ನವದೆಹಲಿ: ಜವಳಿ ರಫ್ತು 2020 ವರ್ಷಕ್ಕೆ ಹೋಲಿಸಿದರೆ 2021ರ ಏಪ್ರಿಲ್ನಿಂದ ಡಿಸೆಂಬರ್ನಲ್ಲಿ ಶೇಕಡಾ 31 ರಷ್ಟು ಹೆಚ್ಚಾಗಿದೆ. ಜವಳಿ ವಲಯವು ಆಮದುಗಿಂತ ಹೆಚ್ಚಿನ ರಫ್ತುಗಳೊಂದಿಗೆ ವ್ಯಾಪಾರ ಹೆಚ್ಚುವರಿಯನ್ನು ನಿರಂತರವಾಗಿ ನಿರ್ವಹಿಸುತ್ತಿದೆ ಎಂದು ಜವಳಿ ಸಚಿವಾಲಯ ಹೇಳಿದೆ.
2020-21 ರ ಹಣಕಾಸು ವರ್ಷದಲ್ಲಿ, ಸಾಂಕ್ರಾಮಿಕ ರೋಗವು ಪೂರೈಕೆ ಸರಪಳಿ ಮತ್ತು ಬೇಡಿಕೆಗೆ ಅಡ್ಡಿಪಡಿಸಿದ ಕಾರಣ ಜವಳಿ ರಫ್ತುಗಳಲ್ಲಿ ಕುಸಿತ ಕಂಡುಬಂದಿದೆ. ಆದರೂ, 2021-22ರಲ್ಲಿ ಚೇತರಿಕೆಯ ಲಕ್ಷಣಗಳು ಗೋಚರಿಸಿವೆ.
ಕರಕುಶಲ ವಸ್ತುಗಳ ರಫ್ತು ಸೇರಿದಂತೆ ಒಟ್ಟು ಜವಳಿ ಮತ್ತು ಉಡುಪುಗಳು ಕಳೆದ ವರ್ಷದ ಏಪ್ರಿಲ್ನಿಂದ ಡಿಸೆಂಬರ್ನಲ್ಲಿ 29.8 ಬಿಲಯನ್ ಡಾಲರ್ಗಳಾಗಿದ್ದು, 2020 ರ ಇದೇ ಅವಧಿಯ 21.2 ಬಿಲಿಯನ್ ಡಾಲರ್ಗೆ ಹೋಲಿಸಿದರೆ ಇದು ಭಾರೀ ಹೆಚ್ಚಳವನ್ನು ಕಂಡಿದೆ ಎಂದು ಸಚಿವಾಲಯ ತಿಳಿಸಿದೆ.
ಈ ಬೆಳವಣಿಗೆಯು ಆರ್ಥಿಕ ಚೇತರಿಕೆಯ ಸಂಕೇತವಾಗಿದೆ. 2020 ರ ವರ್ಷಕ್ಕೆ ಹೋಲಿಸಿದರೆ ಇಡೀ ವಲಯದ ರಫ್ತು- ಜವಳಿ, ಉಡುಪು ಮತ್ತು ಕರಕುಶಲ ವಸ್ತುಗಳು 2021ರ ಏಪ್ರಿಲ್ನಿಂದ ಡಿಸೆಂಬರ್ವರೆಗೆ 14.6 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಸಚಿವಾಲಯ ತಿಳಿಸಿದೆ.
2020 ರ ಎಪ್ರಿಲ್ನಿಂದ ಡಿಸೆಂಬರ್ಗೆ ಹೋಲಿಸಿದರೆ 2021 ರ ಎಪ್ರಿಲ್ನಿಂದ ಡಿಸೆಂಬರ್ನಲ್ಲಿ ಜವಳಿ ರಫ್ತಿನಲ್ಲಿ ಶೇಕಡಾ 31 ರಷ್ಟು ಹೆಚ್ಚಳವಾಗಿದೆ, ಹತ್ತಿ ನೂಲು / ಬಟ್ಟೆಗಳು / ಮೇಡ್-ಅಪ್ಗಳು ಮತ್ತು ಕೈಮಗ್ಗ ಉತ್ಪನ್ನಗಳ ರಫ್ತಿನಲ್ಲಿ ಶೇಕಡಾ 43 ರಷ್ಟು ಹೆಚ್ಚಳವಾಗಿದೆ ಮತ್ತು ಸೆಣಬು ಉತ್ಪನ್ನಗಳ ರಫ್ತು ಶೇಕಡಾ 33 ರಷ್ಟು ಹೆಚ್ಚಳವನ್ನು ಕಂಡಿವೆ.
ಕರಕುಶಲ ಸೇರಿದಂತೆ ಜವಳಿ ಮತ್ತು ಉಡುಪುಗಳಿಗೆ ಸರ್ಕಾರವು 44 ಶತಕೋಟಿ ಡಾಲರ್ ಗುರಿಯನ್ನು ಹೊಂದಿದ್ದು, ಈಗಾಗಲೇ ಶೇಕಡಾ 67 ಕ್ಕಿಂತ ಹೆಚ್ಚು ಸಾಧಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. ಹಣಕಾಸಿನ ವರ್ಷದ ಕೊನೆಯ ತ್ರೈಮಾಸಿಕವು ಯಾವಾಗಲೂ ಹಿಂದಿನ ತ್ರೈಮಾಸಿಕಗಳಿಗಿಂತ ಹೆಚ್ಚಿನ ಚಟುವಟಿಕೆಯನ್ನು ಹೊಂದಿರುತ್ತದೆ. ಗುರಿಗಳನ್ನು ಸರಿಯಾಗಿ ಪೂರೈಸುವ ಭರವಸೆಯನ್ನು ಉದ್ಯಮ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.