ಬಂಟ್ವಾಳ : ವೃದ್ಧಿ ಸಿನಿ ಕ್ರಿಯೇಶನ್ಸ್ ವಗ್ಗ ಲಾಂಛನದಲ್ಲಿ ವಿನಯ ನಾಯಕ್ ಪಚ್ಚಾಜೆ ಮತ್ತು ಸುನೀತಾ ವಿನಯ ನಾಯಕ್ ಅವರಿಂದ ಮುತ್ತಪ್ಪ ರೈ ಪುತ್ತೂರು ಅವರ ಸಹಕಾರದಲ್ಲಿ ನಿರ್ಮಾಣಗೊಳ್ಳುತ್ತಿರುವ ಚೊಚ್ಚಲ ತುಳು ಚಲನಚಿತ್ರ ಪನೊಡಾ ಬೊಡ್ಚಾ ಇದರ ಚಿತ್ರೀಕರಣದ ಶುಭ ಮುಹೂರ್ತ ಶ್ರೀ ಕ್ಷೇತ್ರ ಕಾರಿಂಜದ ಶಿವಪಾರ್ವತಿ ಸನ್ನಿಧಿಯಲ್ಲಿ ರವಿವಾರ ಬೆಳಗ್ಗೆ ಜರಗಿತು.
ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಅವರು ಉದ್ಘಾಟಿಸಿ ಮಾತನಾಡಿ ತುಳು ಚಿತ್ರ ರಂಗ ಇಂದು ಬೆಳೆಯುತಿದ್ದು,ತುಳು ಭಷೆ ಸಂಸ್ಕೃತಿ ಉಳಿವಿಗೆ ತುಳುವರ ಸಹಕಾರ ಆಗತ್ಯವಿದೆ ಎಂದರು. ದೇವಸ್ಥಾನದ ಮುಂಭಾಗದಲ್ಲಿ ನಟ ಶಿವಧ್ವಜ್ ಅವರ ನಟನೆಯ ಮೊದಲ ದೃಶ್ಯಕ್ಕೆ ಆರಂಭ ಫಲಕ ಕ್ಲಾಪ್ ಮಾಡುವ ಮೂಲಕ ತಾ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್ಅವರು ಚಿತ್ರೀಕರಣಕ್ಕೆ ಚಾಲನೆ ನೀಡಿದರು.ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ .ರಮೇಶ್ ನಾಯಕ್ ರಾಯಿ ಅವರು ಕ್ಯಾಮರಾ ಚಾಲನೆ ನೀಡಿದರು.ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ , ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಜರಂಗ ದಳ ಕರ್ನಾಟಕ ಪ್ರಾಂತ್ಯ ಸಂಚಾಲಕ ಶರಣ್ ಪಂಪ್ವೆಲ್, ಶ್ರೀ ಕ್ಷೇತ್ರ ಕಾರಿಂಜದ ಮಾಜಿ ಆಡಳಿತ ಮೊಕ್ತೇಸರ ಪಿ.ಜಿನರಾಜ ಆರಿಗ, ಕಾವಳಪಡೂರು ಗ್ರಾ.ಪಂ. ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ, ಜಿ.ಪಂ.ಸದಸ್ಯೆ ಗಿರಿಜಾ, ಸಹ ನಿರ್ಮಾಪಕಿ ಸುನಿತಾ ವಿನಯ ನಾಯಕ್,ಚಾಲಿಪೋಲಿಲು ತುಳು ಚಲನಚಿತ್ರದ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ, ಎಕ್ಕ-ಸಕ್ಕ ತುಳು ಚಲನಚಿತ್ರದ ನಿರ್ಮಾಪಕ ಲಯನ್ ಕಿಶೋರ್ ಡಿ. ಶೆಟ್ಟಿ , ಮಂಗಳೂರು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ,ಮಂಗಳೂರು ಉದ್ಯಮಿ ರಮೇಶ್ ಅವರು ಚಿತ್ರಕ್ಕೆ ಶುಭ ಹಾರೈಸಿದರು.ದೇವಸ್ಥಾನದ ಆಡಳಿತಾಧಿಕಾರಿ ವೇದವ, ಪ್ರಮುಖರಾದ ಕೆ.ಮಾಯಿಲಪ್ಪ ಸಾಲ್ಯಾನ್,ಯಶವಂತ ದೇರಾಜೆ,ಮಾಣಿಕ್ಯ ರಾಜ್ ಜೈನ್,ದಿನೇಶ್ ಅಮ್ಟೂರ್,ಆನಂದ ಶಂಭೂರು,ಸುರೇಶ್ ಶೆಟ್ಟಿ ಸಿದ್ದಕಟ್ಟೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಚಿತ್ರೀಕರಣಚಾಲನೆಗೆ ಮುನ್ನ ಚಿತ್ರತಂಡ ಶಿವ ಪಾರ್ವತಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥನೆ ನಡೆಸಿದರು. ಈಗಾಗಲೆ ಹಲವಾರು ಚಿತ್ರಕ್ಕೆ ತಂತ್ರಜ್ಞರಾಗಿ ದುಡಿದಿರುವ ಮಧು ಸುರತ್ಕಲ್ ಚಿತ್ರ ನಿರ್ದೇಶಿಸಲಿದ್ದಾರೆ. ಶಿವಧ್ವಜ್, ವಿನಯ ಪ್ರಸಾದ್,ಸೀತಾ ಕೋಟೆ,ಶಕುಂತಲಾ,ಇಳಾ ವಿಟ್ಲ ,ನವೀನ್ ಡಿ .ಪಡೀಲ್,ಕಿಶೋರ್ ಡಿ.ಶೆಟ್ಟಿ ,ಸುಂದರ ರೈ ಮಂದಾರ ,ಅರವಿಂದ ಬೋಳಾರ್,ಭೋಜರಾಜ್ ವಾಮಂಜೂರ್,ರಾಘವೇಂದ್ರ ರೈ,ಚೇತನ್ ರೈ ಮಾಣಿ, ಯೋಗೀಶ್ ಆಚಾರ್, ಉಮೇಶ್ ಮಿಜಾರ್, ಗಿರೀಶ್ ಶೆಟ್ಟಿ , ಚಂದ್ರಹಾಸ ಶೆಟ್ಟಿ ಮಾಣಿ,ಸತೀಶ್ ಅಮೀನ್ ಕಲ್ಲಮುಂಡ್ಕೂರು, ಶೋ` ಶೆಟ್ಟಿ ,ಅನಿಶಾ,ರವಿ ಸುರತ್ಕಲ್,ಕುಂಬ್ರ ದುರ್ಗಾ ಪ್ರಸಾದ್ ರೈ ,ಬೇಬಿ ತೀರ್ಥ,ಬೇಬಿ ವೈಭವಿಲಕ್ಷ್ಮಿ ಮತ್ತಿತರರು ಪ್ರಮುಖ ತಾರಾಗಣದಲ್ಲಿದ್ದಾರೆ.
ಸುಂದರ ರೈ ಮಂದಾರ ಅವರ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ಮಾಣ, ಎಚ್ಕೆ ನಯನಾಡು, ವಸಂತ ಅಮೀನ್ ಅವರ ಸಾಹಿತ್ಯವಿದೆ. ಚಂದ್ರಕಾಂತ್ ಶೆಟ್ಟಿ ಸಂಗೀತ ನೀಡಲಿದ್ದಾರೆ. ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದ್ದು ಕೇಶವ ಸುವರ್ಣ ಅವರ ಕಲಾ ನಿರ್ದೇಶನವಿದೆ. ಗಣೇಶ್ ಶೆಟ್ಟಿ ಸುಧೆಕಾರ್, ಚಂದ್ರಹಾಸ ಶೆಟ್ಟಿ , ಎಚ್ಕೆ ನಯನಾಡು ಕಾರ್ಯಕಾರಿ ನಿರ್ಮಾಪಕರಾಗಿದ್ದು ,ರಾಕೇಶ್ ನಿರ್ಮಾಣ ಸಹಾಯಕರಾಗಿದ್ದಾರೆ. ಸಚಿನ್ ಶೆಟ್ಟಿ ಕುಂಬ್ಳೆ ಸಹನಿರ್ದೇಶನ, ಶ್ರೀನಿವಾಸ ಪಿ.ಬಾಬು ಅವರ ಸಂಕಲನವಿದೆ ಎಂದು .ನಿರ್ಮಾಪಕ ವಿನಯ ನಾಯಕ್ ತಿಳಿಸಿದ್ದಾರೆ.ಕಲಾವಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.