ಬೆಂಗಳೂರು: ಪ್ರತಿಯೊಬ್ಬರೂ ನೀರನ್ನು ವ್ಯರ್ಥ ಮಾಡದೇ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ
ಅವರು ಇಂದು ಬೆಳಿಗ್ಗೆ ಕೆ ಅರ್.ಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹೆಚ್.ಎ.ಎಲ್ ನ ಜಗದೀಶ್ ನಗರದಲ್ಲಿ 7.50 ದಶಲಕ್ಷ ಲೀಟರ್ ಸಾಮರ್ಥ್ಯದ ಚೌಕಾಕಾರದ ನೆಲಮಟ್ಟದ ಜಲ ಸಂಗ್ರಹಾರವನ್ನು ಲೋಕಾರ್ಪಣೆ ನೆರವೇರಿಸಿ ಮಾತನಾಡಿದರು.
ಈ ಯೋಜನೆಯಿಂದ ಒಂಭತ್ತು ಪ್ರಮುಖ ಬಡಾವಣೆಗಳಿಗೆ ನೀರನ್ನು ಒದಗಿಸಲಾಗುವುದು. ಕೆ.ಆರ್.ಪುರಂನ ಸಮಗ್ರ ಅಭಿವೃದ್ಧಿಗೆ ದಾಖಲೆಯ ಕೆಲಸಗಳನ್ನು ಸಚಿವರಾದ ಶ್ರೀ ಬಿ.ಎ.ಬಸರಾಜ(ಬೈರತಿ ( ಅವರು ಮಾಡಿದ್ದು, ಆ ಪೈಕಿ ಜಿ.ಎಲ್.ಆರ್ ಕೆಲಸವೂ ಒಂದು. ಜನಪರ, ಜನರ ಬಗ್ಗೆ ಕಳಕಳಿ ಇರುವ ಜನ ಸೇವಕರಾಗಿ ಕೆಲಸವನ್ನು ಬೈರತಿ ಬಸವರಾಜ ಅವರು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕೆ.ಅರ್.ಪುರ ವಿಧಾನ ಸಭಾ ಕ್ಷೇತ್ರದ ಶಾಸಕರು ಆದ ನಗರಾಭಿವೃದ್ಧಿ ಸಚಿವರಾದ ಬಿ.ಎ.ಬಸವರಾಜ ವಹಿಸಿದ್ದರು
ವೈದ್ಯಕೀಯ ಮತ್ತು ಅರೋಗ್ಯ ಸಚಿವರಾದ ಡಾ: ಕೆ.ಸುಧಾಕರ್, ಸಹಕಾರ ಸಚಿವರಾದ ಶ್ರೀ ಎಸ್.ಟಿ.ಸೋಮಶೇಖರ್ ಸೇರಿದಂತೆ ಕ್ಷೇತ್ರದ ಹಲ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.