ಪೇಶಾವರ: ಭಾರತ, ಅಮೆರಿಕ ಮತ್ತು ಗಲ್ಫ್ ರಾಷ್ಟ್ರಗಳ ಹಿಂದೂ ಯಾತ್ರಾರ್ಥಿಗಳು ವಾಯುವ್ಯ ಪಾಕಿಸ್ತಾನದ 100 ವರ್ಷಗಳಷ್ಟು ಹಳೆಯದಾದ ನವೀಕೃತ ಮಹಾರಾಜ ಪರಮಹಂಸ ಜಿ ದೇವಸ್ಥಾನದಲ್ಲಿ ಶನಿವಾರ ಬಿಗಿ ಭದ್ರತೆಯ ನಡುವೆ ಪ್ರಾರ್ಥನೆ ಸಲ್ಲಿಸಿದರು ಎಂದು ವರದಿಗಳು ತಿಳಿಸಿವೆ.
ಒಂದು ವರ್ಷದ ಹಿಂದೆ ಮೂಲಭೂತವಾದಿ ಇಸ್ಲಾಂ ಧರ್ಮದ ಗುಂಪೊಂದು ಈ ದೇವಾಲಯವನ್ನು ಕೆಡವಿ ಹಾಕಿತ್ತು. ಬಳಿಕ ಇದನ್ನು ಪುನರ್ ನಿರ್ಮಾಣ ಮಾಡಲಾಗಿದೆ.
ಈ ದೇಗುಲಕ್ಕೆ ಭೇಟಿ ನೀಡಿದ ಹಿಂದೂ ನಿಯೋಗದಲ್ಲಿ 200 ಮಂದಿ ಭಾರತೀಯರು, 15 ಮಂದಿ ದುಬೈ ನಿವಾಸಿಗಳು, ಉಳಿದವರು ಯುಎಸ್ ಮತ್ತು ಇತರ ಗಲ್ಫ್ ರಾಜ್ಯಗಳಲ್ಲಿ ನೆಲೆಸಿರುವವರು ಇದ್ದರು ಎಂದು ಹೇಳಲಾಗಿದೆ.
ಖೈಬರ್ ಪಖ್ತುಂಖ್ವಾದ ಕರಕ್ ಜಿಲ್ಲೆಯ ತೇರಿ ಗ್ರಾಮದ ಪರಮಹಂಸ್ ಜಿ ಮಂದಿರ ಮತ್ತು ‘ಸಮಾಧಿ’ 2020 ರಲ್ಲಿ ಕೆಡವಲ್ಪಟ್ಟಿತ್ತು. ಇದಕ್ಕೆ ಜಾಗತಿಕ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿತ್ತು. ಪಾಕಿಸ್ಥಾನ ಇದರಿಂದ ಮುಜುಗರಕ್ಕೆ ಒಳಪಡಬೇಕಾಯಿತು. ಬಳಿಕ ಇದನ್ನು ಪುನರ್ ನಿರ್ಮಾಣ ಮಾಡಲಾಯಿತು.
ಭಾರತೀಯ ಯಾತ್ರಾರ್ಥಿಗಳು ಲಾಹೋರ್ ಬಳಿಯ ವಾಘಾ ಗಡಿಯ ಮೂಲಕ ತೆರಳಿದ್ದಾರೆ, ಅಲ್ಲಿಂದ ಅವರನ್ನು ಶಸ್ತ್ರಸಜ್ಜಿತ ಸಿಬ್ಬಂದಿಗಳು ದೇವಾಲಯಕ್ಕೆ ಕರೆದೊಯ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.