ಜೀವನದಲ್ಲಿ ಹಲವಾರು ಕಠಿಣ ಪರಿಸ್ಥಿತಿಗಳ ನಡುವೆಯೂ ಯಾರನ್ನೂ ಅವಲಂಬಿಸದೆ ತನ್ನ ಜೀವನವನ್ನು ರೂಪಿಸಿಕೊಂಡ ಕೃಷ್ಣ ತೇಜರವರು ಹಲವಾರು ಜನರಿಗೆ ಪ್ರೇರಕ ವ್ಯಕ್ತಿ. ಬುದ್ಧಿಮಾಂದ್ಯತೆಯೊಡನೆ ಜೀವಿಸುವ ಇವರು ತಮ್ಮ ಜೀವನವನ್ನು ಸುಂದರ ಮತ್ತು ಸ್ಫೂರ್ತಿದಾಯಕವಾಗಿ ರೂಪಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
ಬುದ್ಧಿಮಾಂದ್ಯತೆ ಒಂದು ಆನುವಂಶಿಕ ರೋಗ. ಈ ಸ್ಥಿತಿ ಬೌದ್ಧಿಕ ಅಥವಾ ಬುದ್ಧಿಯ ಅಸಾಮರ್ಥ್ಯಕ್ಕೆ ಕಾರಣವಾಗಿದೆ. ಸ್ನಾಯುಗಳ ಮೇಲೆ ಹಿಡಿತ ಕಡಿಮೆಯಾಗುವುದು, ಸಣ್ಣ ನಿಲುವಿನ ಕಣ್ಣುಗಳು ಓರೆಯಾಗಿರುವುದು ಇತ್ಯಾದಿಗಳು ಇದರ ಸಾಮಾನ್ಯ ದೈಹಿಕ ಲಕ್ಷಣ. ಭಾರತದಲ್ಲಿ ** ಸುಮಾರು 23,000 ದಿಂದ 29,000 ಮಕ್ಕಳು ಈ ರೀತಿಯ ರೋಗಲಕ್ಷಣಗಳಿಂದ ಜನನವಾಗುತ್ತಿದ್ದಾರೆ.
ಕೃಷ್ಣ ತೇಜ ಹುಟ್ಟಿದ 21 ದಿನಗಳಲ್ಲೇ ಅನಾರೋಗ್ಯಕ್ಕೆ ಒಳಗಾದರು. ತಮ್ಮ ಬಾಲ್ಯದಿಂದಲೇ ತೀವ್ರ ತರಹದ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾ, 7 ವರ್ಷ ಪ್ರಾಯದವರೆಗೆ ಹಾಸಿಗೆ ಹಿಡಿದಿದ್ದರು.
ಅವರ ಜೀವನ ಹಲವಾರು ಅಡಚಣೆಗಳಿಂದ ಆರಂಭಗೊಂಡಿತು. ಹುಟ್ಟಿದ 3ನೇ ದಿನವೇ ಕ್ಷಯ ರೋಗ(ಟ್ಯೂಬರ್ಕ್ಯುಲೋಸಿಸ್) ತಪಾಸಣೆ ನಡೆಸಲಾಯಿತು. ಅವರಿಗೆ ನೀಡಲಾಡ ಬಿ.ಸಿ.ಜಿ. ಲಸಿಕೆ ವ್ಯತ್ಯಾಸದಿಂದ ಈ ಸಮಸ್ಯೆ ಎದುರಾಗಿತ್ತು. ಕ್ಷಯ ರೋಗಕ್ಕೆ ನೀಡಲಾದ ಔಷಧಿಗಳಿಂದ ಇನ್ನಷ್ಟು ಸಮಸ್ಯೆ ತಂದೊಡ್ಡಿತು. ಇದು ಅವರ ಲಿವರ್ಗೆ ಹಾನಿಯುಂಟುಮಾಡಿತು. ಬಹಳಷ್ಟು ದಿನಗಳ ಕಾಲ ವೈದ್ಯಕೀಯ ನಿಗಾದಲ್ಲಿ ಇಡಲಾಗಿತ್ತು. ತದನಂತರ ಮನೆಯವರ ಪ್ರೀತಿ, ವಾತ್ಸಲ್ಯದಿಂದ ಆರೋಗ್ಯ ವೃದ್ಧಿ ಸಾಧ್ಯವಾಗತೊಡಗಿತು.
ಅವರ ತಂದೆ ಯಾವಾಗಲೂ ಕೃಷ್ಣ ಸಂಪೂರ್ಣವಾಗಿ ಸ್ವತಂತ್ರವಾಗಿ ಯಾರ ಸಹಾಯವೂ ಇಲ್ಲದೆ ಬದುಕಬೇಕು ಎಂದು ಬಯಸಿದ್ದರು. ಅವರು ಹೋದಲ್ಲೆಲ್ಲ ಅವರನ್ನು ಕರೆದುಕೊಂಡು ಹೋಗುತ್ತಿದ್ದರು. ತನ್ನ ಸ್ವಂತ ಕೆಲಸಗಳನ್ನು ಮಾಡಲು ಕೃಷ್ಣರಿಗೆ ಪ್ರೋತ್ಸಾಹ ನೀಡುತ್ತಿದ್ದರು.
ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಾಲೆಗೆ ಅವರನ್ನು ಕಳುಹಿಸಲಾಗಿದ್ದು, ಅಲ್ಲಿ ಎಲ್ಲಾ ಮೂಲಭೂತ ಜೀವನ ಕೌಶಲಗಳನ್ನು ಕಲಿತು, ಸಾಮಾನ್ಯ ವ್ಯಕ್ತಿ ಎನಿಸಿಕೊಂಡರು. ತಮ್ಮ 19ನೇ ವಯಸ್ಸಿನಲ್ಲಿ ವೃತ್ತಿ ಜೀವನ ಆರಂಭಿಸಿದ ಅವರಿಗೆ, ಇದರಿಂದ ಸಾಮಾಜಿಕ ಹಾಗೂ ಔದ್ಯೋಗಿಕ ಕೌಶಲಗಳನ್ನು ಅಭಿವೃದ್ಧಿಗೊಳಿಸಲು ಸಹಾಯಕವಾಗಿದೆ. ಈಗ ಅವರು Photocopy, ದಾಖಲೆಗಳ ಸ್ಕ್ಯಾನಿಂಗ್ ಮಾಡುವುದರಲ್ಲಿ ನಿಷ್ಣಾತರಾಗಿದ್ದಾರೆ. ತಮ್ಮ ಸಹೋದ್ಯೋಗಿಗಳ ಪ್ರೀತಿಯ ಮತ್ತು ಮೆಚ್ಚುಗೆ ಪಡೆದಿರುವ ಕೃಷ್ಣ ಓರ್ವ ಶಿಸ್ತುಬದ್ಧ ಉದ್ಯೋಗಿ. ತಮ್ಮ ತಂದೆಯ ಬಯಕೆ ಮತ್ತು ಪ್ರೋತ್ಸಾಹದಿಂದ ಅವರು ತಮ್ಮ ಎಲ್ಲ ಕೆಲಸಗಳನ್ನು ಸ್ವತಂತ್ರವಾಗಿ ಮಾಡುತ್ತಿದ್ದಾರೆ. ಇದು ಅವರ ಆತ್ಮಸ್ಥೈರ್ಯವನ್ನೂ ಹೆಚ್ಚಿಸಿದೆ.
ಇಂದು ಅವರು ಪೋಷಕರ ಸಹಾಯ ಬಯಸದೇ, ಸ್ವಂತ ಫ್ಲಾಟ್ನಲ್ಲಿ ತಮ್ಮೆಲ್ಲ ಕೆಲಸ, ಕಾರ್ಯಗಳನ್ನು ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಕೃಷ್ಣ ತೇಜ ಅವರ ತಂದೆ ಹರಿ ಬಾಬು ಹಾಗೂ ಸಂಬಂಧಿಕರು, ಸ್ನೇಹಿತರ ಜೊತೆಗೂಡಿ ‘ಸಾಯಿ ಕೃಷ್ಣ ತೇಜ ಫೌಂಡೇಷನ್’ ಆರಂಭಿಸಿದ್ದಾರೆ. ಈ ಫೌಂಡೇಷನ್ ಮೂಲಕ ಬುದ್ಧಿಮಾಂದ್ಯ ಮಕ್ಕಳು, ವಿಕಲಾಂಗರಿಗೆ ವೈದ್ಯಕೀಯ ಬೆಂಬಲ, ಜೀವನ ಗುಣಮಟ್ಟ ಸುಧಾರಣೆ, ಸ್ವಾಲಂಬಿ ಬದುಕು ನಡೆಸಲು ಸಹಾಯಕವಾಗುವಂತಹ ಕಾರ್ಯಗಳನ್ನು ನಡೆಸುತ್ತಿದ್ದಾರೆ.
ಹಲವಾರು ಕಷ್ಟ-ಕಾರ್ಪಣ್ಯಗಳ ನಡುವೆ ಜೀವನ ಆರಂಭಿಸಿದ ಕೃಷ್ಣ, ತಮ್ಮ ತಂದೆಯ ಬೆಂಬಲ ಮತ್ತು ಅವರ ಆತ್ಮವಿಶ್ವಾಸದಿಂದ ಬದುಕನ್ನು ಬಹಳ ಸುಂದರ ಮತ್ತು ಸ್ಫೂರ್ತಿದಾಯಕವಾಗಿ ಮಾರ್ಪಡಿಸಿರುವುದು ವಿಶೇಷ. ಇಂದು ಅವರು ಯಾರದೇ ಸಹಾಯವಿಲ್ಲದೇ ಸ್ವಾವಲಂಬಿಯಾಗಿ ತಮ್ಮ ಸ್ವಂತ ಜೀವನವನ್ನು ನಡೆಸುತ್ತಿದ್ದಾರೆ. ಈ ಮೂಲಕ ತಮ್ಮಂತಿರುವ ಹಲವಾರು ಜನರಿಗೆ ಪ್ರೇರಕರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.