ನವದೆಹಲಿ: 2014 ರಿಂದ ಕೇಂದ್ರ ಸರ್ಕಾರವು ದೇಶದ ಉತ್ಪಾದನಾ ವಲಯವನ್ನು ಉತ್ತೇಜಿಸುತ್ತಿದೆ ಮತ್ತು ಭಾರತವು ಆತ್ಮನಿರ್ಭರವಾಗುವುದನ್ನು ಖಚಿತಪಡಿಸಿಕೊಳ್ಳಲು ಅನೇಕ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರದ ಕ್ರಮಗಳು ಈಗ ಫಲ ನೀಡುತ್ತಿವೆ.
ಮಾರ್ಚ್ 31, 2022ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಮೊಬೈಲ್ ಫೋನ್ಗಳ ರಫ್ತಿನಲ್ಲಿ ದೇಶದ ಒಟ್ಟು ಮೌಲ್ಯವು 43,500 ಕೋಟಿ ರೂಪಾಯಿಗಳನ್ನು ದಾಟುವ ನಿರೀಕ್ಷೆಯಿದೆ ಎಂದು ಇಂಡಿಯಾ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ICEA) ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ. ಇದು 2020-21ರ ಅವಧಿಗಿಂತ 75 ಪ್ರತಿಶತದಷ್ಟು ಜಿಗಿತವಾಗಿದೆ.
2020-21ರಲ್ಲಿ ದೇಶದಿಂದ ರಫ್ತಾಗಿರುವ ಮೊಬೈಲ್ ಫೋನ್ಗಳ ಒಟ್ಟು ಮೌಲ್ಯ 24,000 ಕೋಟಿ ರೂ.
“ನಾವು ಈ ಆರ್ಥಿಕ ವರ್ಷದ ಅಂತ್ಯಕ್ಕೆ USD 5.7 ಶತಕೋಟಿ ರಫ್ತುಗಳನ್ನು ದಾಟುತ್ತೇವೆ” ಎಂದು ICEA ಅಧ್ಯಕ್ಷ ಪಂಕಜ್ ಮೊಹಿಂದ್ರ ಅವರು ಹೇಳಿದ್ದಾರೆ.
“ಅತ್ಯಂತ ಕಷ್ಟಕರ ಸಮಯದಲ್ಲಿ ಸ್ಮಾರ್ಟ್ಫೋನ್ ರಫ್ತಿನಲ್ಲಿ ಅಭೂತಪೂರ್ವ ಹೆಚ್ಚಳವು ಸರ್ಕಾರಿ-ಉದ್ಯಮ ಪಾಲುದಾರಿಕೆಗೆ ಸಂದ ಗೌರವವಾಗಿದೆ. ಮೊಬೈಲ್ ಉದ್ಯಮವನ್ನು ಸರ್ಕಾರ ತನ್ನ ದೃಷ್ಟಿ ಮತ್ತು ನಂಬಿಕೆಯೊಂದಿಗೆ ಮುನ್ನಡೆಸಿದೆ. ಇದಕ್ಕೆ ಪ್ರತಿಯಾಗಿ ಉದ್ಯಮವು ಆತ್ಮನಿರ್ಭರ ಭಾರತವನ್ನು ಮೇಕ್ ಇನ್ ಇಂಡಿಯಾ ಫಾರ್ ವರ್ಲ್ಡ್ ಎಂದು ಮರುವ್ಯಾಖ್ಯಾನಿಸಿದೆ ” ಎಂದಿದ್ದಾರೆ.
ಮೊದಲು, ಮೊಬೈಲ್ ಫೋನ್ ರಫ್ತಿನ ಬಹುಪಾಲು ದಕ್ಷಿಣ ಏಷ್ಯಾ ಮತ್ತು ಆಫ್ರಿಕಾಕ್ಕೆ ಸೀಮಿತವಾಗಿತ್ತು. ಆದರೆ ಈಗ, ಭಾರತ್ನಲ್ಲಿ ತಯಾರಿಸಲಾದ ಫೋನ್ಗಳನ್ನು ಯುರೋಪ್ ಮತ್ತು ಅಭಿವೃದ್ಧಿ ಹೊಂದಿದ ಏಷ್ಯಾದ ಮಾರುಕಟ್ಟೆಗಳಿಗೆ ತಲುಪುತ್ತಿದೆ, ಇದು ಉತ್ಪಾದನಾ ಗುಣಮಟ್ಟದಲ್ಲಿ ಭಾರಿ ಸುಧಾರಣೆಯನ್ನು ಸೂಚಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.