ನವದೆಹಲಿ: ಚೀನಾದಲ್ಲಿ ಇತ್ತೀಚಿಗೆ ಸಂಭವಿಸಿದ ಇಕ್ವಿಟಿ ಮತ್ತು ಕರೆನ್ಸಿ ಮಾರ್ಕೆಟ್ ಪತನದಿಂದಾಗಿ ಭಾರತ ಚೀನಾವನ್ನು ಓವರ್ಟೇಕ್ ಮಾಡಿ ವಿಶ್ವ ಆರ್ಥಿಕತೆಯ ಚಾಲಕನಾಗಿ ಹೊರಹೊಮ್ಮಬಹುದು ಎಂದು ವಿದೇಶಿ ಮಾಧ್ಯಮಗಳು ಅಭಿಪ್ರಾಯಿಸಿವೆ.
‘ಎಲ್ಲಾ ದೇಶಗಳಿಗಿಂತಲೂ ಭಾರತದಲ್ಲಿ ಬೇಡಿಕೆಯ ಪ್ರಮಾಣ ಹೆಚ್ಚಿದೆ, ಇದರಿಂದಾಗಿ ಕಂಪನಿಗಳು ಇಲ್ಲಿ ಉತ್ಪಾದಿಸಲು ಉತ್ಸುಹುಕತೆ ತೋರಿಸುತ್ತಿವೆ. ಇದು 1.2 ಬಿಲಿಯನ್ ಜನರಿರುವ ದೇಶದಲ್ಲಿ ಕೈಕಾರಿಕ ಕ್ರಾಂತಿಗೆ ಅನುವು ಮಾಡಿಕೊಡಲಿದೆ ಎಂಬ ಭರವಸೆ ಅಲ್ಲಿನ ಸರ್ಕಾರಕ್ಕೆ ಇದೆ’ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ತಿಳಿಸಿದೆ.
ಒಂದು ವರ್ಷದಲ್ಲಿ ಭಾರತದ ಪ್ರಗತಿಗೆ ದೇಶೀಯ ಬೇಡಿಕೆ ಮತ್ತಷ್ಟು ಉತ್ತೇಜನ ನೀಡಿದೆ. ಆದರೆ ತನ್ನಲ್ಲಿ ಉತ್ಪಾದಿಸಿ ವಿದೇಶದಲ್ಲಿ ಮಾರಾಟ ಮಾಡುವ ಚೀನಾದಲ್ಲಿ ನಡೆದಿಲ್ಲ ಎಂದು ಪತ್ರಿಕೆ ಅಭಿಪ್ರಾಯಿಸಿದೆ.
ಭಾರತದ ಔಟ್ಪುಟ್ ಸಣ್ಣದಾದರೂ ಅಲ್ಲಿನ ಅಪಾರ ಜನಸಂಖ್ಯೆ ಬಳಕೆಗಿಂತಲೂ ಜಾಸ್ತಿ ಖರೀದಿಯಲ್ಲಿ ತೊಡಗಿದೆ. ಇದು ಪ್ರಗತಿಯ ಹಸಿವಿರುವ ಕಂಪನಿಗಳನ್ನು, ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಚೀನಾದ ಕರೆನ್ಸಿ ಮಾರುಕಟ್ಟೆ ಪತನವಾಗಿದ್ದು, ಭಾರತದ ಪ್ರಗತಿಗೆ ಪೂರಕವಾಗಲಿದೆ ಎಂದು ಅದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.