ನವದೆಹಲಿ: ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡ 1 ಸಾವಿರದ ನೋಟುಗಳನ್ನು ಶೀಘ್ರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಲಿದೆ.
ಈ ನೋಟಲ್ಲಿ ರೂಪಾಯಿಯ ಚಿಹ್ನೆಯನ್ನು ಹಾಕಲಾಗುತ್ತಿದ್ದು, ‘ಎಲ್’ ಎಂದು ಆರೋಹಣ ಕ್ರಮದಲ್ಲಿ ಒಳಭಾಗದಲ್ಲಿ ಬರೆದಿರಲಾಗುತ್ತದೆ. ನೋಟಿನ ಭದ್ರತೆಯನ್ನು ಹೆಚ್ಚಿಸಲು ಇದನ್ನು ಜಾರಿಗೊಳಿಸಲಾಗುತ್ತಿದೆ. ಈಗಾಗಲೇ 500 ರೂ. ಗಳ ಕೆಲವು ನೋಟುಗಳನ್ನು ಈ ರೀತಿಯಲ್ಲಿ ಬಿಡುಗಡೆ ಮಾಡಲಾಗಿದ್ದು, ಇದೀಗ 1 ಸಾವಿರದ ನೋಟುಗಳನ್ನು ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಜನರು ನಕಲಿ ನೋಟುಗಳನ್ನು ಪತ್ತೆ ಹಚ್ಚುವಲ್ಲಿ ಅತ್ಯಂತ ಸಹಾಯಕಾರಿಯಾಗಲಿವೆ.
ಒಂದು ಸಾವಿರದ ಹೊಸ ನೋಟುಗಳು ಮಹಾತ್ಮ ಗಾಂಧಿ ಸಿರೀಸ್-2005ರ ಸರಣಿಯಲ್ಲೇ ಮುದ್ರಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.