ಇಸ್ಲಾಮಾಬಾದ್: ಗಡಿಯಲ್ಲಿ ಕದನವಿರಾಮ ಉಲ್ಲಂಘಿಸಿ ಕಾಲ್ಕೆರೆದು ಜಗಳಕ್ಕೆ ಬರುವ ಪಾಕಿಸ್ಥಾನ ಇದೀಗ ಭಾರತಕ್ಕೇ ಧಮ್ಕಿ ಹಾಕುವ ಸಾಹಸ ಮಾಡಿದೆ.
ಭಾರತ ಪಾಕಿಸ್ಥಾನದ ಮೇಲೆ ಯುದ್ಧ ಸಾರಲು ಮುಂದಾದರೆ ಅದು ದಶಕಗಳ ಕಾಲ ನೆನಪಿಡುವಂತಹ ಪಾಠವನ್ನು ಕಲಿಸಲಿದ್ದೇವೆ ಎಂದು ಅಲ್ಲಿನ ರಕ್ಷಣಾ ಸಚಿವ ಖವಜಾ ಮೊಹಮ್ಮದ್ ಆಸೀಫ್ ತಿಳಿಸಿದ್ದಾನೆ.
ಅಷ್ಟೇ ಅಲ್ಲದೇ ಯಾವುದೇ ಬೆಲೆ ತೆತ್ತಾದರೂ ಪಾಕ್ ಸೇನೆ ತನ್ನ ತಾಯ್ನಾಡಿನ ಪ್ರತಿ ಇಂಚು ಭೂಮಿಯನ್ನು ಕಾಪಾಡಿಕೊಳ್ಳಲಿದೆ, ಭಾರತೀಯ ಸೇನೆಯ ಹೇಡಿತನದ ವರ್ತನೆಗಳು ತಾಯ್ನಾಡನ್ನು ರಕ್ಷಿಸುವ ಪಾಕಿಸ್ಥಾನದ ಗುರಿಯನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ ಎಂದಿದ್ದಾನೆ.
ಪಾಕಿಸ್ಥಾನದಲ್ಲಿ ಭಯೋತ್ಪಾದನ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತಿರುವ, ಗಡಿಯಲ್ಲಿ ಅಪ್ರಚೋದಿತ ದಾಳಿಯ ಮೂಲಕ ಉದ್ವಿಗ್ನ ಪರಿಸ್ಥಿತಿಯನ್ನು ನಿರ್ಮಿಸುತ್ತಿರುವ ಭಾರತದ ಮುಖ ಬಯಲಾಗಿದೆ ಎಂದು ಆಸೀಫ್ ಹೇಳಿಕೊಂಡಿದ್ದಾನೆ.
ಆತನ ಈ ಹೇಳಿಕೆ ಭಾರತದ ತಾಳ್ಮೆಯನ್ನು ಮತ್ತಷ್ಟು ಕೆಣಕಿದೆ. ಈಗಾಗಲೇ ಪಾಕ್ನ ಇಬ್ಬರು ಭಯೋತ್ಪಾದಕರನ್ನು ಭಾರತೀಯ ಸೈನಿಕರು ಬಂಧಿಸಿದ್ದಾರೆ. ಇದಕ್ಕಿಂತ ದೊಡ್ಡ ಸಾಕ್ಷಿ ಪಾಕ್ ವಿರುದ್ಧ ಮತ್ತೊಂದು ಬೇಕಾಗಿಲ್ಲ. ಆದರೂ ಆ ದೇಶದ ರಕ್ಷಣಾ ಮಂತ್ರಿ ಭಾರತದ ವಿರುದ್ಧ ಅಪಪ್ರಚಾರಕ್ಕೆ ಮುಂದಾಗಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.