ನವದೆಹಲಿ: ಇಂದು ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ, ಭಾರತದಲ್ಲಿ ಇದುವರೆಗೆ ಹೊಸ ಕೊರೊನಾವೈರಸ್ ರೂಪಾಂತರದ ಒಮಿಕ್ರಾನ್ ಪ್ರಕರಣ ಪತ್ತೆಯಾಗಿಲ್ಲ ಎಂದು ಹೇಳಿದರು.
ಕಳೆದ ವಾರ, ವಿಶ್ವ ಆರೋಗ್ಯ ಸಂಸ್ಥೆಯು ಈ ರೂಪಾಂತರವನ್ನು ಬಿ.1.1.529 (ಒಮಿಕ್ರಾನ್) ಎಂದು ಹೆಸರಿಸಿ, ‘ಕಳವಳಕಾರಿ ರೂಪಾಂತರ’ ಎಂದು ವರ್ಗೀಕರಿಸಿದೆ. ಅಲ್ಲದೇ ಈ ರೂಪಾಂತರವು ಅತ್ಯಂತ ಹೆಚ್ಚ” ಜಾಗತಿಕ ಅಪಾಯವನ್ನುಂಟು ಮಾಡುತ್ತದೆ ಎಂದು ಹೇಳಿದೆ.
ಒಮಿಕ್ರಾನ್ ಕುರಿತ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು, “ಈ ಹೊಸ ರೂಪಾಂತರವು 14 ದೇಶಗಳಲ್ಲಿ ಕಂಡುಬಂದಿದೆ. ಭಾರತದಲ್ಲಿ ಇನ್ನೂ ಯಾವುದೇ ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿಲ್ಲ. ನಾವು ಸಾಧ್ಯವಿರುವ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ಜೀನೋಮ್ ಸೀಕ್ವೆನ್ಸಿಂಗ್ ಸಹ ಮಾಡುತ್ತಿದ್ದೇವೆ” ಎಂದಿದ್ದಾರೆ.
ಜೀನೋಮ್ ಸೀಕ್ವೆನ್ಸಿಂಗ್ ವಿಜ್ಞಾನಿಗಳಿಗೆ ಕೋವಿಡ್ ಸ್ವ್ಯಾಬ್ ಮಾದರಿಯಿಂದ ವೈರಲ್ ವಸ್ತುಗಳನ್ನು ಪ್ರತ್ಯೇಕಿಸಲು, ಆರ್ಎನ್ಎ ಗುರುತಿಸಲು ಮತ್ತು ಅದರ ಸಂಯೋಜನೆಯನ್ನು ನಿರ್ಧರಿಸಲು ಅನುವು ಮಾಡಿಕೊಡುತ್ತದೆ. ಆದ್ದರಿಂದ, ಒಬ್ಬ ವ್ಯಕ್ತಿಯು ಸೋಂಕಿಗೆ ಒಳಗಾಗಬಹುದಾದ ಕರೋನವೈರಸ್ನ ನಿಖರವಾದ ರೂಪಾಂತರವನ್ನು ಗುರುತಿಸಲು ಸಾಧ್ಯವಾಗುತ್ತದೆ.
ಭಾರತದಲ್ಲಿನ ಸಾಮಾನ್ಯ ಕೋವಿಡ್ -19 ಪರಿಸ್ಥಿತಿಯ ಕುರಿತ ಮಾಹಿತಿ ನೀಡಿದ ಮನ್ಸುಖ್ ಮಾಂಡವಿಯಾ ಅವರು, ‘ಕೋವಿಡ್-19 ನಿಯಂತ್ರಣದಲ್ಲಿದೆ ಆದರೆ ಇನ್ನೂ ಹೋಗಿಲ್ಲ. ದೇಶಾದ್ಯಂತ ಇದುವರೆಗೆ 124 ಕೋಟಿ ಲಸಿಕೆ ಡೋಸ್ಗಳನ್ನು ನೀಡಲಾಗಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.