ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿಗೆ ವಯಸ್ಕರ ಶಿಕ್ಷಣದ ಎಲ್ಲಾ ಅಂಶಗಳನ್ನು ಒಳಗೊಳ್ಳುವಂತೆ ಮಾಡಲು 2022-2027ನೇ ಸಾಲಿನ ಹಣಕಾಸು ವರ್ಷಗಳ ಅವಧಿಗೆ “ನವ ಭಾರತ ಸಾಕ್ಷರತಾ ಕಾರ್ಯಕ್ರಮ (“New India Literacy Programme) ಎಂಬ ಹೊಸ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ.
ರಾಷ್ಟ್ರೀಯ ಶಿಕ್ಷಣ ನೀತಿ 2020 ವಯಸ್ಕರ ಶಿಕ್ಷಣ ಮತ್ತು ಜೀವನ ಪರ್ಯಂತ ಕಲಿಕೆಗೆ ಶಿಫಾರಸುಗಳನ್ನು ಒಳಗೊಂಡಿದೆ. ವಯಸ್ಕರ ಶಿಕ್ಷಣದ ಸಂಪೂರ್ಣ ವ್ಯಾಪ್ತಿಯನ್ನು ಒಳಗೊಂಡ ಆನ್ ಲೈನ್ ಮಾಡ್ಯೂಲ್ ಗಳನ್ನು ಪರಿಚಯಿಸಲಾಗುತ್ತಿದೆ.
ಈ ಯೋಜನೆಯ ಉದ್ದೇಶಗಳು ಕೇವಲ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾತ್ಮಕತೆಯನ್ನು ನೀಡುವುದಷ್ಟೇ ಅಲ್ಲದೆ, 21ನೇ ಶತಮಾನದ ನಾಗರಿಕನಿಗೆ ಅಗತ್ಯವಾದ ನಿರ್ಣಾಯಕ ಜೀವನ ಕೌಶಲ್ಯಗಳು (ಆರ್ಥಿಕ ಸಾಕ್ಷರತೆ, ಡಿಜಿಟಲ್ ಸಾಕ್ಷರತೆ, ವಾಣಿಜ್ಯ ಕೌಶಲ್ಯಗಳು, ಆರೋಗ್ಯ ರಕ್ಷಣೆ ಮತ್ತು ಜಾಗೃತಿ, ಮಕ್ಕಳ ಆರೈಕೆ ಮತ್ತು ಶಿಕ್ಷಣ ಮತ್ತು ಕುಟುಂಬ ಕಲ್ಯಾಣ ಸೇರಿದಂತೆ) ಇತರ ಘಟಕಗಳನ್ನೂ ಒಳಗೊಳ್ಳುವುದಾಗಿದೆ.
ಈ ಯೋಜನೆಯನ್ನು ಆನ್ ಲೈನ್ ವಿಧಾನದ ಮೂಲಕ ಸ್ವಯಂಸೇವಾ ವಿಧಾನದ ಮೂಲಕ ಜಾರಿಗೆ ತರಲಾಗುತ್ತಿದೆ. ಸುಲಭ ಪ್ರವೇಶಕ್ಕಾಗಿ ಎಲ್ಲಾ ವಸ್ತುವಿಷಯ ಮತ್ತು ಸಂಪನ್ಮೂಲಗಳನ್ನು ಡಿಜಿಟಲ್ ರೂಪದಲ್ಲಿ ಒದಗಿಸಲಾಗುತ್ತದೆ. ಈ ಯೋಜನೆಯು ದೇಶದ ಎಲ್ಲಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸಾಕ್ಷರರಲ್ಲದವರನ್ನು ವ್ಯಾಪ್ತಿಗೆ ಒಳಪಡಿಸುತ್ತದೆ
“ನವ ಭಾರತ ಸಾಕ್ಷರತಾ ಕಾರ್ಯಕ್ರಮ”ದ ಒಟ್ಟು ಅಂದಾಜು ವೆಚ್ಚ 1037.90 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಕೇಂದ್ರದ ಪಾಲು ರೂ.700 ಕೋಟಿ ಮತ್ತು 2022-27ರ ಹಣಕಾಸು ವರ್ಷಕ್ಕೆ ಕ್ರಮವಾಗಿ 337.90 ಕೋಟಿ ರೂ ರಾಜ್ಯದ ಪಾಲು ಸೇರಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.