂಗಳಿಗೆ 1 ರೂ ನಲ್ಲಿ ವಿಮೆ ಮಾಡಬಹುದು.
⦁ ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ 20 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳಲ್ಲಿ ನಗದು ವರ್ಗಾವಣೆಯಾಗಿದೆ.
⦁ ಪಿಎಂ ಕಿಸಾನ್ ಅಡಿಯಲ್ಲಿ, 11.78 ಕೋಟಿ ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಷಕ್ಕೆ 6,000 ರೂ ಸ್ವೀಕರಿಸಿದ್ದಾರೆ.
⦁ ಮುದ್ರಾ ಯೋಜನೆಯ 68% ಫಲಾನುಭವಿಗಳು ಮಹಿಳೆಯರು.
⦁ ಕಳೆದ 8 ವರ್ಷಗಳಲ್ಲಿ ಒಟ್ಟು 22 ಏಮ್ಸ್ಗಳಲ್ಲಿ 15 ಅನ್ನು ಸ್ಥಾಪನೆ ಮಾಡಲಾಗಿದೆ.
⦁ ಲಾಕ್ಡೌನ್ ಸಮಯದಲ್ಲಿ 80 ಕೋಟಿ ಜನರಿಗೆ ಉಚಿತ ಪಡಿತರ ನೀಡಲಾಗಿದೆ.
⦁ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ, 3.28 ಕೋಟಿ ಜನರು ರೂ5 ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯುತ್ತಾರೆ.
⦁ 9.5 ಕೋಟಿಗೂ ಹೆಚ್ಚು ಮನೆಗಳು ನಲ್ಲಿ ನೀರಿನ ಸಂಪರ್ಕವನ್ನು ಹೊಂದಿವೆ.
⦁ 9.17 ಕೋಟಿ ಗ್ಯಾಸ್ ಸಂಪರ್ಕಗಳನ್ನು ಮಹಿಳೆಯರಿಗೆ ನೀಡಲಾಗಿದೆ
⦁ ಮುದ್ರಾ ಸಾಲವನ್ನು 35 ಕೋಟಿಗೂ ಹೆಚ್ಚು ಜನರಿಗೆ ನೀಡಲಾಗಿದೆ
⦁ ಪಿಎಂ ಸ್ವನಿಧಿ ಅಡಿಯಲ್ಲಿ, ಸಾಂಕ್ರಾಮಿಕ ಸಮಯದಲ್ಲಿ 31.9 ಲಕ್ಷ ಬೀದಿ ವ್ಯಾಪಾರಿಗಳಿಗೆ ಮೇಲಾಧಾರ ರಹಿತ ಸಾಲವನ್ನು ಒದಗಿಸಲಾಗಿದೆ
⦁ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ, 3 ಕೋಟಿಗೂ ಹೆಚ್ಚು ಕುಟುಂಬಗಳು ಸ್ವಂತ ಮನೆಗಳನ್ನು ಪಡೆದಿವೆ.
ಮೋದಿ ಸರ್ಕಾರದ ಈ ಸಾಧನೆಗಳು ಜನ ಜೀವನ ಸುಧಾರಿಸುವಲ್ಲಿ ಮಹತ್ವದ ಕೊಡುಗೆ ನೀಡಿದೆ. ಇಷ್ಟು ಮಾತ್ರವಲ್ಲದೇ ಆತ್ಮನಿರ್ಭರ ಭಾರತದ ಮೂಲಕ ದೇಶದ ಉತ್ಪಾದನಾ ವಲಯವನ್ನು ಸಂಪೂರ್ಣವಾಗಿ ದೇಶೀಕರಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಸ್ಟ್ಯಾಂಡ್ ಅಪ್ ಇಂಡಿಯಾ, ಸ್ಟಾರ್ಟ್-ಇಂಡಿಯಾ ಯುವ ಜನತೆಯನ್ನು ಸಬಲೀಕರಿಸುತ್ತಿದೆ.
ಕೇಂದ್ರ ಮತ್ತು ರಾಜ್ಯಗಳ ಬಿಜೆಪಿ ಸರ್ಕಾರದ ಎಲ್ಲಾ ಸಚಿವರು ಮತ್ತು ಅದರ ಚುನಾಯಿತ ಪ್ರತಿನಿಧಿಗಳು ಮೋದಿ ಸರ್ಕಾರದ ಎಂಟನೇ ವರ್ಷಗಳನ್ನು ಗುರುತಿಸಲು ಬೃಹತ್ ಸಾರ್ವಜನಿಕ ಸಂಪರ್ಕ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಜನಪರ ಯೋಜನೆಗಳ ಬಗ್ಗೆ ಜನರಿಗೆ ಹೆಚ್ಚು ಹೆಚ್ಚು ತಲುಪುವಂತೆ ಮಾಡುವ ಪ್ರಯತ್ನವನ್ನೂ ಮಾಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.