ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದ ನಿವಾಸಿ ಮನೋಹರ್ ಎಂಬುವವರ ಮಗಳು ಎರಡು ವರ್ಷ ಪ್ರಾಯದ ದಿತಿ ಪಿತ್ತಜನಕಾಂಗದ ಕಾಯಿಲೆಯಿಂದ ಬಳಲುತ್ತಿದ್ದು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇದೀಗ ತುರ್ತಾಗಿ ಮಗುವಿಗೆ ಪಿತ್ತಜನಕಾಂಗದ ಕಸಿ (ಲಿವರ್ ಟ್ರಾನ್ಸ್ಪ್ಲಾಂಟೇಶನ್) ಶಸ್ತ್ರ ಚಿಕಿತ್ಸೆ ನಡೆಯಬೇಕಿದೆ.
ಇದು ದುಬಾರಿ ವೆಚ್ಚದ್ದಾಗಿದ್ದು ಆಸ್ಪತ್ರೆಗೆ ದಾಖಲಿಸುವ ಮುನ್ನ 16 ಲಕ್ಷ ರೂ. ಠೇವಣಿ ಕಟ್ಟಬೇಕು. ಶಸ್ತ್ರಚಿಕಿತ್ಸೆಯ ಬಳಿಕವು ಒಂದು ತಿಂಗಳ ಕಾಲ ಮಗುವನ್ನು ತುರ್ತು ನಿಗಾಘಟಕದಲ್ಲಿ ಇಡಬೇಕಾಗುತ್ತದೆ. 6 ತಿಂಗಳ ಕಾಲ ಶುಶ್ರೂಷೆಯಲ್ಲಿರಬೇಕು. ಇದಕ್ಕೆಲ್ಲಾ ಸೇರಿ ಕನಿಷ್ಠ 24 ಲಕ್ಷ ರೂ. ಗಳ ಅಗತ್ಯವಿದೆ. ಆದರೆ ಇಷ್ಟೊಂದು ಹಣ ಹೊಂದಿಸಲಾಗದೆ ಈ ಕುಟುಂಬ ಪರದಾಡುತ್ತಿದೆ. ದಾನಿಗಳ ನೆರವಿನತ್ತ ನೋಡುತ್ತಿದೆ.
ಪಿತ್ತ ಜನಕಾಂಗ ಕಸಿ ಮಾಡಲು ಪಿತ್ತಜನಕಾಂಗ ನೀಡುವ ದಾನಿಗಳ ಹುಡುಕಾಟ ನಡೆದಿದೆ. ಆದರೆ ಇನ್ನೂ ಲಭಿಸಿಲ್ಲ. ಆಕೆಯ ತಾಯಿಯ ರಕ್ತದ ಗುಂಪು ಬಾಲಕಿಯ ಗುಂಪಿನೊಂದಿಗೆ ಹೊಂದಾಣಿಕೆಯಾಗುತ್ತಿದ್ದು ಅವರೇ ಲಿವರ್ ದಾನ ಮಾಡಲು ಸಿದ್ದಳಾಗಿದ್ದಾರೆ. ಅದಕ್ಕೂ ಹಲವು ಕಾನೂನುಗಳ ಪಾಲನೆಯಾಗ ಬೇಕಾಗಿದ್ದು ಅದೆಲ್ಲವೂ ವೇಗವಾಗಿಯೆ ನಡೆಯುತ್ತಿದೆ. ಆದರೆ ಇಷ್ಟೊಂದು ದೊಡ್ಡ ಮೊತ್ತವನ್ನು ಭರಿಸುವ ಶಕ್ತಿ ಈ ಕುಟುಂಬದವರಲ್ಲಿ ಇಲ್ಲ. ತಂದೆ ಅರೆಕಾಲಿಕ ಪತ್ರಕರ್ತ, ತಾಯಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ದಾದಿ, ಸಣ್ಣ ಕೃಷಿಕರ ಕುಟುಂಬ ಇವರದ್ದು.
ಇರುವ ಜಮೀನು ಅಡವಿಟ್ಟರೂ ಕೆಲವೇ ಲಕ್ಷಗಳು ಮಾತ್ರ ಸಿಗುತ್ತದೆ. ಅದು ಯಾವುದಕ್ಕೂ ಸಾಕಾಗಲಾರದು. ತನ್ನ ದೇಹದ ಭಾಗವನ್ನು ನೀಡಿಯಾದರೂ ತನ್ನ ಮಗುವನ್ನು ಉಳಿಸಬೇಕು ಎಂಬ ಮಹದಾಸೆಯೊಂದಿಗೆ ತಾಯಿ ಯಾವ ತ್ಯಾಗಕ್ಕೂ ಸಿದ್ದಳಾಗಿದ್ದಾರೆ. ಈಕೆಯ ಬಯಕೆ ಈಡೇರಬೇಕಾದರೆ, ಜಗತ್ತನ್ನೇ ನೋಡಿರದ ಆ ಪುಟ್ಟ ಮಗುವಿನ ಬಾಳನ್ನು ಬೆಳಗಬೇಕಾದರೆ ಸಹೃದಯಿ ದಾನಿಗಳ ನೆರವು ಅಗತ್ಯವಾಗಿದೆ.
ನಿಮ್ಮ ನೆರವಿಗೆ ದಾರಿ ಇದು :
Bank : State Bank of mysore
Branch : Belthangady
Account No : 54055305804
IFSC : SBMY0040741
Account Holder : Manohar K.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.