ನವದೆಹಲಿ: ಡ್ರೋನ್ ಸೇವಾ ವಲಯವು 4-5 ವರ್ಷಗಳಲ್ಲಿ ಒಂದು ಲಕ್ಷ ಉದ್ಯೋಗಗಳನ್ನು ಒದಗಿಸಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
ಡ್ರೋನ್ ಸೇವಾ ವಲಯವು ದೊಡ್ಡ ಭರವಸೆಯನ್ನು ಹೊಂದಿದೆ ಮತ್ತು ಮುಂದಿನ ನಾಲ್ಕೈದು ವರ್ಷಗಳಲ್ಲಿ ಸುಮಾರು ಒಂದು ಲಕ್ಷ ಉದ್ಯೋಗಗಳನ್ನು ಒದಗಿಸಲಿದೆ. ನಾವು ಡ್ರೋನ್ ವಲಯಕ್ಕೆ ಉತ್ಪಾದಕತೆ-ಸಂಯೋಜಿತ ಯೋಜನೆಯನ್ನು ತಂದಿದ್ದೇವೆ ಎಂದಿದ್ದಾರೆ.
ಕಳೆದ ವರ್ಷ ಘೋಷಿಸಲಾದ ಪಿಎಲ್ಐ ಯೋಜನೆಯಡಿ, ಡ್ರೋನ್ಗಳು ಮತ್ತು ಡ್ರೋನ್ ಘಟಕಗಳ ತಯಾರಕರಿಗೆ ಮುಂದಿನ ಮೂರು ವರ್ಷಗಳಲ್ಲಿ ಕಂಪನಿಯು ಮಾಡಿದ ಮೌಲ್ಯವರ್ಧನೆಯ ಶೇ. 20 ರಷ್ಟು ಪ್ರೋತ್ಸಾಹಕ ಸಿಗುತ್ತದೆ ಎಂದಿದ್ದಾರೆ.
”ಡ್ರೋನ್ ಉತ್ಪಾದನೆಗೆ ಹೂಡಿಕೆಯ ವಿಷಯದಲ್ಲಿ ನಾವು ಸುಮಾರು 5,000 ಕೋಟಿ ರೂಪಾಯಿಗಳ ತ್ವರಿತ ವಿಸ್ತರಣೆಯನ್ನು ನೋಡುತ್ತಿದ್ದೇವೆ” ಎಂದು ಹೇಳಿದ್ದಾರೆ.
”ಡ್ರೋನ್ ಸೇವಾ ವಲಯದಲ್ಲಿ ಮುಂದಿನ ನಾಲ್ಕೈದು ವರ್ಷಗಳಲ್ಲಿ 1,00,000 ಉದ್ಯೋಗಗಳ ಸೃಷ್ಟಿಯನ್ನು ನಾವು ಎದುರು ನೋಡುತ್ತಿದ್ದೇವೆ. ಇದು ಭರವಸೆಯ ಕ್ಷೇತ್ರವಾಗಿದ” ಎಂದಿದ್ದಾರೆ.
ಭಾರತವು ತ್ವರಿತ ನಗರೀಕರಣಕ್ಕೆ ಒಳಗಾಗುತ್ತಿದೆ ಮತ್ತು 2031 ರ ವೇಳೆಗೆ ನಮ್ಮ ರಾಷ್ಟ್ರೀಯ ಆದಾಯದ 75 ಪ್ರತಿಶತವು ನಗರಗಳಿಂದ ಬರಲಿದೆ ಎಂದು ಅವರು ಹೇಳಿದರು, ಮುಂಬರುವ ದಶಕದಲ್ಲಿ ಭಾರತದ ಭವಿಷ್ಯವನ್ನು ನಿರ್ಧರಿಸುವಲ್ಲಿ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಪ್ರಮುಖ ಪಾತ್ರ ವಹಿಸಲಿವೆ ಎಂದಿದ್ದಾರೆ.
ದೇಶವು ಇದೀಗ ಸರಿಸುಮಾರು 140 ವಿಮಾನ ನಿಲ್ದಾಣಗಳನ್ನು ಹೊಂದಿದೆ ಮತ್ತು ಮುಂದಿನ ನಾಲ್ಕೈದು ವರ್ಷಗಳಲ್ಲಿ ಅವುಗಳನ್ನು 50 ಪ್ರತಿಶತದಷ್ಟು ಹೆಚ್ಚಿಸಲು ಸರ್ಕಾರ ಯೋಜಿಸಿದೆ ಎಂದು ಅವರು ಹೇಳಿದ್ದಾರೆ.
ಮುಂಬರುವ ಐದು ವರ್ಷಗಳಲ್ಲಿ ದೇಶವು ತನ್ನ ವಾಣಿಜ್ಯ ಫ್ಲೀಟ್ ಗಾತ್ರವನ್ನು ಪ್ರಸ್ತುತ 710 ವಿಮಾನಗಳಿಂದ 1,200 ವಿಮಾನಗಳಿಗೆ ಹೆಚ್ಚಿಸಲಿದೆ ಎಂದು ಅವರು ಹೇಳಿದರು. ಸರ್ಕಾರವು ಡ್ರೋನ್ ತರಬೇತಿ ಸಂಸ್ಥೆಗಳನ್ನು ಶೀಘ್ರವಾಗಿ ವಿಸ್ತರಿಸಲು ನೋಡುತ್ತಿದೆ ಮತ್ತು ಮುಂಬರುವ ಕೆಲವು ವರ್ಷಗಳಲ್ಲಿ ಅವುಗಳ ಸಂಖ್ಯೆಯನ್ನು 34 ರಿಂದ 58 ಕ್ಕೆ ಹೆಚ್ಚಿಸಲಿದೆ ಎಂದು ಅವರು ಹೇಳಿದರು.
ಜಾಗತಿಕ ವಿಮಾನ ಘಟಕಗಳ ಉದ್ಯಮವು ಭಾರತದಲ್ಲಿ ಚಿಮ್ಮುತ್ತಿದೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.