ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಹೋರಾಡುವುದು ಮಾತ್ರವಲ್ಲದೇ ಹತ್ತು ಹಲವು ಮಾನವೀಯ ಸೇವೆಗಳನ್ನು ಕೂಡ ಭಾರತೀಯ ಸೇನೆ ನಡೆಸುತ್ತಿದೆ. ಇದಕ್ಕೆ ಹೊಸ ಉದಾಹರಣೆ ಎಂಬಂತೆ ಸೇನೆಯು ಕಿವುಡ ಮತ್ತು ಮೂಗ ಜನರು ತುಂಬಿರುವ ವಿಶೇಷ ಗ್ರಾಮವೊಂದನ್ನು ದತ್ತು ಸ್ವೀಕರಿಸಿದೆ.
ದೋಡಾ ಜಿಲ್ಲೆಯ ದಢಾಕಿಯ ಕಿವುಡ ಮತ್ತು ಮೂಗ ಗ್ರಾಮಸ್ಥರಿಗೆ ಸೇನೆಯು ಇತ್ತೀಚಿಗೆ ಹೈಟೆಕ್ ವಿಶೇಷ ಶ್ರವಣ ಸಾಧನಗಳನ್ನು ವಿತರಿಸಿದೆ, ಇದೀಗ ಸೇನೆಯು ಈ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಗ್ರಾಮವನ್ನು ದತ್ತು ತೆಗೆದುಕೊಂಡಿದೆ.
ಭದೆರ್ವಾ ಪಟ್ಟಣದಿಂದ 105 ಕಿಮೀ ದೂರದಲ್ಲಿರುವ ಬೆಟ್ಟದ ಬುಡಕಟ್ಟು ಗ್ರಾಮವು 105 ಕುಟುಂಬಗಳಿಗೆ ನೆಲೆ ನೀಡಿದೆ. ಇವುಗಳಲ್ಲಿ, 55 ಕುಟುಂಬಗಳಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಕಿವುಡ ಮತ್ತು ಮೂಗ ಇದ್ದೇ ಇದ್ದಾನೆ. ಅವರಿಗೆ ಮಾತನಾಡಲು ಅಥವಾ ಕೇಳಲು ಸಾಧ್ಯವಾಗುವುದಿಲ್ಲ. ಗ್ರಾಮದಲ್ಲಿ ಅಂತಹ ಒಟ್ಟು 78 ಜನರಿದ್ದು, ಅದರಲ್ಲಿ 41 ಮಹಿಳೆಯರು ಮತ್ತು 30 ಮಂದಿ 3ರಿಂದ 15 ವರ್ಷದ ಮಕ್ಕಳು.
ಇವರುಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಗ್ರಾಮವನ್ನು ದತ್ತು ತೆಗೆದುಕೊಳ್ಳಲಾಗಿದೆ. ಅನೇಕ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅವರಿಗೆ ಬದುಕಲು ಮತ್ತು ಸ್ವಾವಲಂಬಿಯಾಗಿ ಜೀವಿಸುವ ಆತ್ಮವಿಶ್ವಾಸವನ್ನು ನೀಡುವ ಗುರಿಯನ್ನು ಹೊಂದಲಾಗಿದೆ ಎಂದು ಸೇನಾ ವಕ್ತಾರರು ಹೇಳಿದ್ದಾರೆ.
ಮೊದಲ ಹಂತದಲ್ಲಿ, ಬಟ್ಟೆ, ಆಹಾರ ಮತ್ತು ಆರೋಗ್ಯದಂತಹ ಮೂಲಭೂತ ಅಗತ್ಯಗಳನ್ನು ನೋಡಿಕೊಳ್ಳುವುದರ ಜೊತೆಗೆ, ತೆಲಂಗಾಣದಲ್ಲಿ ವಿಶೇಷವಾಗಿ ತರಬೇತಿ ಪಡೆದ ಸೈನ್ ಲ್ಯಾಂಗ್ವೇಜ್ ಪರಿಣತರನ್ನು ನಿಯೋಜಿಸುವ ಮೂಲಕ ಸೇನೆಯು ಮೂಗ ಮಕ್ಕಳಿಗಾಗಿ ಮನೆ-ಮನೆಗೆ ವೈಯಕ್ತಿಕಗೊಳಿಸಿದ ಬೋಧನಾ ತರಗತಿಗಳನ್ನು ಪ್ರಾರಂಭಿಸಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.