ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ)ಯು ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ 12 ಸ್ವಾತಿ ವೆಪನ್ ಲೊಕೇಟಿಂಗ್ ರಾಡಾರ್ (ಡಬ್ಲ್ಯುಎಲ್ಆರ್ಎಸ್)ಗಳನ್ನು ಸ್ವಾಧೀನಪಡಿಸಿಕೊಳ್ಳಲು ಭಾರತೀಯ ಸೇನೆಯು ಯೋಜಿಸುತ್ತಿದೆ.
ಸುಮಾರು 950 ಕೋಟಿ ರೂಪಾಯಿಗೆ ಈ ಖರೀದಿ ನಡೆಯಲಿದ್ದು, ಇದು ಚೀನಾದೊಂದಿಗಿನ ಗಡಿಯಲ್ಲಿ ನಿಯೋಜನೆಗೊಂಡಿರುವ ಸೇನಾಪಡೆಗಳಿಗೆ ಹೆಚ್ಚಿನ ಬಲ ತಂದುಕೊಡಲಿದೆ.
ಶತ್ರುಗಳು ಹಾರಿಸಿದ ಫಿರಂಗಿ ಬಂದೂಕುಗಳ ನಿಖರವಾದ ಸ್ಥಳವನ್ನು ತಿಳಿಸುವಲ್ಲಿ ಸ್ವಾತಿ ಡಬ್ಲ್ಯುಎಲ್ಆರ್ಎಸ್ ಪಡೆಗಳಿಗೆ ಸಹಾಯ ಮಾಡುತ್ತದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ರಾಡಾರ್ ವಿವಿಧ ಸ್ಥಳಗಳಲ್ಲಿ ವಿವಿಧ ಶಸ್ತ್ರಾಸ್ತ್ರಗಳಿಂದ ಹಾರಿಸಲಾದ ಅನೇಕ ಸ್ಪೋಟಕಗಳನ್ನು ಏಕಕಾಲದಲ್ಲಿ ನಿಭಾಯಿಸಬಲ್ಲದು.
ಮುಂಬರುವ ಮಹತ್ವದ ಸಭೆಯಲ್ಲಿ ರಕ್ಷಣಾ ಸಚಿವಾಲಯವು ಇದರ ಖರೀದಿಗೆ ಅನುಮೋದನೆ ನೀಡುವ ನಿರೀಕ್ಷೆಯಿದೆ.
ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ತನ್ನ ಕಾರ್ಯಾಚರಣೆಗಳಿಗೆ ಇದೇ ರಾಡಾರ್ಗಳನ್ನು ಬಳಸುತ್ತಿದೆ, ಅಲ್ಲಿ ಪಾಕಿಸ್ಥಾನಿ ದಾಳಿಯ ಮೂಲವನ್ನು ಪತ್ತೆಹಚ್ಚಲು ಈ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಈ ವ್ಯವಸ್ಥೆಯನ್ನು 2018 ರಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಭಾರತೀಯ ಸೇನೆಗೆ ಹಸ್ತಾಂತರಿಸಲಾಯಿತು.
ವರದಿಗಳ ಪ್ರಕಾರ, ಅರ್ಮೇನಿಯಾ ಇತ್ತೀಚೆಗೆ ಸ್ವಾತಿ ವೆಪನ್ ಲೊಕೇಟಿಂಗ್ ರಾಡಾರ್ಗಳನ್ನು ಖರೀದಿ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.