ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23ರ ಕೇಂದ್ರ ಬಜೆಟ್ ಮಂಡಿಸುವಾಗ ಘೋಷಿಸಿದ ಈಶಾನ್ಯಕ್ಕೆ ಪ್ರಧಾನ ಮಂತ್ರಿಗಳ ಅಭಿವೃದ್ಧಿ ಉಪಕ್ರಮ (PM-DevINE) ಯೋಜನೆಯು ಈಶಾನ್ಯದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿಯವರ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಮಣಿಪುರದಲ್ಲಿ 2022-23ರ ಕೇಂದ್ರ ಬಜೆಟ್ ಕುರಿತು ಬೌದ್ಧಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶರ್ಮಾ, “ಮೋದಿ ಅವರ ಯೋಜನೆ PM-DevINE ಪ್ರಧಾನಿ ಹೆಸರಿನಲ್ಲಿನ ಈ ರೀತಿಯ ಯೋಜನೆಗಳಲ್ಲಿ ಮೊದಲನೆಯದು. ಈ ಹಿಂದೆಯೂ ಯೋಜನೆಗಳು ಇದ್ದವು. ಆದರೆ ಈ ಮಾದರಿಯಲ್ಲಿ ಇರಲಿಲ್ಲ. ಈ ಯೋಜನೆಯು ಈಶಾನ್ಯಕ್ಕೆ ಸಂಪೂರ್ಣವಾಗಿ ಕೇಂದ್ರೀಕೃತವಾಗಿದೆ” ಎಂದಿದ್ದಾರೆ.
ಈಶಾನ್ಯ ರಾಜ್ಯಗಳು ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶದ ಆರ್ಥಿಕತೆ ಬೆಳೆಯುತ್ತದೆ ಎಂದು ಪ್ರಧಾನಿ ಮೋದಿ ನಂಬುತ್ತಾರೆ. ಜಗತ್ತಿನೆದುರು ಆತ್ಮನಿರ್ಭರ ಭಾರತದ ಬಗ್ಗೆ ಅವರು ಅರಿತುಕೊಂಡೇ ಮಾತನಾಡುತ್ತಾರೆ ಎಂದಿದ್ದಾರೆ.
2022-23ರ ಬಜೆಟ್ ಅನ್ನು ಶ್ಲಾಘಿಸಿದ ಮುಖ್ಯಮಂತ್ರಿ, ಈಶಾನ್ಯ ರಾಜ್ಯಗಳ ಬಗ್ಗೆ ಕೇಂದ್ರದ ಬದ್ಧತೆಯು ಕೇವಲ ಮಾತುಗಳಲ್ಲಿ ಇಲ್ಲ, ಕಾರ್ಯದಲ್ಲೂ ಇದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.