ನವದೆಹಲಿ: ಕೋವಿಡ್-19 ಸಾಂಕ್ರಾಮಿಕದ ನಡುವೆಯೂ ಜಮ್ಮು ಮತ್ತು ಕಾಶ್ಮೀರದಲ್ಲಿನ ಮಸಾಲೆ ಉದ್ಯಮವು ಅಲ್ಲಿನ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದೆ. ಇಲ್ಲಿನ ಮಸಾಲೆ ಉದ್ಯಮವು ಕ್ಷಿಪ್ರ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಇದು ಇಲ್ಲಿ ಹೆಚ್ಚು ಹೆಚ್ಚು ಉದ್ಯೋಗಗಳನ್ನು ಸೃಷ್ಟಿ ಮಾಡುತ್ತಿದೆ.
ಆಹಾರ ತಯಾರಿಸಲು ಪ್ರತಿ ಮನೆಯಲ್ಲೂ ಮಸಾಲೆ ಪದಾರ್ಥಗಳನ್ನು ಬಳಸುತ್ತಾರೆ. ಹೀಗಾಗಿ ಇದು ಪ್ರತಿದಿನದ ಅತ್ಯವಾಗಿದೆ. ಜಮ್ಮು ಮತ್ತು ಕಾಶ್ಮೀರದ ಮಸಾಲೆಗಳಿಗೆ ಪ್ರಸ್ತುತ ಹೆಚ್ಚು ಬೇಡಿಕೆ ಬರುತ್ತಿದೆ ಎಂದು ಶ್ರೀನಗರದ ಅಡ್ಫರ್ ಆಗ್ರೋ ಫುಡ್ಸ್ ಆಂಡ್ ಸ್ಪೈಸಸ್ನ ಕೈಗಾರಿಕೋದ್ಯಮಿ ಸೈಯದ್ ಮುಸ್ತಫಾ ಮಸೂದಿ ಹೇಳುತ್ತಾರೆ.
“ನಾವು ಇಲ್ಲಿ ವಿವಿಧ ರೀತಿಯ ಮಸಾಲಾಗಳನ್ನು ಮಾರಾಟ ಮಾಡುತ್ತೇವೆ. ನಾವು ಅವುಗಳನ್ನು ಮಲೇಷ್ಯಾ, ಯುಎಸ್ಎ ಮತ್ತು ಇತರ ದೇಶಗಳಿಗೂ ರಫ್ತು ಮಾಡುತ್ತೇವೆ” ಎಂದಿದ್ದಾರೆ
“ಕಾಶ್ಮೀರದಲ್ಲಿ ಈ ಉದ್ಯಮಕ್ಕೆ ದೊಡ್ಡ ವ್ಯಾಪ್ತಿ ಇದೆ. ನಮಗೆ ಬೆಂಬಲವೂ ಬೇಕು. ಯುವಕರಿಗೆ ಮಸಾಲೆಗಳನ್ನು ತಯಾರಿಸಲು ತರಬೇತಿ ನೀಡಲಾಗುತ್ತಿದೆ. ನಾವು ಕ್ಷಿಪ್ರ ಪ್ರಮಾಣದಲ್ಲಿ ಬೆಳೆಯುತ್ತಿದ್ದೇವೆ, ಆ ಮೂಲಕ ಇಲ್ಲಿ ಉದ್ಯೋಗ ಮತ್ತು ವ್ಯಾಪಾರವನ್ನು ಹೆಚ್ಚಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
“2009 ರಲ್ಲಿ, ನಾನು ಈ ಉದ್ಯಮದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. ದೇವರ ದಯೆಯಿಂದ, ನಮ್ಮ ಬ್ರ್ಯಾಂಡ್ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿದೆ. ನಾವು ಇಲ್ಲಿ ಉದ್ಯೋಗವನ್ನು ಸೃಷ್ಟಿಸುತ್ತಿದ್ದೇವೆ. ಪ್ರಸ್ತುತ, ಸುಮಾರು 70 ಜನರು ಇಲ್ಲಿ ಕೆಲಸ ಮಾಡುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ಘಟಕದ ಕೆಲಸಗಾರ ಫೈಜಾನ್ ಅಹ್ಮದ್ ಮಾತನಾಡಿ, ವಿವಿಧ ರೀತಿಯ ಸಾಂಬಾರು ಪದಾರ್ಥಗಳನ್ನು ಇಲ್ಲಿ ಉತ್ಪಾದಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಇದು ಉದ್ಯೋಗಕ್ಕೆ ಉತ್ತಮ ಮಾರ್ಗವಾಗಿದೆ. ಮುಂಬರುವ ದಿನಗಳಲ್ಲಿ ಈ ಉದ್ಯಮವು ಉದ್ಯೋಗಕ್ಕೆ ಉತ್ತೇಜನ ನೀಡಬಹುದೆಂಬ ನಂಬಿಕೆ ನನ್ನದು ಎಂದಿದ್ದಾರೆ.
ಘಟಕದ ಮಹಿಳಾ ಉದ್ಯೋಗಿ ಶೀಮಾ ನಜೀರ್ ಮಾತನಾಡಿ, “ಎಲ್ಲ ಉದ್ಯೋಗಿಗಳು ಇಲ್ಲಿ ಕುಟುಂಬ ಸಮೇತರಾಗಿ ಕೆಲಸ ಮಾಡುತ್ತಾರೆ. ನಾನು ಇಲ್ಲಿ ನೈರ್ಮಲ್ಯವನ್ನು ಪರಿಶೀಲಿಸುತ್ತೇನೆ. ನನ್ನ ಕೆಲಸವನ್ನು ನಾನು ಆನಂದಿಸುತ್ತಿದ್ದೇನೆ. ಮಹಿಳೆಯರು ಇಲ್ಲಿ ಉದ್ಯೋಗ ಮಾಡಬಹುದು ಮತ್ತು ಕಾಶ್ಮೀರದ ಜನರಿಗಾಗಿ ಕೆಲಸ ಮಾಡಬಹುದು” ಎನ್ನುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.