ಮಂಗಳೂರು : ಮಹಾನಗರಪಾಲಿಕೆಯಿಂದ ಸ್ವಲ್ಪವೇ ದೂರದಲ್ಲಿರುವ ಬಿಜೈ ಕಾಪಿಕಾಡ್ನಲ್ಲಿ ಡ್ರೈನೇಜ್ ಒಡೆದು ಹೋಗಿ ವಾರ ಕಳೆದರೂ ಮನಪಾ ಅದರತ್ತ ಗಮನ ಹರಿಸದೇ ಇನ್ನೂ ಸುಮ್ಮನೇ ಇದೆ.
ಬಿಜೈ ಕಾಪಿಕಾಡ್ ಮೊದಲ ಕ್ರಾಸ್(ನೇತಾಜಿ ರಸ್ತೆ)ನ ರಸ್ತೆ ಪಕ್ಕದಲ್ಲಿದ್ದ ಡ್ರೈನೇಜ್ ಸಮಸ್ಯೆ ಎದುರಿಸುತ್ತಿದ್ದಾರೆ. ಸ್ಥಳಿಯ ನಿವಾಸಿಗಳಿಂದ ಹಲವು ಬಾರಿ ದೂರು ನಿಲ್ಲಿಸಿದರೂ ಅಧಿಕಾರಿಗಳು ಸಮ್ಮನಿರುವುದು ಜನರನ್ನು ಆಕ್ರೋಷಿತರನ್ನಾಗಿಸಿದೆ.
ಕೆಲವು ಸಮಯದ ಹಿಂದೆ ಈ ರಸ್ತೆಯ ಡಾಮರು ಹೋಗಿ ಸಂಚಾರಕ್ಕೆ ದುರ್ಲಭವಾಗಿತ್ತು. ಜನರು ರಸ್ತೆ ಕಾಮಗಾರಿ ನಡೆಸಬೇಕಂದು ಒತ್ತಾಯಿಸಿದ್ದರು. ಜನರ ಒತ್ತಾಯಕ್ಕೆ ಮಣಿದು ತೇಪೆ ಹಾಕಲಾಗಿತ್ತು. ಅಲ್ಲದೇ ಕೊನೆಯ ೫೦ ಮೀಟರ್ ನಷ್ಟು ರಸ್ತೆಗೆ ಕಾಂಕ್ರೀಟೀಕರಣಗೊಳಿಸಲಾಯಿತ್ತು. ಈ ಕಾಮಗಾಗಿ ಈ ರಸ್ತೆಯಲ್ಲಿ ಟಿಪ್ಪರ್ ಲಾರಿ ಒಡಾಡುತ್ತಿದ್ದು ಅವುಗಳ ಸಂಚಾರದಿಂದ ಡ್ರೈನೇಜ್ ಪೈಪ್ ಒಡಿದು ಸಮಸ್ಯೆ ಎದುರಾಗಿದೆ.
ಸ್ಥಳಿಯ ಜನಪ್ರತಿನಿಧಿಗಳು ಇದರತ್ತ ಗಮನಹರಿಸದೆ ಇರುವುದರಿಂದ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಇದು ಜನರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬಿರುತ್ತದೆಂಬುದು ಜನರ ಅಭಿಮತ. ಸ್ಥಳಿಯಾಡಳಿಯ ಮತ್ತು ಜನಪ್ರತಿನಿಧಿಗಳು ಪಾಲಿಕೆ ಆಯುಕ್ತರ ಬದಲಾವಣೆಗೆ ತೋರುವ ಕಾಳಜಿಯನ್ನು ಬಗ್ಗೆ ತಮ್ಮ ವಾರ್ಡಿನ ಮತ್ತು ಪಾಲಿಕೆ ಜನರ ಸಮಸ್ಯೆ ಪರಿಹರಿಸಲು ತೋರಿಸಲಿ ಎಂಬುದು ಜನರ ಅಂಬೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.