ನವದೆಹಲಿ: 2022ರ ಹಣಕಾಸು ವರ್ಷದಲ್ಲಿ ರಕ್ಷಣಾ ಆರ್ & ಡಿ ಬಜೆಟ್ನ ಶೇ 25ರಷ್ಟನ್ನು ಸ್ಟಾರ್ಟ್ಅಪ್ಗಳು ಮತ್ತು ಖಾಸಗಿ ಸಂಸ್ಥೆಗಳಿಗೆ ಮೀಸಲಿಡುವ ಕೇಂದ್ರ ಬಜೆಟ್ನಲ್ಲಿ ಪ್ರಸ್ತಾವನೆಯನ್ನು ಅತ್ಯುತ್ತಮ ಕ್ರಮ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಬಣ್ಣಿಸಿದ್ದಾರೆ.
ರಕ್ಷಣಾ ಬಂಡವಾಳ ಸಂಗ್ರಹಣೆ ಬಜೆಟ್ನ 68 ಪ್ರತಿಶತವನ್ನು ದೇಶೀಯ ಉದ್ಯಮದಿಂದ ಖರೀದಿಗೆ ಮೀಸಲಿಡಲಾಗುವುದು ಎಂಬ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ಘೋಷಣೆಯನ್ನು ಸಿಂಗ್ ಸ್ವಾಗತಿಸಿದರು.
‘ರಕ್ಷಣಾ ಬಂಡವಾಳ ಸಂಗ್ರಹಣೆ ಬಜೆಟ್ನ 68 ಪ್ರತಿಶತವನ್ನು ಸ್ಥಳೀಯ ಖರೀದಿಗೆ ಮೀಸಲಿಡಲಾಗಿದೆ. ಇದು ವೋಕಲ್ ಫಾರ್ ಲೋಕಲ್’ ಉತ್ತೇಜನಕ್ಕೆ ಅನುಗುಣವಾಗಿದೆ ಮತ್ತು ಇದು ಖಂಡಿತವಾಗಿಯೂ ದೇಶೀಯ ರಕ್ಷಣಾ ಉದ್ಯಮಗಳಿಗೆ ಉತ್ತೇಜನ ನೀಡುತ್ತದೆ” ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.
ರಕ್ಷಣೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಗಣನೀಯ ಮೊತ್ತವನ್ನು ವಿನಿಯೋಗಿಸಲಾಗಿದೆ ಎಂದು ಅವರು ಹೇಳಿದರು.
‘ಸ್ಟಾರ್ಟಪ್ಗಳು ಮತ್ತು ಖಾಸಗಿ ಸಂಸ್ಥೆಗಳಿಗೆ ಆರ್ & ಡಿ ಬಜೆಟ್ನ 25 ಪ್ರತಿಶತವನ್ನು ಕಾಯ್ದಿರಿಸುವ ಪ್ರಸ್ತಾಪವು ಅತ್ಯುತ್ತಮ ಕ್ರಮವಾಗಿದೆ’ ಎಂದು ರಕ್ಷಣಾ ಸಚಿವರು ಹೇಳಿದರು.
ಸಂಸತ್ತಿನಲ್ಲಿ ಬಜೆಟ್ ಭಾಷಣದಲ್ಲಿ ಸೀತಾರಾಮನ್ ಅವರು ಆಮದುಗಳನ್ನು ಕಡಿಮೆ ಮಾಡಲು ಮತ್ತು ಸಶಸ್ತ್ರ ಪಡೆಗಳಿಗೆ ಉಪಕರಣಗಳಲ್ಲಿ ಸ್ವಾವಲಂಬನೆಯನ್ನು ಉತ್ತೇಜಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
‘2021-22ರಲ್ಲಿ ಶೇ.58 ರಿಂದ 2022-23ರಲ್ಲಿ ಬಂಡವಾಳ ಸಂಗ್ರಹಣೆ ಬಜೆಟ್ನ ಶೇಕಡ 68 ಅನ್ನು ದೇಶೀಯ ಉದ್ಯಮಕ್ಕೆ ಮೀಸಲಿಡಲಾಗುವುದು’ ಎಂದು ಅವರು ಹೇಳಿದರು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಕೈಗಾರಿಕೆ, ಸ್ಟಾರ್ಟ್ಅಪ್ಗಳು ಮತ್ತು ಅಕಾಡೆಮಿಗಳಿಗೆ ತೆರೆಯಲಾಗುವುದು ಮತ್ತು ರಕ್ಷಣಾ ಆರ್ & ಡಿ ಬಜೆಟ್ನ ಶೇಕಡಾ 25 ರಷ್ಟು ಮೀಸಲಿಡಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿದ್ದಾರೆ.
‘ಎಸ್ಪಿವಿ (ವಿಶೇಷ ಉದ್ದೇಶದ ವಾಹನ) ಮಾದರಿಯ ಮೂಲಕ ಡಿಆರ್ಡಿಒ ಮತ್ತು ಇತರ ಸಂಸ್ಥೆಗಳ ಸಹಯೋಗದೊಂದಿಗೆ ಮಿಲಿಟರಿ ಪ್ಲಾಟ್ಫಾರ್ಮ್ಗಳು ಮತ್ತು ಉಪಕರಣಗಳ ವಿನ್ಯಾಸ ಮತ್ತು ಅಭಿವೃದ್ಧಿಯನ್ನು ಕೈಗೊಳ್ಳಲು ಖಾಸಗಿ ಉದ್ಯಮವನ್ನು ಪ್ರೋತ್ಸಾಹಿಸಲಾಗುವುದು’ ಎಂದು ಅವರು ಹೇಳಿದರು.
ವ್ಯಾಪಕ ಶ್ರೇಣಿಯ ಪರೀಕ್ಷೆ ಮತ್ತು ಪ್ರಮಾಣೀಕರಣದ ಅವಶ್ಯಕತೆಗಳನ್ನು ಪೂರೈಸಲು ಸ್ವತಂತ್ರ ನೋಡಲ್ ಅಂಬ್ರೆಲ್ಲಾ ಬಾಡಿಯನ್ನಯ ಸ್ಥಾಪಿಸಲಾಗುವುದು ಎಂದು ಸೀತಾರಾಮನ್ ಹೇಳಿದರು.
‘2022-23ಕ್ಕೆ ಅತ್ಯುತ್ತಮವಾದ ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆಗಳು. ಇದು ‘ಮೇಕ್ ಇನ್ ಇಂಡಿಯಾ’ಗೆ ಪೂರಕತೆಯನ್ನು ನೀಡುವ, ಬೇಡಿಕೆಯನ್ನು ಹೆಚ್ಚಿಸುವ ಮತ್ತು ಬಲಿಷ್ಠ, ಸಮೃದ್ಧ ಮತ್ತು ಆತ್ಮವಿಶ್ವಾಸದ ಭಾರತಕ್ಕಾಗಿ ಸಾಮರ್ಥ್ಯಗಳನ್ನು ನಿರ್ಮಿಸುವ ಬಜೆಟ್ ಆಗಿದೆ’ ಎಂದು ಸಿಂಗ್ ಹೇಳಿದರು.
‘ಆತ್ಮನಿರ್ಭರ’ದ ಮೇಲೆ ಸರ್ಕಾರದ ಗಮನ ಮತ್ತು ಅಭಿವೃದ್ಧಿ ಮತ್ತು ಜನರ ಪರ ಸುಧಾರಣೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಯನ್ನು ಬಜೆಟ್ ವಿವರಿಸುತ್ತದೆ ಎಂದು ಅವರು ಹೇಳಿದರು.
ಇದು ಬೆಳವಣಿಗೆ ಆಧಾರಿತ ಬಜೆಟ್ ಆಗಿದ್ದು, ನವ ಭಾರತದ ಶಕ್ತಿಯನ್ನು ಬಳಸಿಕೊಳ್ಳುವತ್ತ ಗಮನಹರಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.
Substantial amounts have been allocated towards Research and Development in several sectors including Defence.
The proposal to reserve 25 percent of the R&D Budget for Startups and Private entities is an excellent move.
— Rajnath Singh (@rajnathsingh) February 1, 2022
The 68 percent of defence capital procurement budget has been allocated towards local procurement.
It is in line with the ‘Vocal for Local’ push and it will certainly boost the domestic defence industries.
— Rajnath Singh (@rajnathsingh) February 1, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.