ಉಡುಪಿ : ದೇಶದ 10 ಕಾರ್ಮಿಕ ಸಂಘಟನೆಗಳು 12 ಬೇಡಿಕೆಯನ್ನು ಮುಂದಿಟ್ಟು ಕರೆ ನೀಡಿರುವ ದೇಶವ್ಯಾಪಿ ಬಂದ್ಗೆ ಉಡುಪಿಯಲ್ಲಿ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ. ಉಡುಪಿಯ ಅಸಂಘಟಿತ ವಲಯದ ಕಾರ್ಮಿಕ ಸಂಘಟನೆಗಳು ಈ ದೇಶವ್ಯಾಪಿ ಬಂದ್ಗೆ ಸಂಪೂರ್ಣ ಬೆಂಬಲ ನೀಡಿದ್ದು ಖಾಸಗೀವಲಯದ ಹಾಗೂ ಸರಕಾರಿ ವಲಯದ ಯಾವುದೇ ಬಸ್ ಗಳು ರಸ್ತೆಯಲ್ಲಿ ಓಡಾಡಲಿಲ್ಲ. ಉಡುಪಿಯ ಸಿಟಿ ಬಸ್ ಹಾಗೂ ಸರ್ವೀಸ್ ಬಸ್ ನಿಲ್ದಾಣಗಳು ಸಂಪೂರ್ಣ ಖಾಲಿಯಾಗಿ ಬಿಕೋ ಎನ್ನುತ್ತಿತ್ತು.
ಹೆಚ್ಚಿನವರಿಗೆ ಬಂದ್ ಬಗ್ಗೆ ಅರಿವಿದ್ದರಿಂದ ಹಾಗೂ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಸಾರಿದ್ದರಿಂದ ಯಾವುದೇ ತೊಂದರೆಯಾಗಿಲ್ಲ. ಆದರೂ ಕೆಲವು ಕಾರ್ಮಿಕರು, ದೂರದ ಊರಿನವರು ಬಸ್ ಇಲ್ಲದೇ ಪರದಾಡುವಂತಾಯಿತು. ಆಶ್ರಯದಾತ ಆಟೋ ಯೂನಿಯನ್ ಕೂಡಾ ಈ ಬಂದ್ಗೆ ಬೆಂಬಲ ಸೂಚಿಸಿದ್ದು ಆ ಸಂಘಟನೆಯ ಯಾವುದೇ ರಿಕ್ಷಾಗಳು ರಸ್ತೆಗೆ ಇಲಿಯಲಿಲ್ಲ. ಕೆಲವೆಡೆ ಸಾಕಷ್ಟು ಪ್ರಮಾಣದಲ್ಲಿ ರಿಕ್ಷಾ ಸೇವೆ ಇರಲಿಲ್ಲ. ಬ್ಯಾಂಕ್ , ಅಂಚೆ, ವಿಮಾಸೇವೆ ಈ ಬಂದ್ಗೆ ಬೆಂಬಲ ನೀಡಿದ್ದರಿಂದ ಸೇವಾ ವಲಯದ ಚಟುವಟಿಕೆ ಅಸ್ತವ್ಯಸ್ತವಾಗಿದೆ.
ಉಡುಪಿಯಲ್ಲಿ ನಿನ್ನೆ ಕಾರ್ಮಿಕ ಸಂಘಟನೆಗಳು ಮಾಡಿದ ಮನವಿಗೆ ಪುರಸ್ಕರಿಸಿದ ಹೊಟೇಲ್ ಹಾಗೂ ಅಂಗಡಿ ಮಾಲೀಕರು ಇಂದು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಬಂದ್ಗೆ ಬೆಂಬಲ ಸೂಚಿಸಿದ್ದಾರೆ. ಸಿಟಿ ಬಸ್ ನಿಲ್ದಾಣದಲ್ಲಿ ಕೇಂದ್ರದ ಕಾರ್ಮಿಕ ವಿರೋಧಿ ನೀತಿಯನ್ನ ಖಂಡಿಸಿ ಉಡುಪಿಯ ಕಾರ್ಮಿಕ ವೇದಿಕೆ ಪ್ರತಿಭಟನೆಯನ್ನ ನಡೆಸಿತು. ಉಡುಪಿಯಲ್ಲಿ ಕಾರ್ಮಿಕ ಸಂಘಟನೆಗಳು ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ನೀಡಿರುವ ಭಾರತ್ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.