ನವದೆಹಲಿ: ಆಯುಷ್ ಸಚಿವಾಲಯವು ಸಂಧಿವಾತ (Rheumatoid Arthritis) ಚಿಕಿತ್ಸೆಯಲ್ಲಿ ಆಯುರ್ವೇದದ ಪರಿಣಾಮಕಾರಿತ್ವವನ್ನು ಪರಿಶೀಲಿಸುವ ವಿಶ್ವದ ಮೊದಲ ಮಲ್ಟಿಸೆಂಟರ್ ಹಂತ III ಕ್ಲಿನಿಕಲ್ ಪ್ರಯೋಗವನ್ನು ನಡೆಸುತ್ತಿದೆ ಎಂದು ಅಧಿಕೃತ ಪ್ರಕಟಣೆ ಬುಧವಾರ ತಿಳಿಸಿದೆ.
ಈ ಕ್ಲಿನಿಕಲ್ ಪ್ರಯೋಗವನ್ನು International Council for Harmonisation of Technical Requirements for Pharmaceuticals for Human Useನ ಉತ್ತಮ ಕ್ಲಿನಿಕಲ್ ಪ್ರಾಕ್ಟೀಸ್ (ICH- GCP) ಮಾರ್ಗಸೂಚಿಗಳಿಗೆ ಅನುಗುಣವಾಗಿ ನಡೆಸಲಾಗುತ್ತಿದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಖ್ಯಾತ ರುಮಾಟಾಲಜಿಸ್ಟ್ ಡಾ ಡೇನಿಯಲ್ ಎರಿಕ್ ಫರ್ಸ್ಟ್ ಅವರು ನಿಕಟವಾಗಿ ಇದನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಈ ಯೋಜನೆಯು ರುಮಟಾಯ್ಡ್ ಸಂಧಿವಾತದ ನಿರ್ವಹಣೆಯಲ್ಲಿ ಆಯುರ್ವೇದದ ಪರಿಣಾಮಕಾರಿತ್ವದ ಮೇಲೆ ಮೊದಲ ಬಹು-ಕೇಂದ್ರ ಹಂತ III ಡಬಲ್ ಬ್ಲೈಂಡ್ ಡಬಲ್ ಡಮ್ಮಿ ಕ್ಲಿನಿಕಲ್ ಪ್ರಯೋಗಗಳಲ್ಲಿ ಒಂದಾಗಿದೆ.
ಆರ್ಯ ವೈದ್ಯ ಫಾರ್ಮಸಿ (ಕೊಯಮತ್ತೂರು) ಲಿಮಿಟೆಡ್ನೊಂದಿಗೆ ಸಂಯೋಜಿತವಾಗಿರುವ ಸಂಶೋಧನಾ ಸಂಸ್ಥೆಯಾದ AVP ರಿಸರ್ಚ್ ಫೌಂಡೇಶನ್ ಮತ್ತು ಆಯುಷ್ ಸಚಿವಾಲಯದ ಅಡಿಯಲ್ಲಿ ಭಾರತ ಸರ್ಕಾರದ ಏಜೆನ್ಸಿಯಾದ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಆಯುರ್ವೇದ (CCRAS) ಈ ಅಧ್ಯಯನವನ್ನು ನಡೆಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.