ನವದೆಹಲಿ: ಲಡಾಖ್ನಲ್ಲಿ ವಿಶ್ವದ ಅತಿ ಎತ್ತರದ ಮೋಟಾರು ರಸ್ತೆಯನ್ನು ನಿರ್ಮಿಸಿದ್ದಕ್ಕಾಗಿ BRO (ಬಾರ್ಡರ್ ರೋಡ್ಸ್ ಆರ್ಗನೈಝೇಶನ್) ಗಿನ್ನೆಸ್ ವಿಶ್ವ ದಾಖಲೆಯ ಪ್ರಮಾಣಪತ್ರವನ್ನು ಸ್ವೀಕರಿಸಿದೆ.
ಬಾರ್ಡರ್ ರೋಡ್ ಸಂಸ್ಥೆಯು ಉಮ್ಲಿಂಗ್ಲಾ ಪಾಸ್ನಲ್ಲಿ 19,024 ಅಡಿ ಎತ್ತರದ ವಿಶ್ವದ ಅತಿ ಎತ್ತರದ ಮೋಟಾರು ರಸ್ತೆಯನ್ನು ನಿರ್ಮಿಸಿದ್ದಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆಗಳ ಮನ್ನಣೆಯನ್ನು ಗಳಿಸಿದೆ ಎಂದು ಮೂಲಗಳು ತಿಳಿಸಿವೆ
ವರ್ಚುವಲ್ ಸಮಾರಂಭದಲ್ಲಿ, ಯುನೈಟೆಡ್ ಕಿಂಗ್ಡಂ ಮೂಲದ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ನ ಅಧಿಕೃತ ತೀರ್ಪುಗಾರ ರಿಷಿ ನಾಥ್ ಅವರು ವಿಶ್ವದ ಅತಿ ಎತ್ತರದ ರಸ್ತೆಯನ್ನು ನಿರ್ಮಿಸಿದ BRO ನ ಗಮನಾರ್ಹ ಸಾಧನೆಯನ್ನು ಅನುಮೋದಿಸಿದರು.
ನಂತರ ಡೈರೆಕ್ಟರ್ ಜನರಲ್ ಬಾರ್ಡರ್ ರೋಡ್ಸ್ (ಡಿಜಿಬಿಆರ್) ಲೆಫ್ಟಿನೆಂಟ್ ಜನರಲ್ ರಾಜೀವ್ ಚೌಧರಿ ಅವರು ನವೆಂಬರ್ 16 ರಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಮಾಣಪತ್ರವನ್ನು ಪಡೆದರು.
ಈ ಸಂದರ್ಭದಲ್ಲಿ ಚೌಧರಿ ಅವರು ಉಮ್ಲಿಂಗ್ಲಾ ಪಾಸ್ಗೆ ರಸ್ತೆ ನಿರ್ಮಾಣದ ಸಮಯದಲ್ಲಿ ಎದುರಿಸಿದ ಸವಾಲುಗಳ ಕುರಿತು ಮಾತನಾಡಿದರು. ಚಳಿಗಾಲದಲ್ಲಿ ತಾಪಮಾನವು -40 ಡಿಗ್ರಿಗಳಿಗೆ ಇಳಿಯುವ ಮತ್ತು ಆಮ್ಲಜನಕದ ಮಟ್ಟವು ಸಾಮಾನ್ಯಕ್ಕಿಂತ ಶೇ. 50 ರಷ್ಟು ಕಡಿಮೆ ಇರುವ ಅತ್ಯಂತ ಕಠಿಣ ಭೂಪ್ರದೇಶದಲ್ಲಿ ಮಾನವ ಸಾಮರ್ಥ್ಯ ಮತ್ತು ಯಂತ್ರಗಳ ಪರಿಣಾಮಕಾರಿತ್ವವನ್ನು ಪರೀಕ್ಷೆಗೊಡ್ಡಿ ರಸ್ತೆ ನಿರ್ಮಾಣ ಮಾಡಲಾಯಿತು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.