ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಮಾರ್ಚ್ 2022 ರಲ್ಲಿ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ನಿರ್ವಹಣೆಗೆ ಸಂಬಂಧಿಸಿದಂತೆ ವಿಶ್ವದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ ಎಂದು ಜಾಗತಿಕ ಟ್ರಾವೆಲ್ ಡೇಟಾ ಪೂರೈಕೆದಾರರಾದ ಅಫೀಶಿಯಲ್ ಏರ್ಲೈನ್ ಗೈಡ್ (OAG) ಅಧ್ಯಯನ ಹೇಳಿದೆ.
ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹಿಂದಿಕ್ಕಿ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎರಡನೇ ಸ್ಥಾನ ಪಡೆದುಕೊಂಡಿದೆ. ದುಬೈ ಮೂರನೇ ಸ್ಥಾನದಲ್ಲಿದೆ.
ಯುನೈಟೆಡ್ ಸ್ಟೇಟ್ಸ್ನ ಅಟ್ಲಾಂಟಾ ವಿಮಾನ ನಿಲ್ದಾಣವು ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವೆಂದು ಶ್ರೇಯಾಂಕ ಪಡೆದಿದೆ ಮತ್ತು ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ.
ಸಾಂಕ್ರಾಮಿಕ ರೋಗಕ್ಕೂ ಮುನ್ನ ದೆಹಲಿ ವಿಮಾನ ನಿಲ್ದಾಣವು ಮಾರ್ಚ್ 2019 ರಲ್ಲಿ 23 ನೇ ಸ್ಥಾನದಲ್ಲಿತ್ತು ಮತ್ತು 2ನೇ ಸ್ಥಾನವನ್ನು ತಲುಪಲು 21 ಸ್ಥಾನಗಳನ್ನು ಜಿಗಿತ ಕಂಡಿದೆ. ಈ ವರ್ಷದ ಮಾರ್ಚ್ನಲ್ಲಿ, ಯುಎಸ್ನ ಅಟ್ಲಾಂಟಾ, ಭಾರತದ ದೆಹಲಿ ಮತ್ತು ಯುಎಇಯ ದುಬೈನಲ್ಲಿನ ವಿಮಾನ ನಿಲ್ದಾಣಗಳು ಕ್ರಮವಾಗಿ 4.42 ಮಿಲಿಯನ್, 3.61 ಮಿಲಿಯನ್ ಮತ್ತು 3.55 ಮಿಲಿಯನ್ ಸೀಟುಗಳನ್ನು ನಿರ್ವಹಿಸಿವೆ ಎಂದು ವರದಿ ಉಲ್ಲೇಖಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.